ಸರ್ಕಾರದ ಮಾಸ್ಟರ್ ಪ್ಲಾನ್: ನಕಲಿ ಬಿಲ್ ರಚಿಸಿ ತೆರಿಗೆ ವಂಚಿಸುವವರಿಗೆ ಎದುರಾಗಲಿದೆ ಸಂಕಷ್ಟ!
GST: ತೆರಿಗೆ ಸಂಗ್ರಹವು ಕುಸಿಯಲು ಕಾರಣವೇನು ಎಂಬುದನ್ನು ತನಿಖೆ ಮಾಡಲು ತಂಡವೊಂದನ್ನು ರಚಿಸಲಾಗಿದೆ.
ನವದೆಹಲಿ: ನಕಲಿ ಬಿಲ್ ಗಳನ್ನು ರಚಿಸಿ ಸರ್ಕಾರಕ್ಕೆ ತೆರಿಗೆ ವಂಚಿಸುವವರಿಗೆ ಇನ್ಮುಂದೆ ಸಂಕಷ್ಟ ಎದುರಾಗಲಿದೆ. ತೆರಿಗೆ ಅಧಿಕಾರಿಗಳು ಇನ್ಪುಟ್ ತೆರಿಗೆ ಮೂಲಕ ತೆರಿಗೆ ವಂಚಿಸುವವರ ವಿರುದ್ಧ ತನಿಖೆ ಮಾಡುವ ಸಾಧ್ಯತೆಯಿದೆ. ಇದು ನೇರ ತೆರಿಗೆ ಮತ್ತು ಸಾರ್ವಜನಿಕ ಖಜಾನೆಗೆ ಸಂಬಂಧಿಸಿದೆ.
ಮಂತ್ರಿ ಮಂಡಲದ ಸಭೆಯಲ್ಲಿ ಕೆಲವು ಉದ್ಯಮಿಗಳು ನಕಲಿ ಬಿಲ್ ಗಳ ಮೂಲಕ ಇನ್ಪುಟ್ ತೆರಿಗೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಕಾರಣಕ್ಕಾಗಿ, ಬೃಹತ್ ಮೊತ್ತದ ತೆರಿಗೆ ಸಂಗ್ರಹವು ಇನ್ಪುಟ್ ಕ್ರೆಡಿಟ್ ಆಗಿ ಹಿಂದಿರುಗುತ್ತಿದೆ ಎನ್ನಲಾಗುತ್ತಿದ್ದು, ಜಿಎಸ್ಟಿ ಸಂಗ್ರಹದ ಇಳಿಕೆಯಾಗಿರುವುದರಿಂದ ಅಧಿಕಾರಿಗಳು ಚಿಂತಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹ ಕುಸಿಯಲು ಕಾರಣ ಏನೆಂಬುದನ್ನು ಕಂಡು ಹಿಡಿಯಲು ತಂಡವೊಂದನ್ನು ರಚಿಸಲಾಗಿದೆ.
80% ಇನ್ಪುಟ್ ತೆರಿಗೆ ಕ್ರೆಡಿಟ್:
2018-19ರ ಆರ್ಥಿಕ ವರ್ಷದಲ್ಲಿ ಸರಾಸರಿ ಮಾಸಿಕ GST ಸಂಗ್ರಹ 96,000 ಕೋಟಿ ರೂಪಾಯಿಗಳಾಗಿವೆ. ಒಟ್ಟು ಜಿಎಸ್ಟಿ ಭಾದ್ಯತೆಗಳಲ್ಲಿ 80% ಇನ್ಪುಟ್ ತೆರಿಗೆ ಕ್ರೆಡಿಟ್ ಮೂಲಕ ಇತ್ಯರ್ಥಗೊಳ್ಳುತ್ತದೆ. ಕೇವಲ 20 ಪ್ರತಿಶತ ತೆರಿಗೆಯನ್ನು ನಗದು ರೂಪದಲ್ಲಿ ಸಂಗ್ರಹಿಸಲಾಗಿದೆ. ಪ್ರಸಕ್ತ ವ್ಯವಸ್ಥೆಯಲ್ಲಿ ಇನ್ಪುಟ್ ತೆರಿಗೆ ಸಾಲಗಳನ್ನು ಸಲ್ಲಿಸುವ ಮತ್ತು ಸರಿಹೊಂದಿಸುವ ನಡುವೆ ದೀರ್ಘ ಅಂತರವಿದೆ ಎಂದು ಮೂಲಗಳು ಹೇಳಿವೆ. ನಕಲಿ ಬಿಲ್ಗಳ ಮೂಲಕ ಹೀಗೆ ಮಾಡುತ್ತಿರುವ ಸಾಧ್ಯತೆಯಿದೆ. ಹೊಸ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ಫೈಲ್ ಮಾಡಿದ ನಂತರ, ಅಧಿಕಾರಿಗಳು ನೈಜ ಸಮಯದಲ್ಲಿ ಹಕ್ಕುಗಳನ್ನು ಹೊಂದಿಸಲು ಸೌಲಭ್ಯವನ್ನು ಹೊಂದಿರುತ್ತಾರೆ. ಮೂಲಗಳ ಪ್ರಕಾರ ಅಧಿಕಾರಿಗಳು ಈಗ ಐಟಿಸಿ ಹೆಚ್ಚಿನ ದಾಖಲೆ ಪರಿಶೀಲಿಸುತ್ತಾರೆ ಎಂದು ಹೇಳಲಾಗಿದೆ. ಇದರಿಂದ ಐಟಿ ರಿಟರ್ನ್ಸ್ ನೈಜವಾದದ್ದೋ ಅಥವಾ ನಕಲಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ಯಾವಾಗ ಎಷ್ಟು ಜಿಎಸ್ಟಿ ಸಂಗ್ರಹ (2018-19)?
ಎಪ್ರಿಲ್ | ₹1.03 ಲಕ್ಷ ಕೋಟಿ |
ಮೇ | ₹94,016 ಲಕ್ಷ ಕೋಟಿ |
ಜೂನ್ | ₹95,610 ಕೋಟಿ |
ಜುಲೈ | ₹96,483 ಕೋಟಿ |
ಆಗಸ್ಟ್ | ₹93,960 ಕೋಟಿ |
ಸೆಪ್ಟೆಂಬರ್ | ₹94,442 ಕೋಟಿ |
ಅಕ್ಟೋಬರ್ | ₹1,00,710 ಕೋಟಿ |
ನವೆಂಬರ್ | ₹97,637 ಕೋಟಿ |
ಡಿಸೆಂಬರ್ | ₹94,726 ಕೋಟಿ |