ತಮಿಳುನಾಡಿನಲ್ಲಿ ಭಾರಿ ಮಳೆ; ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ

ಈ ಪ್ರದೇಶಗಳಲ್ಲದೆ ಕೇರಳ, ಮಹೇ ಮತ್ತು ಲಕ್ಷದ್ವೀಪದಲ್ಲೂ ಸಹ ದಿನವಿಡೀ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತದ ಹವಾಮಾನ ಇಲಾಖೆ ತನ್ನ ಅಖಿಲ ಹವಾಮಾನ ಸಾರಾಂಶ ಮತ್ತು ಮುನ್ಸೂಚನೆ ಬುಲೆಟಿನ್ ನಲ್ಲಿ ಭವಿಷ್ಯ ನುಡಿದಿದೆ.  

Last Updated : Dec 3, 2019, 09:58 AM IST
ತಮಿಳುನಾಡಿನಲ್ಲಿ ಭಾರಿ ಮಳೆ; ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ title=
Photo courtesy: ANI

ಶಿವಗಂಗ (ತಮಿಳುನಾಡು): ಸಕ್ರಿಯ ಈಸ್ಟರ್ಲಿ ತರಂಗದ ಪ್ರಭಾವದಿಂದಾಗಿ ಮಂಗಳವಾರವೂ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಪ್ರತ್ಯೇಕ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ.

ಕಳೆದ ಕೆಲವು ದಿನಗಳಿಂದ, ಈ ಪ್ರದೇಶಗಳು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲಾಡಳಿತವು ಇಂದು ತಮಿಳುನಾಡಿನ ಶಿವಗಂಗದ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಿದೆ.

ಈ ಪ್ರದೇಶಗಳಲ್ಲದೆ ಕೇರಳ, ಮಹೇ ಮತ್ತು ಲಕ್ಷದ್ವೀಪದಲ್ಲೂ ಸಹ ದಿನವಿಡೀ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತದ ಹವಾಮಾನ ಇಲಾಖೆ ತನ್ನ ಅಖಿಲ ಹವಾಮಾನ ಸಾರಾಂಶ ಮತ್ತು ಮುನ್ಸೂಚನೆ ಬುಲೆಟಿನ್ ನಲ್ಲಿ ಭವಿಷ್ಯ ನುಡಿದಿದೆ.

ಇಂದಿನಿಂದ ಪೆನಿನ್ಸುಲರ್ ಭಾರತದಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಮುನ್ಸೂಚನೆ ಸಂಸ್ಥೆ ಊಹಿಸಿದೆ.

"ಡಿಸೆಂಬರ್ 3 ರಂದು ಬೆಳಿಗ್ಗೆ ಉತ್ತರಾಖಂಡ, ಅಸ್ಸಾಂ, ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದ ಬಯಲು ಪ್ರದೇಶಗಳಲ್ಲಿ ದಟ್ಟವಾದ ಮಂಜು ಕಂಡುಬರುತ್ತದೆ" ಎಂದು ಐಎಂಡಿ ತನ್ನ ಬುಲೆಟಿನ್ ನಲ್ಲಿ ತಿಳಿಸಿದೆ.

Trending News