Goair ರಿಪಬ್ಲಿಕ್ ಡೇ ಆಫರ್, ಈ ಸ್ಥಳಗಳಿಗೆ ಕೈಗೆಟುಕುವ ದರದಲ್ಲಿ ಏರ್ ಟಿಕೆಟ್

ಈ ಪ್ರಸ್ತಾಪವು ದೇಶದಲ್ಲಿ 26 ಸ್ಥಳಗಳಿಗೆ ಲಭ್ಯವಿರುತ್ತದೆ.

Last Updated : Jan 25, 2019, 04:07 PM IST
Goair ರಿಪಬ್ಲಿಕ್ ಡೇ ಆಫರ್, ಈ ಸ್ಥಳಗಳಿಗೆ ಕೈಗೆಟುಕುವ ದರದಲ್ಲಿ ಏರ್ ಟಿಕೆಟ್ title=

ನವದೆಹಲಿ: ನೀವು ಅಗ್ಗದ ವಾಯುಯಾನವನ್ನು ಮಾಡಲು ಬಯಸಿದರೆ, Goair ರಿಪಬ್ಲಿಕ್ ಡೇ ಆಫರ್ ನಿಮಗೆ ಅನುವು ಮಾಡಿಕೊಡಲಿದೆ. Goair ರಿಪಬ್ಲಿಕ್ ಡೇ ಪ್ರಸ್ತಾಪದಲ್ಲಿ ನೀವು ಕೈಗೆಟುಕುವ ದರದಲ್ಲಿ ಏರ್ ಟಿಕೆಟ್ ಬುಕ್ ಮಾಡಬಹುದು. ಗೋ ಏರ್ ಈ ಪ್ರಸ್ತಾಪವು ಈ ಪ್ರಸ್ತಾಪವು ದೇಶದಲ್ಲಿ 26 ಸ್ಥಳಗಳಿಗೆ ಲಭ್ಯವಿದ್ದು, ರೂ. 999 ರಿಂದ ಟಿಕೆಟ್ ದರ ಪ್ರಾರಂಭವಾಗುತ್ತದೆ. ಇದರಲ್ಲಿ ನೀವು ವಿವಿಧ ಮಾರ್ಗಗಳಲ್ಲಿ ಟಿಕೆಟ್ ಬುಕ್ ಮಾಡಬಹುದು. ಜನವರಿ 24 ರಿಂದ 26ರವರೆಗೆ ಕಂಪನಿ ಮೂರು ದಿನದ ಮಾರಾಟ ಪ್ರಾರಂಭಿಸಿದೆ.

ಕಂಪನಿಯ ಪ್ರಕಾರ, ಈ ಕೊಡುಗೆಯಲ್ಲಿ ಟಿಕೆಟ್ಗಳನ್ನು ಖರೀದಿಸುವವರು ಫೆಬ್ರವರಿ 9 ರಿಂದ ಸೆಪ್ಟೆಂಬರ್ 30 ರವರೆಗೆ ಯಾವಾಗಲಾದರೂ ಪ್ರಯಾಣಿಸಲು ಅವಕಾಶವಿದೆ. GoAir ನ ವೆಬ್ಸೈಟ್ನಿಂದ ನೀವು ಟಿಕೆಟ್ಗಳನ್ನು ಬುಕ್ ಮಾಡಬೇಕು. ಯಾವ ಮಾರ್ಗಕ್ಕೆ ಎಷ್ಟು ದರ ಎಂಬುದರ ಪೂರ್ಣ ವಿವರಗಳ ವೆಬ್ಸೈಟ್ನಲ್ಲಿ ಲಭ್ಯವಿದೆ.

ಪ್ರಸ್ತಾಪದ ಅಡಿಯಲ್ಲಿ, ಆಯ್ದ ಕೆಲವು ಸ್ಥಳಗಳಿಂದ ವಾಯುಯಾನಕ್ಕೆ ಅವಕಾಶವಿರುತ್ತದೆ. ಅಹಮದಾಬಾದ್, ಭುವನೇಶ್ವರ, ಬೆಂಗಳೂರು, ಮುಂಬೈ, ಕೊಲ್ಕತ್ತಾ, ಕೊಚ್ಚಿ, ದೆಹಲಿ, ಗುವಾಹಟಿ, ಗೋವಾ, ಹೈದರಾಬಾದ್, ಬಾಗ್ಡೋಗ್ರ, ಚಂಡೀಗಢ, ರಾಂಚಿ, ಜೈಪುರ, ಲಕ್ನೋ, ಚೆನ್ನೈ, ನಾಗ್ಪುರ, ಪಾಟ್ನಾ, ಪುಣೆ ಮತ್ತು ಶ್ರೀನಗರದಿಂದ 26 ವಿವಿಧ ಸ್ಥಳಗಳಿಗೆ ಟಿಕೆಟ್ ಬುಕ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ Go Air ಗಾಗಿ www.goair.in ಲಿಂಕ್ ಕ್ಲಿಕ್ ಮಾಡಿ ಮತ್ತು ನಿಮ್ಮ ಟಿಕೆಟ್ಗಳನ್ನು ಕಾಯ್ದಿರಿಸಿ.

ಒಂದು ನೋಟದಲ್ಲಿ ಮಾಹಿತಿ:

  • ಟಿಕೆಟ್ ದರ: 999 ರೂ.
  • ಬುಕಿಂಗ್ ಸಮಯ:  ಜನವರಿ 24 ರಿಂದ 26 ರವರೆಗೆ
  • ಪ್ರಯಾಣ ಸಮಯ: ಫೆಬ್ರವರಿ 9 ರಿಂದ 30 ಸೆಪ್ಟೆಂಬರ್ 2019

Trending News