ವ್ಯಾಕ್ಸಿನ್ ಹೆಸರಲ್ಲಿ ವಂಚಕರ ಮಹಾಮೋಸ..! ಅಲರ್ಟ್ ಆಗಿರಿ

ಕರೋನಾ ವ್ಯಾಕ್ಸಿನ್ ಸ್ಲಾಟ್ ನೀಡುವುದಾಗಿ ನಿಮಗೆ ಕಾಲ್ ಬರಬಹುದು. ವಾಸ್ತವದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಅಂಥಹ ಕಾಲ್ ಬಂದರೆ ನಂಬಬೇಡಿ.  

Written by - Ranjitha R K | Last Updated : May 18, 2021, 09:08 AM IST
  • ವ್ಯಾಕ್ಸಿನ್ ಹೆಸರಲ್ಲಿ ಜನರನ್ನು ಲೂಟಿ ಮಾಡಲು ವಂಚಕರು ಹೊಸ ಹೊಸ ಟ್ರಿಕ್ಸ್ ಹುಡುಕುತಿದ್ದಾರೆ.
  • ನೀವು ಈ ಹೊತ್ತಿನಲ್ಲಿ ತುಂಬಾ ಎಚ್ಚರಿಕೆಯಿಂದಿರಬೇಕು.
  • ವಂಚಕರ ಕೆಲವೊಂದು ಫ್ರಾಡ್ ಟ್ರಿಕ್ಸ್ ಬಗ್ಗೆ ನಿಮಗೆ ಮಾಹಿತಿ ಇಲ್ಲಿ ನೀಡುತ್ತಿದ್ದೇವೆ.
ವ್ಯಾಕ್ಸಿನ್ ಹೆಸರಲ್ಲಿ ವಂಚಕರ ಮಹಾಮೋಸ..! ಅಲರ್ಟ್ ಆಗಿರಿ
ವಂಚಕರ ಕೆಲವೊಂದು ಫ್ರಾಡ್ ಟ್ರಿಕ್ಸ್ ಬಗ್ಗೆ ಮಾಹಿತಿ (file photo)

ನವದೆಹಲಿ : 18-44ರ ವಯೋಮಾನದವರಿಗೆ ವ್ಯಾಕ್ಸಿನ್ (Vaccine) ಘೋಷಣೆ ಆಗಿದ್ದೇ ತಡ, ಜನರನ್ನು ಲೂಟಿ ಮಾಡಲು ವಂಚಕರು ಹೊಸ ಹೊಸ ಟ್ರಿಕ್ಸ್ ಹುಡುಕುತಿದ್ದಾರೆ. ನೀವು ಈ ಹೊತ್ತಿನಲ್ಲಿ ತುಂಬಾ ಎಚ್ಚರಿಕೆಯಿಂದಿರಬೇಕು. ವಂಚಕರ ಕೆಲವೊಂದು ಫ್ರಾಡ್ ಟ್ರಿಕ್ಸ್ (Fraud tricks) ಬಗ್ಗೆ ನಿಮಗೆ ಮಾಹಿತಿ ಇಲ್ಲಿ ನೀಡುತ್ತಿದ್ದೇವೆ.

1. ವ್ಯಾಕ್ಸಿನ್ ಸ್ಲಾಟ್ ಕೊಡಿಸುವ ಕಾಲ್
ಕರೋನಾ ವ್ಯಾಕ್ಸಿನ್ (Corona vaccine) ಸ್ಲಾಟ್ ನೀಡುವುದಾಗಿ ನಿಮಗೆ ಕಾಲ್ ಬರಬಹುದು. ವಾಸ್ತವದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಅಂಥಹ ಕಾಲ್ ಬಂದರೆ ನಂಬಬೇಡಿ. ವ್ಯಾಕ್ಸಿನ್ ಸ್ಲಾಟ್ (Vaccine slot) ನೀವೇ ಬುಕ್ ಮಾಡಬೇಕು. ವ್ಯಾಕ್ಸಿನ್ ಸ್ಲಾಟ್ ಕೊಡಿಸುವ ನೆಪದಲ್ಲಿ ವಂಚಕರು ನಿಮ್ಮ ಮೊಬೈಲಿನಲ್ಲಿ (Mobile) ಕೆಲವೊಂದು ರಿಮೋಟ್ ಕಂಟ್ರೋಲ್ ಇರುವ ಆಪ್ ಮೊಬೈಲಿನಲ್ಲಿ ಡೌನ್ ಲೋಡ್ ಮಾಡಲು ಹೇಳುತ್ತಾರೆ.  ಒಂದು ವೇಳೆ ಅಂಥಾ ಆಪ್ ನಿಮ್ಮ ಮೊಬೈಲಿನಲ್ಲಿ ಡೌನ್ ಲೋಡ್ ಆದರೆ, ಅವರು ಸುಲಭವಾಗಿ ರಿಮೋಟಿನಲ್ಲಿ ನಿಮ್ಮ ಬ್ಯಾಂಕ್ ಖಾತೆ (Bank account) ಪಾಸ್ ವರ್ಡ್ ಸಹಿತ ಸೂಕ್ಷ್ಮ ಡಾಟಾ ಕದಿಯಬಹುದು.

ಇದನ್ನೂ ಓದಿ : Plasma Therapy: ಕರೋನಾ ಚಿಕಿತ್ಸೆಯಿಂದ ಪ್ಲಾಸ್ಮಾ ಥೆರೆಪಿ ಕೈಬಿಟ್ಟ ಐಸಿಎಂಆರ್

2. ಸ್ಲಾಟ್ ಬುಕಿಂಗ್ ಮೆಸೆಜ್
ಫಟಾಫಟ್ ವ್ಯಾಕ್ಸಿನ್ ಸ್ಲಾಟ್ ಬುಕಿಂಗ್ ಗೆ ಈ ಲಿಂಕ್ ಕ್ಲಿಕ್ ಮಾಡಿ ಎಂದು ಹೇಳಿ ನಿಮಗೆ ಮೆಸೆಜ್ ಬರಬಹುದು. ಅದನ್ನು ನಂಬಿ ಲಿಂಕ್ ಕ್ಲಿಕ್ ಮಾಡಿದರೆ ನೀವು ಮೋಸಹೋಗುವುದು ಖಂಡಿತಾ. ಆ ಲಿಂಕ್ ನಲ್ಲಿ ನಕಲಿ ಆಪ್ (fake app) ಗಳಿರುತ್ತವೆ. ಅವು ವ್ಯಾಕ್ಸಿನ್ ಸ್ಲಾಟ್ ಬುಕ್ ಮಾಡಲ್ಲ. ಬದಲಿಗೆ ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡಬಹುದು. ಹಾಗಾಗಿ ಅಂಥಹ ಮೆಸೆಜ್ (Message) ನಂಬಲು ಹೋಗಬೇಡಿ.

3. ವಾಟ್ಸಾಪ್ ಮೆಸೆಜ್
ನಿಮ್ಮ ವ್ಯಾಕ್ಸಿನ್ ಸ್ಲಾಟ್ ಬುಕ್ ಆಗಿದೆ. ಕನ್ ಫರ್ಮ್ ಮಾಡಲು ಅದಕ್ಕೆ ಪೇಮೆಂಟ್ (Payment) ಮಾಡಬೇಕು. ಈ ಲಿಂಕ್ ಕ್ಲಿಕ್ ಮಾಡಿ ಎಂದು ವಾಟ್ಸಾಪ್ (Whatsapp) ಮೆಸೆಜ್ ಬರಬಹುದು. ಅದನ್ನು ನಂಬಿ ಲಿಂಕ್ ಒತ್ತಿದರೆ ನಿಮ್ಮ ಮೊಬೈಲ್ ಹ್ಯಾಕ್ ಆಗುತ್ತೆ.  ಅಲರ್ಟ್ ಆಗಿರಿ. 

ಇದನ್ನೂ ಓದಿ : Cyclone Tauktae: ತೌಕ್ತೆ ರೌದ್ರ ನರ್ತನ, ಕೊಂಕಣ್ ಬೆಲ್ಟ್ ನಲ್ಲಿ 6 ಜನರ ದುರ್ಮರಣ

4. ಕೊವಿನ್ 4 ಅಂಕಿ ಸೆಕ್ಯೂರಿಟಿ ಕೋಡ್ ಕೇಳುತ್ತಾರೆ
ವಂಚಕರು ಫೋನ್ ಮಾಡಿ ಕೊವಿನ್ ಆಪ್ ನ (CoWIN) ನಾಲ್ಕು ಅಂಕಿ ಸೆಕ್ಯೂರಿಟಿ ಕೋಡ್ ಕೇಳುತ್ತಾರೆ. ಯಾವುದೇ ಕಾರಣಕ್ಕೆ ಕೊಡಬೇಡಿ. ಸೆಕ್ಯೂರಿಟಿ ಕೋಡ್ ಕೇವಲ ವ್ಯಾಕ್ಸಿನೇಶನ್ ಸೆಂಟರ್ ಅಧಿಕಾರಿ ಜೊತೆ ಮಾತ್ರ ಶೇರ್ ಮಾಡಿ.

5. ನಿಮಗಿದು ಗೊತ್ತಿರಲಿ
ವ್ಯಾಕ್ಸಿನೇಶನ್ ಸ್ಲಾಟ್ ಕೇವಲ ಕೊವಿನ್ ಆಪ್ ನಲ್ಲಿ ಮಾತ್ರ ಆಗುತ್ತದೆ. ಆರೋಗ್ಯ ಸೇತು ಆಪ್ (Arogya setu) ಡೌನ್ ಲೋಡ್ ಮಾಡಿಕೊಳ್ಳಿ. ಅದರ ಮೂಲಕ ಸ್ಲಾಟ್ ಬುಕ್ ಮಾಡಿಕೊಳ್ಳಿ. ಅದನ್ನು ಬಿಟ್ಟು ಬೇರೆಲ್ಲೂ ವ್ಯಾಕ್ಸಿನ್ ಸ್ಲಾಟ್ ಬುಕ್ ಮಾಡಲು ಸಾಧ್ಯ ಇಲ್ಲ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News