ಮಹಿಳಾ ದಿನಾಚರಣೆಗೂ ಮುಂಚೆಯೇ ಕೇಂದ್ರ ಸರ್ಕಾರದಿಂದ ಗುಡ್‌ ನ್ಯೂಸ್..! ಗ್ರಾಮೀಣ ಮಹಿಳೆಯರಿಗೆ ಉಪಯೋಗವಾಗಲಿದೆ ಈ ಹೊಸ ಯೋಜನೆ.

ಈ ಯೋಜನೆಯು ಮುಂಬರುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಈ ಯೋಜನೆಯನ್ನು ಜಾರಿಗೆ ತರಲಾಗುತ್ತದೆ. ಬಾಲಕಿಯರಿಗೆ ಎಲ್ಲ ರೀತಿಯ ಸುರಕ್ಷತೆ, ಸಮಾನತೆ ಮತ್ತು ಸಮಾಜದ ಆಭಿವೃದ್ದಿಯಲ್ಲಿ ಅವರ ಪಾತ್ರದ ಕುರಿತು ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ.

Written by - Manjunath Naragund | Last Updated : Mar 5, 2025, 04:48 PM IST
  • ಈ ಯೋಜನೆಯ ಮತ್ತಷ್ಟು ಉತ್ತೇಜಿಸಲು ಸರ್ಕಾರ ಮಾನಿಟರಿಂಗ್ ಡ್ಯಾಶ್‌ಬೋರ್ಡ್ ನಂತಹ ವಿವಿಧ ಆಧುನಿಕ ಯಂತ್ರೋಕರಣಗಳನ್ನು ಬಳಸಲು ಮುಂದಾಗಿದೆ.
  • ಈ ಯೋಜನೆಯ ಉಪಯೋಗವನ್ನು ಎಲ್ಲರು ಸಮರ್ಪಕವಾಗಿ ಬಳಸಿಕೊಳ್ಳಬಹುದು.
  • ಸಚಿವಾಲಯವು ಮಾರ್ಚ್ 8, 2025 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ರಾಷ್ಟ್ರವ್ಯಾಪಿ ಮಹಿಳಾ ಗ್ರಾಮ ಸಭೆಗಳನ್ನು ಆಯೋಜಿಸುವ ನಿರ್ಧಾರ ಕೈಗೊಂಡಿದೆ.
 ಮಹಿಳಾ ದಿನಾಚರಣೆಗೂ ಮುಂಚೆಯೇ ಕೇಂದ್ರ ಸರ್ಕಾರದಿಂದ ಗುಡ್‌ ನ್ಯೂಸ್..! ಗ್ರಾಮೀಣ ಮಹಿಳೆಯರಿಗೆ ಉಪಯೋಗವಾಗಲಿದೆ ಈ ಹೊಸ ಯೋಜನೆ.

ನವದೆಹಲಿ: ಗ್ರಾಮೀಣ ಭಾಗದ ಮಹಿಳೆಯರ ಅಭಿವೃದ್ದಿಗಾಗಿ ಈಗ ಪಂಚಾಯತ್ ರಾಜ್ ಸಚಿವಾಲಯವು ಹೊಸ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದೆ.ಅದರಲ್ಲೂ ಗ್ರಾಮೀಣ ಭಾಗದ ಪಂಚಾಯತಿಯ ಮಟ್ಟದಲ್ಲಿ ಲಿಂಗ ಸಮಾನತೆಯನ್ನು ತರುವುದರ ಭಾಗವಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಆರಂಭಿಸಲಿದೆ ಎನ್ನಲಾಗಿದೆ.

Add Zee News as a Preferred Source

ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಮಾವೇಶದಲ್ಲಿ ಮಹಿಳೆಯರನ್ನೇ ಕೇಂದ್ರವಾಗಿಟ್ಟುಕೊಂಡು ಆರಂಭಿಸಿರುವ ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್‌" (MWFGP) ಯೋಜನೆಗೆ ಚಾಲನೆ ದೊರೆಯಲಿದೆ.

ಮಹಿಳಾ ದಿನಾಚರಣೆಗೆ ಗುಡ್‌ ನ್ಯೂಸ್..!

ಈ ಯೋಜನೆಯು ಮುಂಬರುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಈ ಯೋಜನೆಯನ್ನು ಜಾರಿಗೆ ತರಲಾಗುತ್ತದೆ.ಈ ಯೋಜನೆಯು ದೇಶದೆಲ್ಲೆಡೆ ಇರುವ ಎಲ್ಲಾ ಗ್ರಾಮ ಪಂಚಾಯತ್‌ಗಳ ಅಡಿಯಲ್ಲಿ ಬರುವ ಎಲ್ಲ ಹಿಂದುಳಿದ ಮಹಿಳೆಯರು ಮತ್ತು ಬಾಲಕಿಯರಿಗೆ ಎಲ್ಲ ರೀತಿಯ ಸುರಕ್ಷತೆ, ಸಮಾನತೆ ಮತ್ತು ಸಮಾಜದ ಆಭಿವೃದ್ದಿಯಲ್ಲಿ ಅವರ ಪಾತ್ರದ ಕುರಿತು ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ.

ಈ ಯೋಜನೆಯ ಪ್ರಾಮುಖ್ಯತೆ: 

ಮಹಿಳೆಯರ ಸರ್ವತೋಮುಖ ಅಭಿವೃದ್ದಿಯೇ ಈ ಯೋಜನೆಯ ಮುಖ್ಯ ಧ್ಯೇಯವಾಗಿದ್ದು, ಇದರ ಭಾಗವಾಗಿ  ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಮಾದರಿ ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್ ಅನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಯೋಚಿಸಿದೆ.ಇದರಿಂದ  ಲಿಂಗ-ಸಮಾನತೆ ಮತ್ತು ಮಹಿಳಾ ಸ್ನೇಹಿ ಆಡಳಿತಕ್ಕೆ ಅನುಕೂಲವಾಗುವುದರೊಂದಿಗೆ ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.ಅಷ್ಟೇ ಅಲ್ಲದೆ ಈ ಯೋಜನೆಯ ಮೂಲಕ ಪ್ರತಿ ಪಂಚಾಯತ್‌ಗಳ ಅಡಿಯಲ್ಲಿಬರುವ ಎಲ್ಲ ಗ್ರಾಮೀಣ ಸಮುದಾಯಗಳನ್ನು ಬೆಳೆಸುವ ದೃಷ್ಟಿಕೋನವನ್ನು ಕೇಂದ್ರ ಸರ್ಕಾರ ಹೊಂದಿದೆ.

ಈ ಸಮಾವೇಶದಲ್ಲಿ ಗುರುತಿಸಲಾದ ಗ್ರಾಮ ಪಂಚಾಯತ್‌ಗಳ ಚುನಾಯಿತ ಪ್ರತಿನಿಧಿಗಳು ಮತ್ತು ಸಂಬಂದಪಟ್ಟ ಅಧಿಕಾರಿಗಳಿಗೆ ಈ ಯೋಜನಯ ಕರಿತು ಸಂಪೂರ್ಣವಾಗಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಮತ್ತು ದೇಶಾದ್ಯಂತ ಪಂಚಾಯತ್‌ಗಳಲ್ಲಿ ಯಶಸ್ವಿ ಮಹಿಳಾ ಸ್ನೇಹಿ ಯೋಜನಾ ಕ್ರಮಗಳನ್ನು ಪ್ರದರ್ಶಿಸುವ ಮಾಹಿತಿಯುಕ್ತ ವೀಡಿಯೊಗಳನ್ನು ಪ್ರಸಾರ ಮಾಡುವ ಮೂಲಕ ಇದರ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಲು ಕ್ರಮ ಕೈಗೊಂಡಿದೆ.

ಈ ಯೋಜನೆಯ ಮತ್ತಷ್ಟು ಉತ್ತೇಜಿಸಲು ಸರ್ಕಾರ ಮಾನಿಟರಿಂಗ್ ಡ್ಯಾಶ್‌ಬೋರ್ಡ್ ನಂತಹ ವಿವಿಧ ಆಧುನಿಕ ಯಂತ್ರೋಕರಣಗಳನ್ನು ಬಳಸಲು ಮುಂದಾಗಿದೆ.ಈ ಯೋಜನೆಯ ಉಪಯೋಗವನ್ನು ಎಲ್ಲರು ಸಮರ್ಪಕವಾಗಿ ಬಳಸಿಕೊಳ್ಳಬಹುದು. ಇಂದಿನ ಸಮಾವೇಶದ ನಂತರ, ಸಚಿವಾಲಯವು ಮಾರ್ಚ್ 8, 2025 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ರಾಷ್ಟ್ರವ್ಯಾಪಿ ಮಹಿಳಾ ಗ್ರಾಮ ಸಭೆಗಳನ್ನು ಆಯೋಜಿಸುವ ನಿರ್ಧಾರ ಕೈಗೊಂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

About the Author

Trending News