ಜೆಎನ್‌ಯು: 300% ಶುಲ್ಕ ಹೆಚ್ಚಳಕ್ಕೆ ಯಾವುದೇ ಅರ್ಥವಿಲ್ಲ ಎಂದ ಗುಲಾಮ್ ನಬಿ ಆಜಾದ್

ಶುಲ್ಕ ಏರಿಕೆ ವಿರುದ್ಧ ಜೆಎನ್‌ಯು ವಿದ್ಯಾರ್ಥಿಗಳು ಸೋಮವಾರ ಕಾಲ್ನಡಿಗೆಯಲ್ಲಿ ಸಂಸತ್ ಗೆ ಮಾರ್ಚ್ ಕೈಗೊಂಡಿದ್ದಾರೆ.

Updated: Nov 18, 2019 , 01:58 PM IST
ಜೆಎನ್‌ಯು: 300% ಶುಲ್ಕ ಹೆಚ್ಚಳಕ್ಕೆ ಯಾವುದೇ ಅರ್ಥವಿಲ್ಲ ಎಂದ ಗುಲಾಮ್ ನಬಿ ಆಜಾದ್
File Image

ನವದೆಹಲಿ: ಶುಲ್ಕ ಹೆಚ್ಚಳದ ವಿರುದ್ಧ ಆಂದೋಲನ ನಡೆಸುತ್ತಿರುವ ಜೆಎನ್‌ಯು(JNU) ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ (Ghulam Nabi Azad) ಬೆಂಬಲ ನೀಡಿದ್ದಾರೆ. ಶುಲ್ಕವನ್ನು ಶೇಕಡಾ 300 ರಷ್ಟು ಹೆಚ್ಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಆಜಾದ್ ಹೇಳಿದ್ದಾರೆ.

ಈ ಸಂಪೂರ್ಣ ವಿವಾದವನ್ನು ಬಗೆಹರಿಸಲು ಎಚ್ಆರ್‌ಡಿ ಸಚಿವಾಲಯವು ಸಮಿತಿ ರಚಿಸಿರುವ ವಿರುದ್ಧ ವಾಗ್ಧಾಳಿ ನಡೆಸಿದ ಗುಲಾಮ್ ನಬಿ ಆಜಾದ್, ಅಂತಹ ಸಮಿತಿಗೆ ಯಾವುದೇ ಅರ್ಥವಿಲ್ಲ ಎಂದರು.

ಮಾಜಿ ಯುಜಿಸಿ ಅಧ್ಯಕ್ಷ ವಿ.ಎಸ್. ಚೌಹಾನ್ ಅವರ ಅಧ್ಯಕ್ಷತೆಯಲ್ಲಿ ಮಾನವ ಸಂಪನ್ಮೂಲ ಸಚಿವಾಲಯವು ಸಮಿತಿಯನ್ನು ರಚಿಸಿದೆ. ಈ ಸಮಿತಿ ವಿದ್ಯಾರ್ಥಿಗಳು ಮತ್ತು ಜೆಎನ್‌ಯು ಆಡಳಿತ ಮಂಡಳಿಯೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ.

ಶುಲ್ಕ ಹೆಚ್ಚಳದ ವಿರುದ್ಧ ಜೆಎನ್‌ಯು ವಿದ್ಯಾರ್ಥಿಗಳು ಸೋಮವಾರದವರೆಗೆ ಕಾಲ್ನಡಿಗೆಯಲ್ಲಿ ಸಂಸತ್ ಗೆ ಮೆರವಣಿಗೆ ಕೈಗೊಂಡಿದ್ದಾರೆ. ವಿದ್ಯಾರ್ಥಿಗಳ ಮೆರವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಕಠಿಣ ಭದ್ರತಾ ವ್ಯವಸ್ಥೆ ಮಾಡಿದ್ದಾರೆ.