Pahalgam Terror Attack : ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತದಲ್ಲಿರುವ ಅನೇಕ ಪಾಕಿಸ್ತಾನಿ ಜನರು ಬೆಳಕಿಗೆ ಬಂದಿದ್ದಾರೆ. ಆದರೆ ಈ ಪೈಕಿ ಬಹುತೇಕ ಮಂದಿ ಮತ್ತೆ ಪಾಕಿಸ್ತಾನಕ್ಕೆ ಮರಳಲು ಬಯಸುತ್ತಿಲ್ಲ. ಇಂಥವರಲ್ಲಿ ಒಬ್ಬ ದಬಿಯಾ ರಾಮ್. ಇವರು ಒಂದು ಕಾಲದಲ್ಲಿ ಪಾಕಿಸ್ತಾನದಲ್ಲಿ ಸಂಸದರಾಗಿದ್ದರು. ಆದರೆ ಪ್ರಸ್ತುತ ಅವರು ಭಾರತದಲ್ಲಿ ಕುಲ್ಫಿ ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ.
ಬೆನಜೀರ್ ಮುಟ್ಟೋ ಸರ್ಕಾರದಲ್ಲಿ ಸಂಸದ :
ಪಾಕಿಸ್ತಾನದ ಮಾಜಿ ಸಂಸದ ದಬಿಯಾ ರಾಮ್ ಈಗ ಭಾರತದ ಹರಿಯಾಣದಲ್ಲಿ ಕುಲ್ಫಿ ಮತ್ತು ಐಸ್ ಕ್ರೀಮ್ ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಪಾಕಿಸ್ತಾನದ ಬೆನಜೀರ್ ಭುಟ್ಟೋ ಸರ್ಕಾರದಲ್ಲಿ ಸಂಸದರಾಗಿದ್ದ ದಬಯಾ ರಾಮ್ 2000ನೇ ಇಸವಿಯಲ್ಲಿ ತಮ್ಮ ಕುಟುಂಬದೊಂದಿಗೆ ಭಾರತಕ್ಕೆ ಬಂದರು. ಅಂದಿನಿಂದ, ಕಳೆದ 25 ವರ್ಷಗಳಿಂದ, ಅವರು ಭಾರತೀಯ ಪೌರತ್ವ ಪಡೆಯುವ ಮೂಲಕ ಆಶಯ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಪತಂಜಲಿಯ ಗ್ರಾಹಕರ ಕಥೆಗಳು ಆಯುರ್ವೇದ ಮತ್ತು ಸ್ವಾಸ್ಥ್ಯದ ನಿಜವಾದ ಶಕ್ತಿಯನ್ನು ಹೇಗೆ ಎತ್ತಿ ತೋರಿಸುತ್ತವೆ?
ಪಾಕಿಸ್ತಾನದಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ ದಬಿಯಾ ರಾಮ್ :
ಪಾಕಿಸ್ತಾನದಲ್ಲಿ ಹಿಂದೂಗಳ ಸ್ಥಿತಿ ತುಂಬಾ ಕೆಟ್ಟದಾಗಿತ್ತು ಎನ್ನುವುದು ದಬಿಯಾ ರಾಮ್ ಹೇಳಿಕೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಕುಟುಂಬದೊಂದಿಗೆ ಭಾರತಕ್ಕೆ ಬರಲು ನಿರ್ಧರಿಸಿದರು. ಆರಂಭದಲ್ಲಿ ಅವರು ಒಂದು ತಿಂಗಳ ವೀಸಾದ ಮೇಲೆ ಭಾರತಕ್ಕೆ ಬಂದರು. ಕಾಲಕ್ರಮೇಣ ಅವರು ತಮ್ಮ ವೀಸಾವನ್ನು ಅರ್ಧ ವಾರ್ಷಿಕವಾಗಿ, ನಂತರ ಒಂದು ವರ್ಷಕ್ಕೆ ಮತ್ತು ನಂತರ ಐದು ವರ್ಷಗಳವರೆಗೆ ವಿಸ್ತರಿಸಿದರು. ಈಗ ಅವರ ಕುಟುಂಬದಲ್ಲಿ 34 ಸದಸ್ಯರಿದ್ದು, ಅವರಲ್ಲಿ ಆರು ಮಂದಿ ಭಾರತೀಯ ಪೌರತ್ವವನ್ನು ಪಡೆದಿದ್ದಾರೆ. ಉಳಿದ 28 ಸದಸ್ಯರು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅನುಮೋದನೆಗಾಗಿ ಕಾಯುತ್ತಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಮಾಜಿ ಸಂಸದ ದಬಿಯಾ ರಾಮ್ ಮತ್ತು ಅವರ ಕುಟುಂಬ ಸದಸ್ಯರು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಭಯೋತ್ಪಾದಕರ ಮನೆಗಳಿಗೆ ನುಗ್ಗಿ ಅವರನ್ನು ಕೊಲ್ಲುವ ಸಮಯ ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಪತಂಜಲಿಯ ನೈಸರ್ಗಿಕ ಉತ್ಪನ್ನಗಳು ಜನರ ಆರೋಗ್ಯ ಮತ್ತು ಜೀವನಶೈಲಿಯನ್ನು ಹೇಗೆ ಸುಧಾರಿಸಿವೆ?
ಪಾಕಿಸ್ತಾನದಲ್ಲಿ ಸಂಸದರಂತಹ ದೊಡ್ಡ ಹುದ್ದೆಯನ್ನು ಹೊಂದಿದ್ದರೂ, ದಬಿಯಾ ರಾಮ್ ಕುಲ್ಫಿ ಮಾರಾಟ ಮಾಡುವ ಮೂಲಕ
ಬದುಕು ಸಾಗಿಸುತ್ತಿದ್ದಾರೆ. ಅವರು ಹರಿಯಾಣದ ಫತೇಹಾಬಾದ್‌ನಲ್ಲಿ ಕುಲ್ಫಿ ಮತ್ತು ಐಸ್ ಕ್ರೀಮ್ ಮಾರುತ್ತಾರೆ. ಸ್ಥಳೀಯ ಸಮುದಾಯವು ತಮ್ಮನ್ನು ಸಂಪೂರ್ಣವಾಗಿ ಬೆಂಬಲಿಸಿದ್ದು, ತಮ್ಮ ಕುಟುಂಬ ಇಲ್ಲಿ ಶಾಂತಿಯುತವಾಗಿ ಬದುಕಲು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಇಲ್ಲಿ ಕುಲ್ಫಿ ಮಾರಾಟ ಮಾಡುತ್ತಿದ್ದರೂ, ನೆಮ್ಮದಿಯಿಂದ ಇರುವುದಾಗಿ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ 25 ಎಕರೆ ಭೂಮಿ :
ದಬಿಯಾ ರಾಮ್ ಅವರ ಅಜ್ಜನಿಗೆ ಪಾಕಿಸ್ತಾನದಲ್ಲಿ ಇನ್ನೂ 25 ಎಕರೆ ಭೂಮಿ ಇದೆ. ಅವರ ಜಮೀನು ಪಾಕಿಸ್ತಾನದ ಬಕರ್ ಜಿಲ್ಲೆಯ ದರಿಯಾಪುರ್ ತೆಹಸಿಲ್‌ನ ಪಂಚಗಿರೆಹ್ ಪ್ರದೇಶದಲ್ಲಿದ್ದು, ಅದು ಅವರ ಅಜ್ಜನ ಹೆಸರಿನಲ್ಲಿದೆ. ಕುಟುಂಬವು ಕಳೆದ 25 ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವುದರಿಂದ, ಎಲ್ಲಾ ಸದಸ್ಯರ ಆಧಾರ್ ಕಾರ್ಡ್‌ಗಳು ಮತ್ತು ಇತರ ಪ್ರಮಾಣಪತ್ರಗಳನ್ನು ಇಲ್ಲಿ ಮಾಡಲಾಗಿದ್ದು, ಶೀಘ್ರದಲ್ಲೇ ಅವರು ಪೌರತ್ವವನ್ನು ಪಡೆಯಲಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಕಥೆ:
ಇತ್ತೀಚಿನ ದಿನಗಳಲ್ಲಿ ದಬಿಯಾ ರಾಮ್ ಕಥೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕೆಲವರು ಭಾರತ ಸರ್ಕಾರದಿಂದ ಸಹಾಯ ಕೇಳುತ್ತಿದ್ದಾರೆ, ಕೆಲವರು ಅವರ ಕಠಿಣ ಪರಿಶ್ರಮ ಮತ್ತು ದೇಶಭಕ್ತಿಯನ್ನು ಹೊಗಳುತ್ತಿದ್ದಾರೆ. ಈ ಪ್ರಕರಣದಲ್ಲಿ ಭಾರತ ಸರ್ಕಾರ ಅವರಿಗೆ ಪೌರತ್ವ ಪಡೆಯಲು ಯಾವ ರೀತಿಯಲ್ಲಿ ಸಹಾಯ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









