ಆರ್ಥಿಕ ಬಿಕ್ಕಟು ತಡೆಗೆ ಕೇಂದ್ರ ಧೃಡ ನಿರ್ಧಾರ ಕೈಗೊಳ್ಳುವ ಭರವಸೆ ಇದೆ - ಅರವಿಂದ್ ಕೇಜ್ರಿವಾಲ್

ಆರ್ಥಿಕ ಕುಸಿತವನ್ನು ಎದುರಿಸಲು ಕೇಂದ್ರ ಸರ್ಕಾರ ಧೃಡವಾದ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎನ್ನುವ ಸಂಪೂರ್ಣ ನಂಬಿಕೆ ಇದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೇಶವು ಒಂದಾಗಿ ನಿಂತು ಆರ್ಥಿಕತೆಯನ್ನು ಸರಿಪಡಿಸಬೇಕಾದ ಒಂದು ಪರಿಸ್ಥಿತಿ ಇದು ಎಂದರು.

Updated: Aug 23, 2019 , 05:35 PM IST
ಆರ್ಥಿಕ ಬಿಕ್ಕಟು ತಡೆಗೆ ಕೇಂದ್ರ ಧೃಡ ನಿರ್ಧಾರ ಕೈಗೊಳ್ಳುವ ಭರವಸೆ ಇದೆ - ಅರವಿಂದ್ ಕೇಜ್ರಿವಾಲ್

ನವದೆಹಲಿ: ಆರ್ಥಿಕ ಕುಸಿತವನ್ನು ಎದುರಿಸಲು ಕೇಂದ್ರ ಸರ್ಕಾರ ಧೃಡವಾದ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎನ್ನುವ ಸಂಪೂರ್ಣ ನಂಬಿಕೆ ಇದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೇಶವು ಒಂದಾಗಿ ನಿಂತು ಆರ್ಥಿಕತೆಯನ್ನು ಸರಿಪಡಿಸಬೇಕಾದ ಒಂದು ಪರಿಸ್ಥಿತಿ ಇದು ಎಂದರು.

"ಮುಂಬರುವ ಕಾಲದಲ್ಲಿ ಕೇಂದ್ರವು ಆರ್ಥಿಕ ಕುಸಿತದ ಮೇಲೆ ಧೃಡವಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ. ಇದು ದೇಶವು ಒಂದಾಗಿ ನಿಂತು ಆರ್ಥಿಕತೆಯನ್ನು ಸರಿಪಡಿಸಬೇಕಾದ ಸನ್ನಿವೇಶ "ಎಂದು ಕೇಜ್ರಿವಾಲ್ ಹೇಳಿದರು. 

"ಆರ್ಥಿಕತೆಯನ್ನು ಸರಿಪಡಿಸಲು ಕೇಂದ್ರವು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿ, ಅದಕ್ಕೆ ದೆಹಲಿ ಸರ್ಕಾರವು ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ಉದ್ಯೋಗ ನಷ್ಟದ ಬಗ್ಗೆ ನಾನು ವೈಯಕ್ತಿಕವಾಗಿ ಚಿಂತಿತನಾಗಿದ್ದೇನೆ " ಎಂದು ಕೇಜ್ರಿವಾಲ್ ಹೇಳಿದರು.

"ಇದು ಗಂಭೀರ ವಿಷಯವಾಗಿದೆ, ವಿಶೇಷವಾಗಿ ವಾಹನ ವಲಯ, ಜವಳಿ, ರಿಯಲ್ ಎಸ್ಟೇಟ್ ಮತ್ತು ಇತರ ವಲಯಗಳಲ್ಲಿ ನಿಧಾನಗತಿ ಆಳವಾಗಿದೆ ಎಂದು ಅವರು ಹೇಳಿದರು. ಹಲವಾರು ವಲಯಗಳಲ್ಲಿ ಭಾರತೀಯ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಹಿನ್ನಲೆಯಲ್ಲಿ ಕೇಜ್ರಿವಾಲ್ ಅವರ ಹೇಳಿಕೆ ಬಂದಿದೆ.