ಪಿಂಚಣಿದಾರರಿಗೆ ಸಿಹಿ ಸುದ್ದಿ: ಮಾಸಿಕ ಪಿಂಚಣಿ ಸ್ಲಿಪ್ ಕಡ್ಡಾಯವಾಗಿ ಕಳುಹಿಸಲು CPAO ಕಟ್ಟುನಿಟ್ಟಿನ ಆದೇಶ..!

ಪಿಂಚಣಿ ಸ್ಲಿಪ್‌ನಲ್ಲಿ ಜಮಾ ಆದ ಮೊತ್ತ, ವಿವಿಧ ಕಡಿತಗಳು (ಆದಾಯ ತೆರಿಗೆ, ವೈದ್ಯಕೀಯ ಶುಲ್ಕ ಇತ್ಯಾದಿ), ಅರ್ರಿಯರ್ಸ್ (ಬಾಕಿ), ಡಿಎ ಪರಿಷ್ಕರಣೆ ಮುಂತಾದ ಸಂಪೂರ್ಣ ವಿವರಗಳನ್ನು ತಿಳಿಸಲಾಗಿರುತ್ತದೆ.

Written by - Manjunath Naragund | Last Updated : Dec 5, 2025, 01:12 AM IST
  • ದೇಶಾದ್ಯಂತ ಲಕ್ಷಾಂತರ ಪಿಂಚಣಿದಾರರಿಗೆ ದೊಡ್ಡ ರಿಲೀಫ್ ಸಿಗಲಿದೆ
  • ಪಿಂಚಣಿದಾರರು ಇನ್ನು ಮುಂದೆ ಪಿಂಚಣಿ ಸ್ಲಿಪ್ ಬಂದಿಲ್ಲ
  • ಇ-ಮೇಲ್‌ಗೆ ಸ್ಲಿಪ್ ಬರುವಂತೆ ಬ್ಯಾಂಕ್‌ಗಳು ಕ್ರಮ ಕೈಗೊಳ್ಳಲಿವೆ.
ಪಿಂಚಣಿದಾರರಿಗೆ ಸಿಹಿ ಸುದ್ದಿ: ಮಾಸಿಕ ಪಿಂಚಣಿ ಸ್ಲಿಪ್ ಕಡ್ಡಾಯವಾಗಿ ಕಳುಹಿಸಲು CPAO ಕಟ್ಟುನಿಟ್ಟಿನ ಆದೇಶ..!

Add Zee News as a Preferred Source

ನವದೆಹಲಿ: ಕೇಂದ್ರ ಸರ್ಕಾರಿ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರು ಕಳೆದ ಹಲವು ತಿಂಗಳುಗಳಿಂದ ಪಿಂಚಣಿ ಪಾವತಿ ಸ್ಲಿಪ್ (ಪೆನ್ಶನ್ ಸ್ಲಿಪ್) ಸಿಗದೇ ತೊಂದರೆ ಅನುಭವಿಸುತ್ತಿದ್ದರು.ಈ ತೊಂದರೆಗೆ ಈಗ ಪರಿಹಾರ ಸಿಕ್ಕಿದೆ.ಕೇಂದ್ರ ಪಿಂಚಣಿ ಖಾತೆಗಳ ಕಚೇರಿ (CPAO) ಎಲ್ಲಾ ಅಧಿಕೃತ ಬ್ಯಾಂಕ್‌ಗಳ ಕೇಂದ್ರ ಪಿಂಚಣಿ ಸಂಸ್ಕರಣಾ ಕೇಂದ್ರಗಳಿಗೆ (CPPC) ಪ್ರತಿ ತಿಂಗಳು ಪಿಂಚಣಿ ಜಮಾ ಆದ ತಕ್ಷಣ ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಪಿಂಚಣಿ ಸ್ಲಿಪ್ ಕಳುಹಿಸುವಂತೆ ಕಟ್ಟುನಿಟ್ಟಾದ ಸೂಚನೆ ನೀಡಿದೆ.

ಇದನ್ನೂ ಓದಿ: ಕಾನೂನು ಪದವಿ ಓದುವಾಗಲೇ ಸುಷ್ಮಾ ಸ್ವರಾಜ್ ಜೊತೆ ಪ್ರೀತಿ..! ಇಲ್ಲಿದೆ ಸ್ವರಾಜ್ ಕೌಶಾಲ್ ರೋಚಕ ಲವ್ ಸ್ಟೋರಿ

ಪಿಂಚಣಿ ಸ್ಲಿಪ್‌ನಲ್ಲಿ ಜಮಾ ಆದ ಮೊತ್ತ, ವಿವಿಧ ಕಡಿತಗಳು (ಆದಾಯ ತೆರಿಗೆ, ವೈದ್ಯಕೀಯ ಶುಲ್ಕ ಇತ್ಯಾದಿ), ಅರ್ರಿಯರ್ಸ್ (ಬಾಕಿ), ಡಿಎ ಪರಿಷ್ಕರಣೆ ಮುಂತಾದ ಸಂಪೂರ್ಣ ವಿವರಗಳನ್ನು ತಿಳಿಸಲಾಗಿರುತ್ತದೆ.ಈ ಸ್ಲಿಪ್ ಇಲ್ಲದೇ ಪಿಂಚಣಿದಾರರು ತಮ್ಮ ಖಾತೆಯಲ್ಲಿ ಎಷ್ಟು ಹಣ ಬಂದಿದೆ, ಏನೆಲ್ಲಾ ಕಡಿತವಾಗಿದೆ ಎಂಬುದನ್ನು ತಿಳಿಯಲಾಗದೇ ಪರದಾಡುತ್ತಿದ್ದರು.ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, CPAO ಮೂಲಕ ಎಲ್ಲಾ ಬ್ಯಾಂಕ್‌ಗಳ CPPCಗಳಿಗೆ ಮತ್ತೊಮ್ಮೆ ಸ್ಪಷ್ಟ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಛತ್ತೀಸಗಡ ಎನ್ಕೌಂಟರ್ ನಲ್ಲಿ 12 ಮಾವೋವಾದಿಗಳ ಹತ್ಯೆ

“ಪ್ರತಿ ತಿಂಗಳು ಪಿಂಚಣಿ ಕ್ರೆಡಿಟ್ ಆದ ತಕ್ಷಣ, ಯಾವುದೇ ಡೀಫಾಲ್ಟ್ ಇಲ್ಲದೇ ಪಿಂಚಣಿ ಸ್ಲಿಪ್ ಕಳುಹಿಸಬೇಕು” ಎಂದು ಆದೇಶದಲ್ಲಿ ಒತ್ತಿ ಹೇಳಲಾಗಿದೆ.ಈ ಹಿಂದೆಯೂ ಫೆಬ್ರವರಿ 2024ರಲ್ಲಿ ವೆಚ್ಚ ಇಲಾಖೆಯು ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಿವರವಾದ ಮಾರ್ಗಸೂಚಿ ಬಿಡುಗಡೆ ಮಾಡಿತ್ತು.ಆ ಆದೇಶದಲ್ಲಿ ಪಿಂಚಣಿದಾರರ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಅಥವಾ WhatsApp ಮೂಲಕ ಮತ್ತು ನೋಂದಾಯಿತ ಇ-ಮೇಲ್ ವಿಳಾಸಕ್ಕೆ ಪಿಂಚಣಿ ಸ್ಲಿಪ್ ಕಳುಹಿಸುವಂತೆ ಸ್ಪಷ್ಟವಾಗಿ ನಿರ್ದೇಶಿಸಲಾಗಿತ್ತು. ಆದರೆ ಕೆಲವು ಬ್ಯಾಂಕ್‌ಗಳು ಇದನ್ನು ಕಡೆಗಣಿಸುತ್ತಿದ್ದವು.

ಇದನ್ನೂ ಓದಿ: ರೂಪಾಯಿ ಮತ್ತು ರಷ್ಯಾದ ರೂಬಲ್ ನಲ್ಲಿ ಯಾವ ಕರೆನ್ಸಿ ಹೆಚ್ಚು ಬೆಲೆ ಬಾಳುತ್ತೆ ಗೊತ್ತೇ?

ಈಗ ಮತ್ತೊಮ್ಮೆ ಕಟ್ಟುನಿಟ್ಟಿನ ಆದೇಶ ಬಂದಿರುವುದರಿಂದ ದೇಶಾದ್ಯಂತ ಲಕ್ಷಾಂತರ ಪಿಂಚಣಿದಾರರಿಗೆ ದೊಡ್ಡ ರಿಲೀಫ್ ಸಿಗಲಿದೆ.ಪಿಂಚಣಿದಾರರು ಇನ್ನು ಮುಂದೆ ಪಿಂಚಣಿ ಸ್ಲಿಪ್ ಬಂದಿಲ್ಲ ಎಂದು ಬ್ಯಾಂಕ್ ಶಾಖೆಗಳಿಗೆ ಓಡಾಡುವ ಅಗತ್ಯವಿಲ್ಲ. ಪ್ರತಿ ತಿಂಗಳು ಆಟೋಮ್ಯಾಟಿಕ್ ಆಗಿ ಮೊಬೈಲ್‌ಗೆ ಅಥವಾ ಇ-ಮೇಲ್‌ಗೆ ಸ್ಲಿಪ್ ಬರುವಂತೆ ಬ್ಯಾಂಕ್‌ಗಳು ಕ್ರಮ ಕೈಗೊಳ್ಳಲಿವೆ. ಈ ಕ್ರಮ ಜಾರಿಗೆ ಬಂದ ನಂತರವೂ ಸ್ಲಿಪ್ ಬರುತ್ತಿಲ್ಲ ಎಂದಾದಲ್ಲಿ ಪಿಂಚಣಿದಾರರು CPAO ಅಥವಾ ಸಂಬಂಧಪಟ್ಟ ಬ್ಯಾಂಕಿನ CPPCಗೆ ದೂರು ನೀಡಬಹುದು.

About the Author

Trending News