Goonch catfish : ಮೀನುಗಳಲ್ಲಿ ಹಲವಾರು ವಿಧಗಳಿಗೆ, ಕೆಲವೊಂದಿಷ್ಟು ಅಪರೂಪದ ಮೀನುಗಳಿಗೆ ಬೇಡಿಕೆ ಜಾಸ್ತಿ. ಒಂದು ವೇಳೆ ಅಂತಹ ವಿಶಿಷ್ಟ ಮೀನು ಮೀನುಗಾರರ ಬಲೆಗೆ ಬಿದ್ದರೆ ಅವರ ಅದೃಷ್ಟವೇ ಬದಲಾಗುತ್ತದೆ. ಈ ಪೈಕಿ ಇತ್ತೀಚಿಗೆ ಮೀನುಗಾರರೊಬ್ಬರು ಬಿಸಿದ ಬಲೆಗೆ ಬಿದ್ದ ಫಿಶ್ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತಿರಾ..

ಒಡಿಶಾ : ಇಲ್ಲಿನ ಸುಬರ್ಣಾಪುರ ಜಿಲ್ಲೆಯ ಬಿನಿಕಾ ಪಟ್ಟಣದ ಮಹಾನದಿ ನದಿಯಲ್ಲಿ ಮೀನುಗಾರಿಕೆಗೆ ಹೋದ ಮೀನುಗಾರರು ಅಪರೂಪದ ಮೀನನ್ನು ಹಿಡಿದಿದ್ದಾರೆ. ಬಲೆ ಬೀಸಿದ ನಂತರ ಏಳೆದಾಗ ಭಾರವಾದಂತೆ ಭಾಸವಾಗಿದೆ, ಸಂಪೂರ್ಣವಾಗಿ ಅದನ್ನು ಮೇಲಕ್ಕೆತ್ತಿದಾಗ, ಆರು ಅಡಿ ಉದ್ದ, 100 ಕೆಜಿ ತೂಕದ ಮೀನು ಕಂಡು ಬಂದಿದೆ..
ಈ ಮೀನಿನ ವೈಜ್ಞಾನಿಕ ಹೆಸರು 'ಗೂಂಚ್ ಕ್ಯಾಟ್ಫಿಶ್'. ಸ್ಥಳೀಯರು ಇದನ್ನು ಬೋಧಾ ಫಿಶ್ ಎಂದು ಕರೆಯುತ್ತಾರೆ. ತುಂಬಾ ಭಾರವಾಗಿ ಬೆಳೆಯುವ ಈ ಮೀನುಗಳು ಔಷಧೀಯ ಮೌಲ್ಯಗಳನ್ನು ಹೊಂದಿವೆ ಎಂದು ಮೀನುಗಾರರು ಹೇಳುತ್ತಾರೆ. ಪ್ರಸ್ತುತ ಈ ಮೀನನ್ನು ನೋಡಲು ಜನ ಮುಗಿ ಬೀಳುತ್ತಿದ್ದಾರೆ.
ಅಂದಹಾಗೆ, ಮಾರುಕಟ್ಟೆಯಲ್ಲಿ ಈ ಮೀನಿನ ಒಂದು ಕಿಲೋ ಮಾಂಸದ ಬೆಲೆ 300 ರೂ. ವರೆಗೆ ಬೆಲೆ ಇದೆ. ಪ್ರಸ್ತುತ ಮೀನುಗಾರರ ಬಲೆಗೆ ಬಿದ್ದ ಮೀನಿನ ತೂಕ 100 ಕೆಜಿ ಇದ್ದು, ಸುಮಾರು 30,000 ವರೆಗೆ ಬೆಲೆ ಬಾಳುತ್ತೆ.. ಈ ಮೀನಿನ ಮಾಂಸ ಸೇವನೆಯಿಂದ ದೇಹದ ಬಲ ಹೆಚ್ಚಾಗುತ್ತೆ, ಕೊಬ್ಬು ಕಡಿಮೆಯಾಗುತ್ತದೆ ಮತ್ತು ಕೀಲು ನೋವು ಸುಧಾರಣೆ ಕಾಣುತ್ತದೆಯಂತೆ.
ನಮ್ಮ ಜೀವನದಲ್ಲಿ ಇಷ್ಟೊಂದು ದೊಡ್ಡ ಮೀನು ಹಿಡಿಯುತ್ತಿರುವುದು ಇದೇ ಮೊದಲು, ಈ ಹಿಂದೆ ನಾವು ಹೆಚ್ಚಾಗಿ 30-40 ಕೆಜಿ ಬೋಧಾ ಮೀನು ಹಿಡಿಯುತ್ತಿದ್ದೆವು. ಆದರೆ ಇದು ನೂರಕ್ಕೆ ಹತ್ತಿರದಲ್ಲಿದೆ. ಇದು ಗಂಗಾಮಾತೆಯ ಕೃಪೆ ಅಂತ ಮೀನುಗಾರ ಅನಂತರಾಮ್ ಮುದುಲಿ ಸಂತೋಷ ವ್ಯಕ್ತಿಪಡಿಸಿದರು. ಈ ಘಟನೆಯು ಬಿನಿಕಾ ಪ್ರದೇಶದಲ್ಲಿ ಮಾತ್ರವಲ್ಲದೆ ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ಕುತೂಹಲವನ್ನು ಹುಟ್ಟುಹಾಕಿದೆ.