ಮನೆಯಲ್ಲಿ ಹೆಂಡತಿಯಿಲ್ಲದ್ದಕ್ಕೆ ವಿದ್ಯಾರ್ಥಿನಿಗೆ ಅಡುಗೆಗೆ ಕರೆದ ವಾರ್ಡನ್!

ಗೋವಿಂದ್ ಬಲ್ಲಾಭ್ ಪಂತ್ ಯುನಿವಿಟಿಯ ಹಾಸ್ಟೆಲ್ ವಾರ್ಡನ್ ತನ್ನ ಹೆಂಡತಿ ಮನೆಯಲ್ಲಿಲ್ಲದ ಕಾರಣ ಮಧ್ಯರಾತ್ರಿಯಲ್ಲಿ ಅವಳಿಗೆ ಅಡುಗೆ ಮಾಡಲು ಕರೆದಿದ್ದಾನೆ.

Updated: Nov 15, 2019 , 04:48 PM IST
ಮನೆಯಲ್ಲಿ ಹೆಂಡತಿಯಿಲ್ಲದ್ದಕ್ಕೆ ವಿದ್ಯಾರ್ಥಿನಿಗೆ ಅಡುಗೆಗೆ ಕರೆದ ವಾರ್ಡನ್!
ಸಾಂದರ್ಭಿಕ ಚಿತ್ರ

ನವದೆಹಲಿ: ಗೋವಿಂದ್ ಬಲ್ಲಾಭ್ ಪಂತ್ ಯುನಿವಿಟಿಯ ಹಾಸ್ಟೆಲ್ ವಾರ್ಡನ್ ತನ್ನ ಹೆಂಡತಿ ಮನೆಯಲ್ಲಿಲ್ಲದ ಕಾರಣ ಮಧ್ಯರಾತ್ರಿಯಲ್ಲಿ ಅವಳಿಗೆ ಅಡುಗೆ ಮಾಡಲು ಕರೆದಿದ್ದಾನೆ.

ಈ ಸಂದರ್ಭದಲ್ಲಿ ಹಾಸ್ಟೆಲ್ ವಾರ್ಡನ್ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಆಕೆ ಅಕ್ಟೋಬರ್ 2 ರಂದು ಕಾಲೇಜು ಅಧಿಕಾರಿಗಳಿಗೆ ದೂರು ನೀಡಿದ್ದಾಳೆ ಎನ್ನಲಾಗಿದೆ.ಪಂತ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ಡೀನ್ ಡಾ.ಸಲೀಲ್ ತಿವಾರಿ ಈ ಘಟನೆಯನ್ನು ಧೃಡಪಡಿಸಿದ್ದಾರೆ.

ಅಕ್ಟೋಬರ್‌ನಲ್ಲಿ ನಡೆದ ವಿಶ್ವವಿದ್ಯಾಲಯದ ಶಿಸ್ತು ಸಮಿತಿ ಸಭೆಯಲ್ಲಿ ಉಪಕುಲಪತಿ (ವಿಸಿ) ಅವರ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಇದಕ್ಕೆ ಸಾಕ್ಷಿಯಾಗಿ ವಿದ್ಯಾರ್ಥಿನಿ ವಾರ್ಡನ್ ಕಳಿಸಿದ ಸಂದೇಶಗಳನ್ನು ತೋರಿಸಿದ್ದಾಳೆ.

ಈ ಘಟನೆ ನಡೆದು 20 ದಿನಗಳೇ ಕಳೆದಿವೆ ಆದರೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ವಾರ್ಡನ್ ವಿರುದ್ಧ ನ್ಯಾಯಯುತ ಕ್ರಮ ಕೈಗೊಳ್ಳದಿದ್ದರೆ ಕೋರ್ಸ್ ತ್ಯಜಿಸಿ ಕ್ಯಾಂಪಸ್ ತೊರೆಯುವುದಾಗಿ ವಿದ್ಯಾರ್ಥಿನಿ ಬೆದರಿಕೆ ಹಾಕಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಈಗಾಗಲೇ ವಾರ್ಡನ್ ರ‍್ಯಾಗಿಂಗ್ ಆರೋಪ ಎದುರಿಸುತ್ತಿದ್ದು ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎನ್ನಲಾಗಿದೆ.