ಕೇವಲ ರೂ.5000 ನೀಡಿ ಬುಕ್ ಮಾಡಿ Honda Jazz, ಶೀಘ್ರದಲ್ಲಿಯೇ ಬಿಡುಗಡೆ

Honda Jazz ಕಾರನ್ನು ನೀವು ಮನೆಯಿಂದಲೂ ಕೂಡ ಬುಕ್ ಮಾಡಬಹುದಾಗಿದೆ. ಇದಕ್ಕಾಗಿ 'ಹೋಂಡಾ ಫ್ರಮ್ ಹೋಮ್ ಪ್ಲಾಟ್ ಫಾರ್ಮ್ ಆರಂಭಿಸಲಾಗಿದೆ. ಹೊಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ನ ಅಧಿಕೃತ ವೆಬ್ ಸೈಟ್ ಗೂ ಕೂಡ ಭೇಟಿ ನೀಡಿ ನೂತನ ಜಾಜ್ ಕಾರನ್ನು ನೀವು ಬುಕ್ ಮಾಡಬಹುದಾಗಿದೆ.

Updated: Aug 10, 2020 , 06:08 PM IST
ಕೇವಲ ರೂ.5000 ನೀಡಿ ಬುಕ್ ಮಾಡಿ Honda Jazz, ಶೀಘ್ರದಲ್ಲಿಯೇ ಬಿಡುಗಡೆ

ನವದೆಹಲಿ: ಲಾಕ್ ಡೌನ್ ಅವಧಿಯಲ್ಲಿ ನಿಂತು ಹೋಗಿದ್ದ ಆಟೋ ಉದ್ಯಮ ಇದೀಗ ಮತ್ತೊಮ್ಮೆ ವೇಗ ಪಡೆದುಕೊಳ್ಳಲು ಆರಂಭಿಸಿದೆ. ಹೊಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ತನ್ನ ಪ್ರಿಮಿಯಂ ಹ್ಯಾಚ್ ಬ್ಯಾಕ್ ಜಾಜ್ (Jazz) ಕಾರಿನ ಪ್ರೀ ಲಾಂಚ್ ಬುಕಿಂಗ್ ಆರಂಭಿಸಿದೆ. ಇದನ್ನು ನೀವು ಆನ್ಲೈನ್ ನಲ್ಲಿ ಹಾಗೂ ಆಫ್ ಲೈನ್ ನಲ್ಲಿಯೂ ಕೂಡ ಮಾಡಬಹುದಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಕಂಪನಿ. ತನ್ನ ಕಂಪನಿಯ ಅಥಾರೈಸ್ದ್ ಡೀಲರ್ ಶಿಪ್ ಮಳಿಗೆಗೆ ಭೇಟಿ ನೀಡಿ ನೀವು ರೂ.21,000 ಮುಂಗಡ ಪಾವತಿಸಿ ಈ ಕಾರನ್ನು ಬುಕ್ ಮಾಡಬಹುದಾಗಿದೆ. ಈ ಕಾರನ್ನು ನೀವು ಮನೆಯಲ್ಲಿಯೇ ಕುಳಿತು ಕೂಡ ಆನ್ಲೈನ್ ನಲ್ಲಿ ಬುಕ್ ಮಾಡಬಹುದಾಗಿದೆ. ಇದಕ್ಕಾಗಿ 'ಹೊಂಡಾ ಫ್ರಮ್ ಹೋಮ್' ಪ್ಲಾಟ್ಫಾರ್ಮ್ ರಚಿಸಲಾಗಿದೆ. ಹೊಂಡಾ ಕಾರ್ಸ್ ಲಿಮಿಟೆಡ್ ವೆಬ್ ಸೈಟ್ ಗೆ ಭೇಟಿ ನೀಡಿಯೂ ಕೂಡ ಬುಕ್ ಮಾಡಬಹುದು. ಆನ್ಲೈನ್ ನಲ್ಲಿ ನೀವು ಕೇವಲ ರೂ.5000 ಪಾವತಿಸಿ ಈ ಕಾರನ್ನು ಮುಂಗಡವಾಗಿ ಕಾಯ್ದಿರಿಸಬಹುದು.

ಯಾವಾಗ ಬಿಡುಗಡೆಯಾಗಲಿದೆ ಈ ಕಾರು?
ಈ ಕಾರು ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಕುರಿತು ಕಂಪನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಇದೆ ತಿಂಗಳಿನಲ್ಲಿ ಈ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಕಂಪನಿ ಯೋಜನೆ ರೂಪಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ . ಈ ಕುರಿತು ಹೇಳಿಕೆ ನೀಡಿರುವ ಹೋಂಡಾ ಕಾರ್ಸ್ ಇಂಡಿಯಾದ ಮಾರ್ಕೆಟಿಂಗ್-ಸೇಲ್ಸ್ ನ ವೈಸ್ ಪ್ರೆಸಿಡೆಂಟ್ ಹಾಗೂ ಡೈರೆಕ್ಟರ್ ರಾಜೇಶ್ ಗೋಯಲ್, ಜಾಜ್ ಕಾರನ್ನು ಈ ತಿಂಗಳ ಅಂತ್ಯದವರೆಗೆ ಬಿಡುಗಡೆಗೊಳಿಸುವ ಯೋಜನೆ ಇದೆ ಎಂದು ಹೇಳಿದ್ದಾರೆ.  ಕಳೆದ ಹಲವು ವರ್ಷಗಳಿಂದ ಗ್ರಾಹಕರಲ್ಲಿ ಜಾಜ್ ಕಾರಿನ ಪೆಟ್ರೋಲ್ ಆವೃತ್ತಿಯ ಕಡೆಗೆ ಜನರ ಒಲವು ಹೆಚ್ಚಾಗಿದೆ. ಈ ಒಲವನ್ನು ಪರಿಗಣಿಸಿ ನೂತನ ಜಾಜ್ ಕಾರಿನ ಪೆಟ್ರೋಲ್ ಆವೃತ್ತಿಯ ಎರಡು ವಿಧಗಳಾಗಿರುವ ಮ್ಯಾನುಅಲ್ ಹಾಗೂ CVT ಗಳನ್ನು ಪರಿಚಯಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಮುಂಬರುವ ಹಬ್ಬದ ಸೀಸನ್ ವೇಳೆ ಈ ಕಾರಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸುವ ಸಾಧ್ಯತೆ ಇದೆ ಎಂದು ಗೋಯಲ್ ಹೇಳಿದ್ದಾರೆ. ಇನ್ನೊಂದೆಡೆ ಡಿಸೇಲ್ ಇಂಜಿನ್ ಹೊಂದಿರುವ ಕಾರಿನ ಬೇಡಿಕೆಯಲ್ಲಿ ಭಾರಿ ಇಳಿಮುಖವಾಗಿದೆ ಎಂಬುದು ತಿಳಿದುಬಂದಿದೆ.

ನೂತನ ಹೊಂಡಾ ಜಾಜ್ ಕಾರಿನ ವೈಶಿಷ್ಟ್ಯತೆ ಏನು?
ನೂತನ ಹೊಂಡಾ ಜಾಜ್ ಕಾರಿಗೆ ಸ್ಪೋರ್ಟ್ಸ್ ಕಾರಿನ ಲುಕ್ ನೀಡಲಾಗಿದೆ. ಇದರಲ್ಲಿ BS-VI ಇಂಜಿನ್ ನೀಡಲಾಗಿದೆ. 1.2 ಲೀಟರ್ ಪೆಟ್ರೋಲ್ ಇಂಜಿನ್ ಇದರಲ್ಲಿದ್ದು, ಮ್ಯಾನುಅಲ್ ಹಾಗೂ ವೆರೆಯೇಬಲ್ ಟ್ರಾನ್ಸ್ಮಿಶನ್ (CVT)ಎರಡೂ ವಿಧಗಳಲಿ ಇದು ಲಭ್ಯವಿದೆ. ಈ ವೈಶಿಷ್ಟ್ಯಗಳ ಜೊತೆಗೆ ಕ್ರೂಜ್ ಕಂಟ್ರೋಲ್, ಸ್ಮಾರ್ಟ್ ಎಂಟ್ರಿ, ಪುಶ್ ಸ್ಟಾರ್ಟ್ ಅಪ್ ಸಿಸ್ಟಂ ಇದರಲ್ಲಿವೆ. ಮಾರುಕಟ್ಟೆಯಲ್ಲಿ ಈ ಕಾರು ಹುಂಡೈ i20, ಮಾರುತಿ ಸುಜುಕಿ ಬಲೇನೋ ಹಾಗೂ ಟೊಯೋಟೋ ಗ್ಲಾಂಜಾ ಜೊತೆಗೆ ಈ ಕಾರು ಪೈಪೋಟಿ ನೀಡಲಿದೆ.