ಕೇವಲ 20 ರೂ.ಗೆ ಹೊಸ ಗ್ಯಾಸ್ ಕನೆಕ್ಷನ್ ಬುಕ್ಕಿಂಗ್, 2 ರೂ.ಗೆ ಸಿಲಿಂಡರ್ ರೀಫಿಲ್! ಹೇಗೆ ಗೊತ್ತಾ?

ಮುಂದಿನ ದಿನಗಳಲ್ಲಿ ಸುಮಾರು 3 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳು ದೇಶದಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರಾರಂಭಿಕ ಹಂತವಾಗಿ ತೈಲ ಕಂಪೆನಿಗಳು ಒಂದು ಲಕ್ಷ ಕೇಂದ್ರಗಳೊಂದಿಗೆ ಕಾರ್ಯ ಆರಂಭಿಸಲಿವೆ.  

Last Updated : Nov 4, 2018, 11:41 AM IST
ಕೇವಲ 20 ರೂ.ಗೆ ಹೊಸ ಗ್ಯಾಸ್ ಕನೆಕ್ಷನ್ ಬುಕ್ಕಿಂಗ್, 2 ರೂ.ಗೆ ಸಿಲಿಂಡರ್ ರೀಫಿಲ್! ಹೇಗೆ ಗೊತ್ತಾ? title=

ನವದೆಹಲಿ: ದೀಪಾವಳಿ ಉಡುಗೊರೆಯಾಗಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಗ್ರಾಮೀಣ ಜನತೆಗೆ ಸಾಕಷ್ಟು ಕೊಡುಗೆಗಳು ಮತ್ತು ಯೋಜನೆಗಳನ್ನು ಘೋಷಿಸಿದೆ. ಇದರ ಮುಂದುವರಿದ ಯೋಜನೆಯಾಗಿ ಅಡುಗೆ ಅನಿಲ-ಗ್ಯಾಸ್ ಕನೆಕ್ಷನ್ ಮತ್ತು ಸಿಲಿಂಡರ್ ವಿತರಣೆಗೆ ಸೇವಾ ಕೇಂದ್ರಗಳನ್ನು ಅಧಿಕೃತಗೊಳಿಸಿದೆ. ಈ ಸೇವಾ ಕೇಂದ್ರಗಳಲ್ಲಿ ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳ ಎಲ್ಪಿಜಿ(LPG) ಕನೆಕ್ಷನ್ ಮತ್ತು ಸಿಲಿಂಡರ್ ರೀಫಿಲ್ ಬುಕಿಂಗ್ ಮಾಡಬಹುದು. 

ಕೇಂದ್ರ ಸರ್ಕಾರವು ಗ್ಯಾಸ್ ಬುಕಿಂಗ್, ರೀಫಿಲ್ ಮತ್ತು ವಿತರಣೆಗೆ ಸಂಬಂಧಿಸಿದಂತೆ ಈ ಕಂಪನಿಗಳೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, ಕಾಮನ್ ಸರ್ವಿಸ್ ಸೆಂಟರ್ (ಸಿ.ಎಸ್.ಸಿ.) ಆರಂಭಿಸಲು ನಿರ್ಧರಿಸಿದೆ. ಇದರ ಫಲವಾಗಿ ಮುಂದಿನ ದಿನಗಳಲ್ಲಿ ಸುಮಾರು 3 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳು ದೇಶದಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರಾರಂಭಿಕ ಹಂತವಾಗಿ ತೈಲ ಕಂಪೆನಿಗಳು ಒಂದು ಲಕ್ಷ ಕೇಂದ್ರಗಳೊಂದಿಗೆ ಕಾರ್ಯ ಆರಂಭಿಸಲಿವೆ.

ಹೀಗಾಗಿ ಇನ್ನು ಮುಂದೆ ನೀವು ಹೊಸ ಗ್ಯಾಸ್ ಕನೆಕ್ಷನ್ ತೆಗೆದುಕೊಳ್ಳಲು ಗ್ಯಾಸ್ ಏಜೆನ್ಸಿಗಳಿಗೆ ಅಲೆಯುವ ಅಗತ್ಯವಿಲ್ಲ. ನೀವಾಗಿಯೇ ಕಾಮನ್ ಸರ್ವೀಸ್ ಸೆಂಟರ್(CSC)ಗೆ ಹೋಗಿ ಹೊಸ ಗ್ಯಾಸ್ ಕನೆಕ್ಷನ್ ಬುಕ್ ಮಾಡಬಹುದು. ಈ ಕೇಂದ್ರದಲ್ಲಿ ಹೊಸ ಗ್ಯಾಸ್ ಕನೆಕ್ಷನ್ ಬುಕ್ ಮಾಡಲು, ಸೇವಾ ಶುಲ್ಕವಾಗಿ 20 ರೂ. ಪಾವತಿಸಬೇಕು, ಹಾಗೆಯೇ ಗ್ಯಾಸ್ ರೀಫಿಲ್ ಗೆ ಬುಕ್ ಮಾಡಲು 2 ರೂ. ಸೇವಾ ಶುಲ್ಕ, ವಿತರಣೆಗೆ 10 ರೂ. ಮತ್ತು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು 19.5 ರೂ. ಶುಲ್ಕ ನಿಗದಿಪಡಿಸಲಾಗುವುದು ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಹೇಳಿದ್ದಾರೆ.

Trending News