ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮನೆಗೆ ಬೆಂಕಿ!

    

Updated: Jun 13, 2018 , 04:44 PM IST
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮನೆಗೆ ಬೆಂಕಿ!

ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ವಾಸವಿರುವ ಮುಂಬೈನ ಪ್ರಭಾವತಿ ಪ್ರದೇಶದಲ್ಲಿರುವ  ವೊರ್ಲಿಯ ಕಟ್ಟಡದ 33 ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

ಕಟ್ಟಡದ ಬಿ ವಿಭಾಗದ ಮೇಲಿನ ಎರಡು ಅಂತಸ್ತಿಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಸಿಕೊಂಡ ಹಿನ್ನಲೆಯಲ್ಲಿ ದಟ್ಟ ಹೊಗೆ ಮುಗಿಲೆತ್ತರಕ್ಕೆ ಮುಟ್ಟಿದೆ.ಎಂದು ಹೇಳಲಾಗಿದೆ ಅಲ್ಲದೆ ಈ ಕಟ್ಟಡದ 26 ಅಂತಸ್ತಿನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.

ಬೆಂಕಿ ಹತ್ತಿದ ಸಂದರ್ಭದಲ್ಲಿ ಸುತ್ತಲಿನ ಜನರಲ್ಲಿ  ಆತಂಕದ ವಾತಾವರಣ ಉಂಟು ಮಾಡಿತ್ತು ಎನ್ನಲಾಗಿದೆ. ಈ ವಿಚಾರ ತಿಳಿದ ನಂತರ ಆರು ಫೈರ್ ಇಂಜನಿಯರ್ ,ಐದು ಟ್ಯಾಂಕರ್ ಮತ್ತು ಅಂಬುಲಾನ್ಸ್ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದವು ಎಂದು ತಿಳಿದುಬಂದಿದೆ.

ಆದರೆ ಇವರೆಗೂ ಗಾಯಗೊಂಡವರು ಸಂಖ್ಯೆಯ ಬಗ್ಗೆ ಯಾವುದೇ ರೀತಿಯ ಮಾಹಿತಿ ದೊರೆತಿಲ್ಲ ಎಂದು ಹೇಳಲಾಗಿದೆ.