ವಿಶ್ವದ ಅತ್ಯಂತ ಕೊಳಕು ಮನುಷ್ಯ ಎಂದೇ ಕುಖ್ಯಾತಿ ಈತ, ಕಾರಣವೇನು ಗೊತ್ತಾ?

  The ugliest man in the world : ಮಾದ್ಯಮ ಮೂಲಗಳಿಂದ ವಿಶ್ವದ ಅತ್ಯಂತ ಕೊಳಕು ಮನುಷ್ಯ ಎಂದೇ ಕರೆಸಿಕೊಳ್ಳುತ್ತಿದ್ದ ಒಬ್ಬ ಸನ್ಯಾಸಿಯು ದಶಕಗಳ ನಂತರ ಮೈಯನ್ನು ತೊಳೆದುಕೊಂಡ ಕೆಲವೇ ತಿಂಗಳುಗಳ ನಂತರ 94 ನೇ ವಯಸ್ಸಿನಲ್ಲಿ ನಿಧನರಾದರು. 

Written by - Savita M B | Last Updated : Jun 10, 2023, 10:56 AM IST
  • ಅಮೂ ಹಾಜಿ ಎಂಬುವವರು ಶತಮಾನಕ್ಕೂ ಹೆಚ್ಚು ಕಾಲ ಸೋಪು ಮತ್ತು ನೀರನ್ನು ಮುಟ್ಟದೇ ಜೀವಿಸಿದ್ದರು
  • ಇದು ತಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಹೆದರಿದ್ದರು.
  • ಸ್ನಾನ ಮಾಡಿದ ಕೆಲವೇ ತಿಂಗಳುಗಳಲ್ಲಿ ನಿಧನರಾಗಿದ್ದಾರೆ
ವಿಶ್ವದ ಅತ್ಯಂತ ಕೊಳಕು ಮನುಷ್ಯ ಎಂದೇ ಕುಖ್ಯಾತಿ ಈತ, ಕಾರಣವೇನು ಗೊತ್ತಾ?  title=

Amu Haji : ದಕ್ಷಿಣ ಪ್ರಾಂತ್ಯದ ಫಾರ್ಸ್‌ನ ಇರಾನಿಯನ್ನಲ್ಲಿ ವಾಸಿಸುತ್ತಿದ್ದ ಅಮೂ ಹಾಜಿ ಎಂಬುವವರು ಶತಮಾನಕ್ಕೂ ಹೆಚ್ಚು ಕಾಲ ಸೋಪು ಮತ್ತು ನೀರನ್ನು ಮುಟ್ಟದೇ ಜೀವಿಸಿದ್ದರು. ಇದು ತಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಹೆದರಿದ್ದರು. ಅವರ ಸುತ್ತ ಮುತ್ತಲಿನ ಜನ ಇವರಿಗೆ ಸ್ನಾನ ಮಾಡಿಸಲು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡಿದ್ದರು ಎನ್ನಲಾಗುತ್ತಿದೆ. 

ಅಮೂ ಹಾಜಿ ಅವರ ಜೀವ ಹೇಗಿತ್ತೆಂದರೆ ಅವರು ಹೆಚ್ಚು ಧೂಮಪಾನ ಮಾಡುವುದು, ಅವರ ನೆಚ್ಚಿನ ಊಟ ಎಂದರೆ ಅದು ಮುಳ್ಳು ಹಂದಿ ಇವರು ನೆಲದ ರಂಧ್ರ ಮತ್ತು ದೇಜ್ಗಾ ಗ್ರಾಮದಲ್ಲಿ ಸಬಂಧಪಟ್ಟ ನೆರೆಹೊರೆಯವರು ನಿರ್ಮಿಸಿದ ಇಟ್ಟಿಗೆ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. 

ಇದನ್ನೂ ಓದಿ-ಮಣಿಪುರದಲ್ಲಿ ಘನಘೋರ ಕೃತ್ಯ : ಸೇನಾ ಸಮವಸ್ತ್ರದಲ್ಲಿ ಬಂದು ಮೂವರ ಮೇಲೆ ಗುಂಡು ಹಾರಿಸಿದ ಉಗ್ರರು !

ಈ ಮನುಷ್ಯ ವರ್ಷಗಳ ಕಾಲ ಸ್ನಾನ ಮಾಡದೇ ಇದ್ದುದರಿಂದ ಅವನ ಚರ್ಮವು ಕಪ್ಪನೆಯ ಬಣ್ಣ ಮತ್ತು ಕೀವಿನಿಂದ ಆವರಿಸಿತ್ತು, ಸುದ್ದಿ ಮೂಲಗಳ ಪ್ರಕಾರ ಅವರು ಸ್ಥಳೀಯರ ಒತ್ತಡಕ್ಕೆ ಮಣಿದು ಆತ ಸ್ನಾನ ಮಾಡಿದ್ದನು ಅವನು ಸ್ನಾನ ಮಾಡಿದ ಕೆಲವೇ ತಿಂಗಳುಗಳಲ್ಲಿ ನಿಧನರಾದರು ಎಂದು ಹೇಳಲಾಗಿದೆ. ಮತ್ತು ಅವರು ಈ ರೀತಿ ಸೋಪು ಹಾಗೂ ನೀರಿನಿಂದ ದೂರ ಉಳಿದಿರುವುದಕ್ಕೆ ಕಾರಣವೆಂದರೆ ಅವರಿಗೆ ಯಾರೋ ಅದರಿಂದ ಹಾನಿಯಾಗುತ್ತದೆ ಎಂದು ಹೇಳಿರುತ್ತಾರೆ, ಇಲ್ಲವಾದರೆ ಆತನಿಗೆ ಶುದ್ಧವಾದ ನೀರನ್ನು ಕುಡಿಯಲು ಹಾಗೂ ಸ್ನಾನ ಮಾಡಲು ನೀಡಿದ ಪರಿಣಾಮವೇ ಅವನ ಸಾವು ಎಂದು ಕೆಲವು ಮಾದ್ಯಮ ಮೂಲಗಳು ತಿಳಿಸಿವೆ. 

ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ಸ್ನಾನ ಮಾಡದೇ ಅತಿ ಹೆಚ್ಚು ಕಾಲ ಜೀವನ ಸಾಗಿಸಿದ ವ್ಯಕ್ತಿ ಈತನೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಅದೇ ರೀತಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು 35 ವರ್ಷಗಳ ಕಾಲ ಹಲ್ಲು ಉಜ್ಜದೇ ಜೀವಿಸಿದ್ದ ಎಂದು ವರದಿಯಾಗಿದೆ. ಅಂದಿನಿಂದ ಅವನಿಗೆ ಏನಾಯಿತು ಎಂಬುದು ತಿಳಿದುಬಂದಿಲ್ಲ. 

ಇದನ್ನೂ ಓದಿ-Haryana Politics: ಖಟ್ಟರ್ ಸರ್ಕಾರದಲ್ಲಿ ಅಸಮಾಧಾನದ ಹೊಗೆ, 2024ರ ಮುನ್ನವೇ ಬಿಜೆಪಿ ಕೈಜಾರಲಿದೆಯಾ ಹರ್ಯಾಣಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News