ಅಯೋಧ್ಯೆ ವಿವಾದದ ತೀರ್ಪು ಏನಾಗಲಿದೆ ಎಂದು ಬಿಜೆಪಿ, ಎನ್‌ಡಿಎ ನಾಯಕರಿಗೆ ಹೇಗೆ ಗೊತ್ತು?- ಒವೈಸಿ ಪ್ರಶ್ನೆ

ಬಿಜೆಪಿ ನಾಯಕರು ಸುಪ್ರೀಂ ಕೋರ್ಟ್ ತೀರ್ಪು ತಮ್ಮ ಪರವಾಗಿ ಬರಲಿದೆ ಎಂದು ಹೇಳುತ್ತಿದ್ದಾರೆ. ನ್ಯಾಯಾಲಯದ ತೀರ್ಪಿನ ಬಗ್ಗೆ ಇವರು ಹೇಗೆ ಹೇಳುತ್ತಾರೆ? ಎಂದು ಒವೈಸಿ ಪ್ರಶ್ನಿಸಿದ್ದಾರೆ.

Last Updated : Sep 18, 2019, 02:58 PM IST
ಅಯೋಧ್ಯೆ ವಿವಾದದ ತೀರ್ಪು ಏನಾಗಲಿದೆ ಎಂದು ಬಿಜೆಪಿ, ಎನ್‌ಡಿಎ ನಾಯಕರಿಗೆ ಹೇಗೆ ಗೊತ್ತು?- ಒವೈಸಿ ಪ್ರಶ್ನೆ title=

ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದದ ತೀರ್ಪು ಏನಾಗಲಿದೆ ಎಂಬ ಬಗ್ಗೆ ಬಿಜೆಪಿ ಮತ್ತು ಎನ್‌ಡಿಎ ಹೇಗೆ ಗೊತ್ತು ಎಂದು ಎಐಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಪ್ರಶ್ನಿಸಿದ್ದಾರೆ.

ಅಯೋಧ್ಯೆ ಪ್ರಕರಣದ 26ನೇ ದಿನದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಈ ವಿವಾದದ ಚರ್ಚೆಯನ್ನು ಅಕ್ಟೋಬರ್ 18 ರೊಳಗೆ ಮುಕ್ತಾಯಗೊಳಿಸಲಾಗುವುದು ಎಂದು ಎಲ್ಲಾ ಪಕ್ಷಗಳಿಗೆ ತಿಳಿಸಿರುವ ಬೆನ್ನಲ್ಲೇ ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ಪಕ್ಷವು ಚರ್ಚೆಗೆ ಪೂರ್ಣ ಸಮಯವನ್ನು ಪಡೆಯಬೇಕು ಎಂದಿದ್ದಾರೆ.

ರಾಮ ಮಂದಿರ ವಿಷಯದ ಬಗ್ಗೆ ಮಧ್ಯಸ್ಥಿಕೆದಾರರ ಪತ್ರ ಸೋರಿಕೆಯಾಗಿರುವ ಬಗ್ಗೆ ಪ್ರಶ್ನಿಸಿದ ಓವೈಸಿ, ಈ ಪತ್ರವು ಮಾಧ್ಯಮಗಳಿಗೆ ಹೇಗೆ ತಲುಪಿತು ಎಂದು ಕೇಳಿದರು. 

ಮತ್ತೊಂದೆಡೆ ಬಿಜೆಪಿ ನಾಯಕರು ಸುಪ್ರೀಂ ಕೋರ್ಟ್ ತೀರ್ಪು ತಮ್ಮ ಪರವಾಗಿ ಬರಲಿದೆ ಎಂದು ಹೇಳುತ್ತಿದ್ದಾರೆ. ನ್ಯಾಯಾಲಯದ ತೀರ್ಪಿನ ಬಗ್ಗೆ ಇವರು ಹೇಗೆ ಹೇಳುತ್ತಾರೆ? ಈ ಬಗ್ಗೆ ಸುಪ್ರೀಂ ತೀರ್ಪು ನೀಡಬೇಕು ಚುನಾವಣೆ ಬಂದಾಗ ಮಾತ್ರ ಅಯೋಧ್ಯೆ ವಿಚಾರ ಮಾತನಾಡುವ  ಬಿಜೆಪಿ ನಾಯಕರು, ಚುನಾವಣೆ ಬಳಿಕ ಅದನ್ನು ಮರೆತೇ ಬಿಡುತ್ತಾರೆ ಎಂದು ಟೀಕಿಸಿದರು.

Trending News