ಅಪ್ರಾಪ್ತ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ

ತಂದೆಯೋರ್ವ ಕಳೆದ ಆರು ತಿಂಗಳ ಕಾಲ ಮಗಳ ಮೇಲೆ ಅತ್ಯಾಚಾರ ನಡೆಸಿರುವ ಹೇಯ ಘಟನೆ ಉತ್ತರ ಪ್ರದೇಶದ ಮುಜಾಫರಪುರ ಜಿಲ್ಲೆಯ ಬುದಾನಾ ನಗರದಲ್ಲಿ ನಡೆದಿದೆ. 

Updated: Sep 14, 2018 , 01:23 PM IST
ಅಪ್ರಾಪ್ತ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ

ಮುಜಾಫರಪುರ: ಅಪ್ರಾಪ್ತ ಪುತ್ರಿಯ ಮೇಲೆ ತಂದೆಯೋರ್ವ ಕಳೆದ ಆರು ತಿಂಗಳ ಕಾಲ ಅತ್ಯಾಚಾರ ನಡೆಸಿರುವ ಹೇಯ ಘಟನೆ ಉತ್ತರ ಪ್ರದೇಶದ ಮುಜಾಫರಪುರ ಜಿಲ್ಲೆಯ ಬುದಾನಾ ನಗರದಲ್ಲಿ ನಡೆದಿದೆ. 

ಈ ವಿಚಾರ ತಾಯಿಯ ಗಮನಕ್ಕೆ ಬಂದ ಕೂಡಲೇ ಆಕೆ ಇದನ್ನು ವಿರೋಧಿಸಿ ಪೊಲೀಸರಿಗೆ ಮಾಹಿತಿ ನೀಡುವುದಾಗಿ ಹೇಳಿದ್ದಾಳೆ. ಆದರೆ ಈ ವಿಚಾರವನ್ನು ಬಹಿರಂಗಗೊಳಿಸದಂತೆ ಆತ, ತಾಯಿ ಮತ್ತು ಮಗಳಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಆದರೂ ಇದಕ್ಕೆ ಅಂಜದ ತಾಯಿ ಮತ್ತು ಮಗಳು ಪೋಲಿಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಈ ಸಂಬಂಧ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆರೋಪಿ ತಂದೆಯನ್ನು ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಲು ಪೋಲಿಸ್ ಇಲಾಖೆ ಮುಂದಾಗಿದೆ ಎಂದು ಪೋಲಿಸ್ ಅಧೀಕ್ಷಕ ಓಂವೀರ್ ಸಿಂಗ್ ಹೇಳಿದ್ದಾರೆ.