ಭಾರತದಲ್ಲಿ Avatar ವೈಶಿಷ್ಟ್ಯ ಬಿಡುಗಡೆಗೊಳಿಸಿದ Facebook.. ಹೇಗೆ ಬಳಸಬೇಕು?

ಸಾಮಾಜಿಕ ಜಾಲತಾಣದ ದೈತ್ಯ ಕಂಪನಿ ಫೇಸ್‌ಬುಕ್ ಭಾರತದಲ್ಲಿ ತನ್ನ Avatar ವೈಶಿಷ್ಟ್ಯ ಬಿಡುಗಡೆಗೊಳಿಸಿದೆ.

Last Updated : Jun 30, 2020, 06:05 PM IST
ಭಾರತದಲ್ಲಿ Avatar ವೈಶಿಷ್ಟ್ಯ ಬಿಡುಗಡೆಗೊಳಿಸಿದ Facebook.. ಹೇಗೆ ಬಳಸಬೇಕು? title=

ನವದೆಹಲಿ: ಸಾಮಾಜಿಕ ಜಾಲತಾಣದ ದೈತ್ಯ ಕಂಪನಿ ಫೇಸ್‌ಬುಕ್ ಭಾರತದಲ್ಲಿ ತನ್ನ Avatar ವೈಶಿಷ್ಟ್ಯ ಬಿಡುಗಡೆಗೊಳಿಸಿದೆ. ಇದರ ಅಡಿಯಲ್ಲಿ, ಫೇಸ್‌ಬುಕ್ ಬಳಕೆದಾರರು ತಮ್ಮಂತೆ ಕಾಣುವ ವರ್ಚುವಲ್ ಅವತಾರಗಳನ್ನು ರಚಿಸಬಹುದು. ಟಿಕ್‌ಟಾಕ್ ಸೇರಿದಂತೆ 59 ಚೀನೀ ಆ್ಯಪ್‌ಗಳನ್ನು ದೇಶದಲ್ಲಿ ನಿಷೇಧಿಸಿರುವ ಸಮಯದಲ್ಲಿ ಫೇಸ್‌ಬುಕ್ ಈ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿರುವುದು ಇಲ್ಲಿ ಉಲ್ಲೇಖನೀಯ.

ಫೇಸ್‌ಬುಕ್ ಮೂಲಕ ರಚಿಸಲಾದ ಈ ಅವತಾರ್ ಗಳನ್ನೂ ನೀವು ಚಾಟ್‌ಗಳಲ್ಲಿ ಮತ್ತು ಕಾಮೆಂಟ್‌ಗಳಲ್ಲಿ ಸ್ಟಿಕ್ಕರ್‌ಗಳಾಗಿ ಹಂಚಿಕೊಳ್ಳಬಹುದು ಹಾಗೂ ಇದನ್ನು ಇದೀಗ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. ಏಕೆಂದರೆ ಲಾಕ್‌ಡೌನ್‌ನಿಂದಾಗಿ ಸಾಮಾಜಿಕ ಸಂವಹನಗಳು ಹೆಚ್ಚಾಗುತ್ತಿವೆ ಎಂದು ಕಂಪನಿ ಹೇಳಿದೆ.

ಫೇಸ್‌ಬುಕ್‌ಗಾಗಿ ಭಾರತವು ವಿಶ್ವದ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ ಮತ್ತು ಕಂಪನಿಯು ಈ ವೈಶಿಷ್ಟ್ಯವನ್ನು ಭಾರತದಲ್ಲಿ ಬಿಡುಗಡೆ ಮಾಡಿ ಅವಕಾಶದ ಲಾಭವನ್ನು ಪಡೆದುಕೊಂಡಿದೆ. ಫೇಸ್‌ಬುಕ್ ಅವತಾರ್‌ನಲ್ಲಿ ಭಾರತದಲ್ಲಿನ ಬಳಕೆದಾರರಿಗಾಗಿ ಕಸ್ಟಮೈಸ್ ಮಾಡಲಾದ ವಿಭಿನ್ನ ಮುಖಗಳು, ಕೇಶವಿನ್ಯಾಸ ಮತ್ತು ಬಟ್ಟೆಗಳಿಗೆ ಆಯ್ಕೆಗಳಿರಲಿವೆ.

ಫೇಸ್‌ಬುಕ್ ಸ್ಟೋರಿಯಂತೆ, ಈ ವೈಶಿಷ್ಟ್ಯವು ಸ್ನ್ಯಾಪ್‌ಚಾಟ್‌ ನ ವೈಶಿಷ್ಟ್ಯದಂತೆ ಕಾರ್ಯನಿರ್ವಹಿಸಲಿದೆ. ಸ್ನ್ಯಾಪ್‌ಚಾಟ್‌ನಲ್ಲಿ ಬಿಟ್‌ಮೊಜಿ ಎಂಬ ವೈಶಿಷ್ಟ್ಯವಿದೆ, ಇದರ ಅಡಿಯಲ್ಲಿ ಸ್ನ್ಯಾಪ್‌ಚಾಟ್ ಬಳಕೆದಾರರು ಅವತಾರ್ ರಚಿಸಬಹುದು.

ಫೇಸ್‌ಬುಕ್‌ನ ಈ ವೈಶಿಷ್ಟ್ಯವನ್ನು ಬಳಸಿಕೊಂಡು, ನೀವು ನಿಮ್ಮ ಅವತಾರವನ್ನು ರಚಿಸಿ ಅದನ್ನು ನೀವು ಎಲ್ಲಿಯಾದರೂ ಬಳಕೆ ಮಾಡಬಹುದಾಗಿದೆ. ನೀವು ಅದನ್ನು ವಾಟ್ಸಾಪ್‌ನಲ್ಲಿ ಸ್ಟಿಕ್ಕರ್‌ಗಳಾಗಿ ಕಳುಹಿಸಬಹುದು ಅಥವಾ ನೀವು ಅದನ್ನು ನಿಮ್ಮ ಪ್ರೊಫೈಲ್ ಫೋಟೋ ಆಗಿ ಕೂಡ ಬಳಕೆ ಮಾಡಬಹುದು.

Facebook Avatar ಹೇಗೆ ರಚಿಸಬೇಕು?
- ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಫೇಸ್‌ಬುಕ್ ಅಥವಾ ಮೆಸೆಂಜರ್ ತೆರೆಯಿರಿ. ಕಾಮೆಂಟ್ ಆಯ್ಕೆಗೆ ಹೋಗುವ ಮೂಲಕ ನೀವು Smiley ಬಟನ್ ಟ್ಯಾಪ್ ಮಾಡಬೇಕು. ಇದರ ನಂತರ, ಸ್ಟಿಕ್ಕರ್‌ಗಳ ಟ್ಯಾಬ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ.
- ಇಲ್ಲಿ ನೀವು Create YourAvatar ಕಾಣಬಹುದು. ಇಲ್ಲಿಂದ ನಿಮ್ಮ ವರ್ಚುವಲ್ ಅವತಾರವನ್ನು ನೀವು ತಯಾರಿಸಬಹುದು. ಅನೇಕ ರೀತಿಯ ಕಷ್ಟಮೈಸೇಶನ್ ಆಯ್ಕೆಗಳನ್ನು ಇದರಲ್ಲಿ ನೀಡಲಾಗಿದೆ.
- ಚರ್ಮದ ಬಣ್ಣ, ಕೂದಲಿನ ಶೈಲಿ ಮತ್ತು ಧರಿಸುವ ಬಟ್ಟೆಗಳಿಂದ ಹಿಡಿದು ಅನೇಕ ಕಷ್ಟಮೈಸೇಶನ್ ಆಯ್ಕೆಗಳಿವೆ. ಅವತಾರ್ ಸಿದ್ಧವಾದ ನಂತರ, ನೀವು ಸೇವ್ ಆಯ್ಕೆಯನ್ನು ಹೊಂದಿರುತ್ತೀರಿ. ನೀವು ಬಯಸಿದರೆ, ನೀವು ಅದನ್ನು ಫೇಸ್ಬುಕ್ನಲ್ಲಿ ಸಹ ಹಂಚಿಕೊಳ್ಳಬಹುದು.
- ಪ್ರಸ್ತುತ, ಫೇಸ್ಬುಕ್ ಈ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಬಿಡುಗಡೆ ಮಾಡಿದೆ, ಆದರೆ ಮುಂಬರುವ ದಿನಗಳಲ್ಲಿ ಈ ವೈಶಿಷ್ಟ್ಯವನ್ನು ಐಫೋನ್ ಬಳಕೆದಾರರಿಗೂ ಪರಿಚಯಿಸಲಾಗುವುದು ಎಂದು ಹೇಳಿದೆ.

Trending News