ತೆಲಂಗಾಣದಲ್ಲಿ ಬಿಜೆಪಿಗೆ ಬಲ ನೀಡಿದ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ ಚುನಾವಣೆ ಫಲಿತಾಂಶ

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ 150 ವಿಭಾಗಗಳಲ್ಲಿ 149ಕ್ಕೆ ಫಲಿತಾಂಶಗಳನ್ನು ಘೋಷಿಸಲಾಗಿದೆ.

Last Updated : Dec 4, 2020, 11:57 PM IST
ತೆಲಂಗಾಣದಲ್ಲಿ ಬಿಜೆಪಿಗೆ ಬಲ ನೀಡಿದ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ ಚುನಾವಣೆ ಫಲಿತಾಂಶ  title=

ನವದೆಹಲಿ: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ 150 ವಿಭಾಗಗಳಲ್ಲಿ 149ಕ್ಕೆ ಫಲಿತಾಂಶಗಳನ್ನು ಘೋಷಿಸಲಾಗಿದೆ.

ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ ಚುನಾವಣೆಯಲ್ಲಿ 55 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.ಆದರೆ ಇನ್ನೊಂದೆಡೆಗೆ ಅಚ್ಚರಿಯ ರೀತಿಯಲ್ಲಿ 48 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ಸ್ಥಾನಕ್ಕೆ ಬಿಜೆಪಿ ಜಿಗಿದಿದೆ.ಎಐಎಂಐಎಂ 44 ಸ್ಥಾನಗಳನ್ನು ಗೆಲ್ಲುವ ಮೂಲಕ  ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಾಂಗ್ರೆಸ್ ಪಕ್ಷವು ಕೇವಲ ಎರಡು ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿದೆ.

ಬಿಜೆಪಿ ತನ್ನ ಪ್ರಭಾವಶಾಲಿ ಪ್ರದರ್ಶನವನ್ನು ಆಚರಿಸುತ್ತಿದ್ದರೆ, 2016 ರ ಚುನಾವಣೆಯಲ್ಲಿ 88 ಸ್ಥಾನಗಳನ್ನು ಗೆದ್ದಿದ್ದ ಟಿಆರ್ಎಸ್ - ಕಾರ್ಯಕ್ಷಮತೆಯ ಕುಸಿತವನ್ನು ವಿಶ್ಲೇಷಿಸುವುದಾಗಿ ಹೇಳಿದೆ. ಪಕ್ಷವು 20-25 ಸ್ಥಾನಗಳಿಗೆ ಕುಸಿಯಿತು ಎಂದು ಟಿಆರ್ಎಸ್ ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮರಾವ್ ಹೇಳಿದರು. ನಾವು ಬಯಸಿದ ಫಲಿತಾಂಶವನ್ನು ಏಕೆ ಬರಲಿಲ್ಲ ಎಂಬುದರ ಕುರಿತಾಗಿ ಗಮನ ಹರಿಸುತ್ತೇವೆ ಎಂದು ಅವರು ಹೇಳಿದರು.

ಮತ್ತೊಂದೆಡೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದರ್ ಯಾದವ್ ಅವರು ಪಕ್ಷದ ಕಾರ್ಯಕ್ಷಮತೆಯನ್ನು ನೈತಿಕ ಗೆಲುವು ಎಂದು ಶ್ಲಾಘಿಸಿದರು ಮತ್ತು ಬಿಜೆಪಿಯನ್ನು ಆಡಳಿತಾರೂಢ ಟಿಆರ್‌ಎಸ್‌ಗೆ ಏಕೈಕ ಪರ್ಯಾಯ ಎಂದು ಕರೆದರು. ಗೃಹ ಸಚಿವ ಅಮಿತ್ ಶಾ ಅವರು ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದರು ಮತ್ತು "ಪ್ರಧಾನಿ ಮೋದಿಯವರ ನೇತೃತ್ವದ ಬಿಜೆಪಿಯ ಅಭಿವೃದ್ಧಿಯ ರಾಜಕೀಯದಲ್ಲಿ ನಂಬಿಕೆ ಇಟ್ಟ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

Trending News