ಫ್ರೆಂಡ್ಶಿಪ್ ಡೇ ಎಂದರೆ ಎಲ್ಲರಿಗೂ ನೆನಪಾಗುವುದು ಅವರ ಸ್ಕೂಲ್ ಡೇಸ್.. ಸಮಯ ಕಳೆದಂತೆ ಬಾಲ್ಯ ಮರೆಯಾದರೂ ನಿಜವಾದ ಸ್ನೇಹ ಶಾಶ್ವತವಾಗಿ ಉಳಿಯುತ್ತದೆ. ಅಂಥಹ ಗೆಳೆಯ-ಗೆಳತಿಯರೊಂದಿಗೆ ಸ್ನೇಹವನ್ನು ಸಂಭ್ರಮಿಸುವ ದಿನವೇ ಸ್ನೇಹಿತರ ದಿನ. ಈ ವಿಷೇಶ ದಿನದ ಹಿನ್ನಲೆಯ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ. ಇದರ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ.

History of Friendship Day: ಪ್ರತಿಯೊಬ್ಬರ ಜೀವನದಲ್ಲಿ ಸ್ನೇಹ ಎಂಬುವುದು ಮನುಷ್ಯ ಹೊಂದಿರುವ ಅತ್ಯುತ್ತಮ ಸಂಬಂಧಗಳಲ್ಲಿ ಒಂದು. ಕುಟುಂಬದ ಹೊರಗಿನ ಸಂಬಂಧಗಳಲ್ಲಿ ಸ್ನೇಹ ಮಾತ್ರ ಆಧಾರವಾಗಿರುತ್ತದೆ, ಬೆಂಬಲವಾಗಿರುತ್ತದೆ ಮತ್ತು ಬದುಕಿಗೆ ಬಣ್ಣ ತರುವ ಶಕ್ತಿಯಂತೆ ಕೆಲಸ ಮಾಡುತ್ತದೆ. ಅಂತಹ ಸ್ನೇಹವನ್ನು ಗೌರವಿಸುವ ಮತ್ತು ಅದನ್ನು ಆಚರಿಸುವ ದಿನವೇ ಸ್ನೇಹಿತರ ದಿನ (Friendship Day).
2025ರ ಸ್ನೇಹಿತರ ದಿನ
2025ರಲ್ಲಿ ಸ್ನೇಹಿತರ ದಿನವನ್ನು ನಾಳೆ (ಆಗಸ್ಟ್ 3) ಅಂದರೆ ಭಾನುವಾರ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಭಾರತದಲ್ಲಿ ಸ್ನೇಹದ ದಿನವನ್ನಾಗಿ ಆಚರಿಸುತ್ತಾರೆ. ಈ ದಿನವು ಯಾವುದೇ ಧರ್ಮ, ಜಾತಿ, ಭಾಷೆ ಅಥವಾ ದೇಶದ ಗಡಿಗಳನ್ನು ಮೀರಿ ಹೃದಯದಿಂದ ಸಂಬಂಧಿಸಿರುವ ಎಲ್ಲಾ ಸ್ನೇಹಿತರಿಗೆ ಸ್ಮರಣಾರ್ಥವಾಗಿದೆ.
ಇದನ್ನೂ ಓದಿ: ಚುನಾವಣಾ ಆಯೋಗದ ಮೇಲೆ ರಾಹುಲ್ ಗಾಂಧಿ ಆರೋಪ
ಸ್ನೇಹದ ದಿನದ ಇತಿಹಾಸ ಮತ್ತು ಆರಂಭ
ಸ್ನೇಹದ ದಿನದ ಕಲ್ಪನೆ ಮೊದಲು ಅಮೆರಿಕದಲ್ಲಿ 1930ರ ದಶಕದಲ್ಲಿ ಹುಟ್ಟಿತು. ಅಲ್ಲಿ Hallmark Cards ಕಂಪನಿಯ ಸ್ಥಾಪಕರಾದ Joyce Hall ಅವರು ಜನರು ಸ್ನೇಹಿತರಿಗೆ ಕಾರ್ಡ್ಗಳನ್ನು ನೀಡುವಂತಹ ದಿನವೊಂದನ್ನು ರೂಪಿಸಲು ಯೋಚಿಸಿದರು. ಆದರೆ ಪ್ರಾರಂಭದಲ್ಲಿ ಈ ದಿನ ವ್ಯಾಪಾರಿಕ ಉದ್ದೇಶ ಹೊಂದಿದೆ ಎಂಬ ಟೀಕೆಗೆ ಗುರಿಯಾಯಿತು.
ಆದರೂ ಕಾಲಕ್ರಮೇಣ ಸ್ನೇಹದ ಅರ್ಥವನ್ನು ಒಪ್ಪಿಕೊಂಡು ಹಲವು ದೇಶಗಳು ಈ ದಿನವನ್ನು ಆಚರಿಸಲು ಪ್ರಾರಂಭಿಸಿದವು. 1998ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆಯು ಸ್ನೇಹವನ್ನು ಮಾನವ ಸಂಬಂಧಗಳ ನಡುವೆ ಶಾಂತಿ, ಸಹನೆ ಮತ್ತು ಸಮರಸ್ಯತೆಯ ಚಿಹ್ನೆಯಾಗಿ ಪರಿಗಣಿಸಿ ಜುಲೈ 30ರಂದು ಅಂತಾರಾಷ್ಟ್ರೀಯ ಸ್ನೇಹದ ದಿನವನ್ನಾಗಿ ಘೋಷಿಸಿತು. ಆದರೆ ಭಾರತ ಸೇರಿದಂತೆ ಕೆಲವು ದೇಶಗಳು ಆಗಸ್ಟ್ ಮೊದಲ ಭಾನುವಾರವನ್ನು ಸ್ನೇಹದ ದಿನವನ್ನಾಗಿ ಆಚರಿಸುತ್ತವೆ.
ಈ ದಿನದಂದು ಜನರು ತಮ್ಮ ಸ್ನೇಹಿತರಿಗೆ ಮೆಸೇಜ್ ಕಳುಹಿಸುವ ಮೂಲಕ ಕಾರ್ಡ್ಗಳು, ಗಿಫ್ಟ್ಗಳು ನೀಡುತ್ತಾರೆ. ಇನ್ನು ಕೆಲವರು "Friendship Band" ಕಟ್ಟುತ್ತಾರೆ. ಶಾಲೆ-ಕಾಲೇಜುಗಳಲ್ಲಿ ಸ್ನೇಹದ ದಿನ ತುಂಬಾ ವಿಶೇಷವಾಗಿರುತ್ತದೆ. ಈಗ ಡಿಜಿಟಲ್ ಯುಗದಲ್ಲಿ ಸ್ನೇಹದ ದಿನಕ್ಕೆ ಸಂಬಂಧಿಸಿದ ಮೀಮ್ಸ್, ಫೋಟೋಗಳು, ರೀಲ್ಸ್, ಸ್ಟೇಟಸ್ ಅಪ್ಲೋಡ್ ಮಾಡುವ ಸಂಪ್ರದಾಯ ಕೂಡ ಜೋರಾಗಿದೆ. ಅಷ್ಟಲ್ಲದೇ ಈ ದಿನದಂದು ಹಳೆಯ ಸ್ನೇಹಿತರು ಮತ್ತೆ ಸಂಪರ್ಕಕ್ಕೆ ಬರುವುದು, ಬದಲಾದ ಸಂಬಂಧಗಳು ಪುನಃ ಗಟ್ಟಿಯಾಗುವ ಸಂದರ್ಭಗಳು ಇತ್ಯಾದಿಗಳೂ ನಡೆಯುತ್ತವೆ.
ಸ್ನೇಹದಿನ ಆಚರಿಸುವ ಮಹತ್ವ
ಸ್ನೇಹವು ಕೇವಲ ಸಹಪಾಠಿ ಅಥವಾ ಜೊತೆಯಲ್ಲಿರುವ ವ್ಯಕ್ತಿಯೊಂದಿಗೆ ಮಾತ್ರವಲ್ಲ, ಅದು ನಿಜವಾದ ನಂಬಿಕೆ, ಅರ್ಥಪೂರ್ಣ ಸಂಬಂಧ, ಪರಸ್ಪರ ಗೌರವ ಮತ್ತು ಪ್ರೀತಿ ಹೊಂದಿರುವ ಸಂಬಂಧವಾಗಿದೆ. ನಾವು ಜೀವನದಲ್ಲಿ ಎದುರಿಸುವ ಸಂತೋಷ, ದುಃಖ, ಒತ್ತಡ, ಯಶಸ್ಸು ಎಲ್ಲದಕ್ಕೂ ಸ್ನೇಹಿತರು ಪಾಲುದಾರರಾಗಿರುತ್ತಾರೆ. ಸ್ನೇಹದ ದಿನವು ಅಂತಹ ಅಮೂಲ್ಯ ಸಂಬಂಧಗಳಿಗೆ "ಧನ್ಯವಾದ" ಹೇಳುವ ಅವಕಾಶ ನೀಡುತ್ತದೆ. ಇಂದಿನ ಯುಗದಲ್ಲಿ ಹೆಚ್ಚು ಜನ ಸಾಮಾಜಿಕವಾಗಿ ಒಂಟಿಯಾಗಿರುವ ಸಂದರ್ಭದಲ್ಲಿ ನಿಜವಾದ ಸ್ನೇಹಿತರೊಂದಿಗೆ ಕಳೆಯುವ ಕ್ಷಣಗಳು ನಿಜವಾಗಿಯೂ ಮೌಲ್ಯಯುತ. ಈ ದಿನ ನಮ್ಮ ಸ್ನೇಹಿತರಿಗೆ ನಾವು ಅವರ ಮಹತ್ವವನ್ನು ತಿಳಿಸುವ ಅತ್ಯುತ್ತಮ ಸಂದರ್ಭವೆಂದು ಹೇಳಬಹುದು.