Farmers Protest: ರೈತರ ಜೊತೆ ಅಮಿತ್ ಶಾ ನಡೆಸಿದ ಮಾತುಕತೆ ವಿಫಲ, ಇಂದಿನ ಅಧಿಕೃತ ಸಭೆಗೆ ರೈತರ ಬಹಿಷ್ಕಾರ

ಅಮಿತ್ ಶಾ ರೈತ ಸಂಘಟನೆಗಳ 13 ಪ್ರತಿನಿಧಿಗಳ ಜೊತೆ ನಡೆಸಿದ ‘ಅನೌಪಚಾರಿಕ ಮಾತುಕತೆ’ ವಿಫಲವಾಗಿರುವ ಹಿನ್ನೆಲೆಯಲ್ಲಿ ಬುಧವಾರ ಕೇಂದ್ರ ಸರ್ಕಾರ ರೈತ ಪ್ರತಿನಿಧಿಗಳೊಂದಿಗೆ ಅಧಿಕೃತವಾಗಿ ಕರೆದಿದ್ದ 6ನೇ ಸಭೆಯನ್ನು ರೈತರು ಬಹಿಷ್ಕರಿಸಿದ್ದಾರೆ. 

Written by - Yashaswini V | Last Updated : Dec 9, 2020, 01:50 PM IST
  • ಅಮಿತ್ ಶಾ ಜೊತೆ ನಡೆಸಿದ ‘ಅನೌಪಚಾರಿಕ ಮಾತುಕತೆ’ ವಿಫಲ
  • ಕೇಂದ್ರ ಸರ್ಕಾರ ರೈತ ಪ್ರತಿನಿಧಿಗಳೊಂದಿಗೆ ಅಧಿಕೃತವಾಗಿ ಕರೆದಿದ್ದ 6ನೇ ಸಭೆಯನ್ನು ಬಹಿಷ್ಕರಿಸಿದ ರೈತರು
  • ಇಂದು ಎಲ್ಲಾ ರೈತ ಸಂಘಟನೆಗಳ ಜೊತೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ನಿರ್ಧಾರ
Farmers Protest: ರೈತರ ಜೊತೆ ಅಮಿತ್ ಶಾ ನಡೆಸಿದ ಮಾತುಕತೆ ವಿಫಲ, ಇಂದಿನ ಅಧಿಕೃತ ಸಭೆಗೆ ರೈತರ ಬಹಿಷ್ಕಾರ

ನವದೆಹಲಿ: ತಮ್ಮ ಪಾಲಿಗೆ ಮರಣಶಾಸನವಾಗಿರುವ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುಂತೆ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ರೈತ ಸಂಘಟನೆಗಳ 13 ಪ್ರತಿನಿಧಿಗಳ ಜೊತೆ ಮಂಗಳವಾರ ನಡೆಸಿದ ‘ಅನೌಪಚಾರಿಕ ಮಾತುಕತೆ’ ವಿಫಲವಾಗಿದೆ.

ಅಮಿತ್ ಶಾ (Amit Shah) ರೈತ ಸಂಘಟನೆಗಳ 13 ಪ್ರತಿನಿಧಿಗಳ ಜೊತೆ ನಡೆಸಿದ ‘ಅನೌಪಚಾರಿಕ ಮಾತುಕತೆ’ ವಿಫಲವಾಗಿರುವ ಹಿನ್ನೆಲೆಯಲ್ಲಿ ಬುಧವಾರ ಕೇಂದ್ರ ಸರ್ಕಾರ ರೈತ ಪ್ರತಿನಿಧಿಗಳೊಂದಿಗೆ ಅಧಿಕೃತವಾಗಿ ಕರೆದಿದ್ದ 6ನೇ ಸಭೆಯನ್ನು ರೈತರು ಬಹಿಷ್ಕರಿಸಿದ್ದಾರೆ. 

ಇದಕ್ಕೂ ಮೊದಲು ರೈತ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ 5 ಸಭೆಗಳಾಗಿದ್ದು 5 ಸಭೆಗಳೂ ವಿಫಲವಾಗಿದ್ದವು. ಡಿಸೆಂಬರ್ 9ರಂದು 6ನೇ ಸಭೆ ಕರೆಯಲಾಗಿತ್ತು. ಆದರೆ ಅಮಿತ್ ಶಾ ಜೊತೆ ನಡೆಸಿದ ಸಭೆಯಲ್ಲಿ ಕೇಂದ್ರ ಸರ್ಕಾರ ರೈತರಿಗೆ  ಮರಣಶಾಸನವಾಗಿರುವ ವಿವಾದಾತ್ಮಕ ಕೃಷಿ ಕಾನೂನುಗಳನ್ನು (Agriculture laws) ಹಿಂಪಡೆಯಲು ಸಿದ್ದವಿಲ್ಲ ಎಂಬುದು ಖಾತರಿಯಾಗುತ್ತಿದ್ದಂತೆ ರೈತರು ಕೇಂದ್ರ ಸರ್ಕಾರದ 6ನೇ ಅಧಿಕೃತ ಸಭೆಯನ್ನು ಬಹಿಷ್ಕರಿಸಿದ್ದಾರೆ ಎಂದು‌ ತಿಳಿದು ಬಂದಿದೆ.

ಈವರೆಗೆ ನಡೆದ 5 ಸಭೆಗಳಲ್ಲಿ ದೇಶದ ವಿವಿಧ ಭಾಗದ ‌35 ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ  ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ವಾಣಿಜ್ಯ ವ್ಯವಹಾರಗಳ ಖಾತೆಯ ಸಂಪುಟ ಸಚಿವ ಪಿಯೂಷ್ ಗೋಯಲ್, ರಾಜ್ಯ ಖಾತೆ ಸಚಿವ ಸೋಮ್ ಪ್ರಕಾಶ್ ಭಾಗವಹಿಸಿದ್ದರು.

ಕೈಗೆ ಬಂದ ಅಲ್ಪಸ್ವಲ್ಪ ಬೆಳೆಗೂ ಸರ್ಕಾರ ನ್ಯಾಯಯುತ ಬೆಲೆ ಕೊಡಿಸಲ್ಲ ಅಂತಾದರೆ ರೈತರಿಗೆ ಯಾರು ದಿಕ್ಕು?

ಪ್ರತ್ಯೇಕ ಸಭೆ ನಡೆಸಲಿರುವ ರೈತರು :
ಅಮಿತ್ ಶಾ ಜೊತೆ ನಡೆಸಿದ ‘ಅನೌಪಚಾರಿಕ ಮಾತುಕತೆ’ ವಿಫಲವಾಗುತ್ತಿದ್ದಂತೆ ಕೇಂದ್ರ ಸರ್ಕಾರ ರೈತ ಪ್ರತಿನಿಧಿಗಳೊಂದಿಗೆ ಅಧಿಕೃತವಾಗಿ ಕರೆದಿದ್ದ 6ನೇ ಸಭೆಯನ್ನು ರೈತರು (Farmers) ಬಹಿಷ್ಕರಿಸಿದರಲ್ಲದೆ ಇಂದು ತೀವ್ರವಾಗಿ ಪ್ರತಿಭಟನೆ ನಡೆಯುತ್ತಿರುವ ದೆಹಲಿಯ ಸಿಂಘು ಗಡಿಯಲ್ಲಿ ಎಲ್ಲಾ ರೈತ ಸಂಘಟನೆಗಳ ಜೊತೆ ಸೇರಿ ಮಾತುಕತೆ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ.

Bharat Bandh: ರೈತರನ್ನು ಬೆಂಬಲಿಸಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ

ಇಂದು ಎಲ್ಲಾ ರೈತ ಸಂಘಟನೆಗಳ ಜೊತೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು. ಈಗಾಗಲೇ ದೆಹಲಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಧರಣಿ, ದೇಶಾದ್ಯಂತ ಹೋರಾಟ ಹಾಗೂ ಭಾರತ್ ಬಂದ್ ನಡೆಸಲಾಗಿತ್ತು.

More Stories

Trending News