School Holiday: ಈ ವರ್ಷದ ಆರಂಭದಿಂದಲೂ ಕರ್ನಾಟಕ ಸೇರಿದಂತೆ ವಿವಿಧೆಡೆ ಶಾಲೆಗಳಿಗೆ ಸಾಲು ಸಾಲು ರಜೆಗಳನ್ನ ನೀಡಲಾಗಿದೆ. ಅದೀ ರೀತಿ ಇದೀಗ ಮತ್ತೆ ಸತತ ಮೂರು ದಿನಗಳ ರಜೆ ಘೋಷಣೆ ಮಾಡಲಾಗಿದೆ. ಎಲ್ಲಿ ಹಾಗೂ ಯಾವ ಕಾರಣಕ್ಕೆ ರಜೆ ನೀಡಲಾಗುತ್ತಿದೆ ಎಂಬುದರ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ....
ಕರ್ನಾಟಕದಲ್ಲಿ ಸರ್ಕಾರಿ ರಜೆಗಳನ್ನ ಹೊರತುಪಡಿಸಿ ಪ್ರತಿಭಟನೆ, ವಿಶೇಷ ಕಾರ್ಯಕ್ರಮಗಳ ವೇಳೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಮೂಲಕ ಇದುವರೆಗೆ ವಿದ್ಯಾರ್ಥಿಗಳಿಗೆ ಸಾಲು ಸಾಲು ರಜೆಗಳು ಸಿಕ್ಕಿವೆ. ಇದರಿಂದ ವಿದ್ಯಾರ್ಥಿಗಳು ರಜಾ ಮಜಾ ಅನುಭವಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಪರೀಕ್ಷೆಗಳು ಮುಕ್ತಾಯವಾಗಿದ್ದು, ಶೀಘ್ರವೇ ಬೇಸಿಗೆ ರಜೆ ಘೋಷಣೆಯಾಗಲಿದೆ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಸರ್ಕಾರದ ʼಸುಂಕʼದ ಪರಿಣಾಮ; 2 ಲಕ್ಷ ರೂ. ತಲುಪಲಿರುವ ಐಫೋನ್ ಬೆಲೆ!!
ಬೇರೆ ರಾಜ್ಯಗಳಲ್ಲಿ ಈ ತಿಂಗಳಿನಿಂದಲೇ ಬೇಸಿಗೆ ರಜೆ ಘೋಷಣೆ ಮಾಡಲಾಗುತ್ತಿದೆ. ಇದಕ್ಕೂ ಮುಂಚೆ ಕೆಲ ದಿನ ರಜೆಗಳು ಬರಲಿವೆ. ತೆಲಂಗಾಣದಲ್ಲಿ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸತತ ಮೂರು ದಿನಗಳ ರಜೆ ಇರಲಿದೆ. ಕ್ರಮವಾಗಿ ಏಪ್ರಿಲ್ 12, 13 ಮತ್ತು 14ರಂದು ರಜೆ ಘೋಷಣೆ ಮಾಡಲಾಗಿದೆ. ಬೇಸಿಗೆ ರಜೆ ಏಪ್ರಿಲ್ 24ರಿಂದ ಪ್ರಾರಂಭವಾಗಲಿದ್ದು, ಇದಕ್ಕೂ ಮುಂಚೆ ಏಪ್ರಿಲ್ 12, 13 ಮತ್ತು 14ರಂದು ಶಾಲೆಗಳಿಗೆ ರಜೆ ಇರಲಿದೆ. ಏಪ್ರಿಲ್ 12ರ ಎರಡನೇ ಶನಿವಾರ ಮತ್ತು 13ರ ಭಾನುವಾರ ಇರುವುದರಿಂದ ಶಾಲೆಗಳಿಗೆ ರಜೆ ಇರಲಿದೆ. ಇನ್ನು ಏಪ್ರಿಲ್ 14ರಂದು ಸೋಮವಾರ ಅಂಬೇಡ್ಕರ್ ಜಯಂತಿ ಹಿನ್ನೆಲೆ ತೆಲಾಂಗಣ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಏಪ್ರಿಲ್ 10ರಂದು ಮಹಾವೀರ ಜಯಂತಿ, ಏಪ್ರಿಲ್ 18ರಂದು ಗುಡ್ ಫ್ರೈಡೇ ಆಚರಣೆ ಹಿನ್ನೆಲೆ ಈ ದಿನಗಳಂದು ಶಾಲಾ-ಕಾಲೇಜುಗಳಿಗೆ ರಜೆ ಇರಲಿದೆ. ಇದಲ್ಲದೆ ಏಪ್ರಿಲ್ 6, 13, 20, ಮತ್ತು 27 ಭಾನುವಾರ ಆಗಿದ್ದು, ಈ ದಿನಗಳಲ್ಲಿ ಎಲ್ಲಾ ಶಾಲೆಗಳು-ಕಾಲೇಜುಗಳು ಮತ್ತು ಬ್ಯಾಂಕುಗಳು ಕ್ಲೋಸ್ ಆಗಿರಲಿವೆ. ಈಗಾಗಲೇ ಏಪ್ರಿಲ್ 5ರಂದು ಬಾಬು ಜಗಜೀವನ್ ರಾಮ್ ಜನ್ಮ ದಿನಾಚರಣೆ ಹಿನ್ನೆಲೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಏಪ್ರಿಲ್ 24ರಿಂದ ರಾಜ್ಯದಲ್ಲಿ ಶಾಲೆಗಳಿಗೆ ಬೇಸಿಗೆ ರಜೆ ಪ್ರಾರಂಭವಾಗಲಿದೆ. ಹೀಗಾಗಿ ಈ ವರ್ಷದ ಆರಂಭದಿಂದಲೂ ಶಾಲೆಗಳಿಗೆ ಸಾಲು ಸಾಲು ಸಿಕ್ಕಂತಾಗಿವೆ.
ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಇಂತಿದೆ ನೋಡಿ
* 2025ರ ಜನವರಿ 14: ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
* 2025ರ ಜನವರಿ 26: ಗಣರಾಜ್ಯೋತ್ಸವ
* 2025ರ ಫೆಬ್ರವರಿ 26: ಮಹಾ ಶಿವರಾತ್ರಿ
* 2025ರ ಮಾರ್ಚ್ 31: ಖುತುಬ್ ಎ ರಂಜಾನ್
* 2025ರ ಏಪ್ರಿಲ್ 10: ಮಹಾವೀರ ಜಯಂತಿ
* 2025ರ ಏಪ್ರಿಲ್ 14: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ
* 2025ರ ಏಪ್ರಿಲ್ 18: ಗುಡ್ ಫ್ರೈಡೇ
* 2025ರ ಏಪ್ರಿಲ್ 30: ಬಸವ ಜಯಂತಿ, ಅಕ್ಷಯ ತೃತೀಯ
* 2025ರ ಮೇ 01: ಕಾರ್ಮಿಕ ದಿನಾಚರಣೆ
* 2025ರ ಜೂನ್ 07: ಬಕ್ರೀದ್
* 2025ರ ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
* 2025ರ ಆಗಸ್ಟ್ 27: ಗಣೇಶ ಚತುರ್ಥಿ
* 2025ರ ಸೆಪ್ಟೆಂಬರ್ 05: ಈದ್ ಮಿಲಾದ್
* 2025ರ ಅಕ್ಟೋಬರ್ 1: ಮಹಾನವಮಿ, ಆಯುಧಪೂಜೆ, ವಿಜಯದಶಮಿ
* 2025ರ ಅಕ್ಟೋಬರ್ 2: ಗಾಂಧಿ ಜಯಂತಿ
* 2025ರ ಅಕ್ಟೋಬರ್ 7: ಮಹರ್ಷಿ ವಾಲ್ಮೀಕಿ ಜಯಂತಿ
* 2025ರ ಅಕ್ಟೋಬರ್ 20: ನರಕ ಚತುರ್ದಶಿ
* 2025ರ ಅಕ್ಟೋಬರ್ 22: ಬಲಿಪಾಡ್ಯಮಿ, ದೀಪಾವಳಿ
* 2025ರ ನವೆಂಬರ್ 01: ಕನ್ನಡ ರಾಜ್ಯೋತ್ಸವ
* 2025ರ ಡಿಸೆಂಬರ್ 25: ಕ್ರಿಸ್‌ಮಸ್ ಹಬ್ಬ
ಇದನ್ನೂ ಓದಿ: ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ:: ಬಿಜೆಪಿ ನಾಯಕರ ಆರೋಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು!!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.ವ









