ಉತ್ತರಾಖಂಡದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಹೆಲಿಕಾಪ್ಟರ್ ಅಪಘಾತ; 3 ಸಾವು
ಪ್ರವಾಹಕ್ಕೆ ಸಿಲುಕಿರುವ ಉತ್ತರಾಖಂಡದ ಉತ್ತರ ಕಾಶಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಹೆಲಿಕಾಪ್ಟರ್ ಬುಧವಾರ ಅಪಘಾತಕ್ಕೀಡಾಗಿದೆ.
ಉತ್ತರಕಾಶಿ: ಪ್ರವಾಹಕ್ಕೆ ಸಿಲುಕಿರುವ ಉತ್ತರಾಖಂಡದ ಉತ್ತರ ಕಾಶಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಹೆಲಿಕಾಪ್ಟರ್ ಬುಧವಾರ ಅಪಘಾತಕ್ಕೀಡಾಗಿದೆ. ಉತ್ತರಾಖಂಡದ ಉತ್ತರಕಾಶಿಯ ಮೊಲ್ಡಿ ಗ್ರಾಮದ ಬಳಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಈ ದುರಂತ ಘಟನೆಯಲ್ಲಿ ಚಾಪರ್‌ನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ.
ಸುದ್ದಿಸಂಸ್ಥೆ ಎಎನ್ಐ ಪ್ರಕಾರ, ಚಾಪರ್‌ನಲ್ಲಿದ್ದ ವ್ಯಕ್ತಿಗಳನ್ನು - ಪೈಲಟ್ ರಾಜ್‌ಪಾಲ್, ಸಹ ಪೈಲಟ್ ಕಪ್ತಾಲ್ ಲಾಲ್ ಮತ್ತು ಸ್ಥಳೀಯ ನಿವಾಸಿ ರಮೇಶ್ ಸಾವರ್ ಎಂದು ಗುರುತಿಸಲಾಗಿದೆ.
ಈ ಹೆಲಿಕಾಪ್ಟರ್ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಕ್ಕಿಬಿದ್ದ ಜನರಿಗೆ ಪರಿಹಾರ ಸಾಮಗ್ರಿಗಳನ್ನು ಸಾಗಿಸುತ್ತಿತ್ತು.
ಮೇಘ ಸ್ಫೋಟದ ನಂತರ ಈ ಪ್ರದೇಶದಲ್ಲಿ ಪ್ರವಾಹ, ಭೂಕುಸಿತದಂತಹ ಘಟನೆಗಳು ನಡೆಯುತ್ತಿವೆ. ಮಹಾಪ್ರವಾಹದಿಂದಾಗಿ ಹಲವು ಮನೆಗಳು ನಾಶವಾಗಿವೆ. ಮಾನವರ ಜೊತೆಗೆ, ಹೆಚ್ಚಿನ ಸಂಖ್ಯೆಯ ಪ್ರಾಣಿಗಳು ಶಿಲಾಖಂಡರಾಶಿಗಳ ಕೆಳಗೆ ಹೂತುಹೋಗಿವೆ.
ಈ ಕ್ಲೌಡ್‌ಬರ್ಸ್ಟ್ ಅರಾಕೋಟ್, ಮೊಲ್ಡಿ, ಮೊಲ್ಡಾ, ಸ್ಯಾನೆಲ್, ಟಿಕೋಚಿ ಮತ್ತು ದ್ವಿಕ್ನು ಮುಂತಾದ ಪ್ರದೇಶಗಳಲ್ಲಿ ಹಾನಿಯನ್ನುಂಟುಮಾಡಿದೆ.