ಹೈದ್ರಾಬಾದ್ ಎನ್ಕೌಂಟರ್: ತನಿಖೆಗೆ ನಿವೃತ್ತ ನ್ಯಾ. ಸಿರ್ಪುರ್ಕರ್ ನೇತೃತ್ವದಲ್ಲಿ ಆಯೋಗ ರಚಿಸಿದ ಸುಪ್ರೀಂ

ಹೈದ್ರಾಬಾದ್ ಎನ್ಕೌಂಟರ್ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಆಯೋಗವೊಂದನ್ನು ರಚಿಸಿದೆ. ನಿವೃತ್ತ ನ್ಯಾಯಮೂರ್ತಿ ವಿ.ಎಸ್. ಸಿರ್ಪುರ್ಕರ್ ಅವರ ಅಧ್ಯಕ್ಷತೆಯಲ್ಲಿ ಸರ್ವೋಚ್ಛ ನ್ಯಾಯಾಲಯ ಈ ಆಯೋಗ ರಚಿಸಿದೆ.

Last Updated : Dec 12, 2019, 04:12 PM IST
ಹೈದ್ರಾಬಾದ್ ಎನ್ಕೌಂಟರ್: ತನಿಖೆಗೆ ನಿವೃತ್ತ ನ್ಯಾ. ಸಿರ್ಪುರ್ಕರ್ ನೇತೃತ್ವದಲ್ಲಿ ಆಯೋಗ ರಚಿಸಿದ ಸುಪ್ರೀಂ title=

ನವದೆಹಲಿ: ಹೈದ್ರಾಬಾದ್ ಎನ್ಕೌಂಟರ್ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಆಯೋಗವೊಂದನ್ನು ರಚಿಸಿದೆ. ನಿವೃತ್ತ ನ್ಯಾಯಮೂರ್ತಿ ವಿ.ಎಸ್. ಸಿರ್ಪುರ್ಕರ್ ಅವರ ಅಧ್ಯಕ್ಷತೆಯಲ್ಲಿ ಸರ್ವೋಚ್ಛ ನ್ಯಾಯಾಲಯ ಈ ಆಯೋಗ ರಚಿಸಿದೆ. ಆದರೆ, ಹೈದ್ರಾಬಾದ್ ಎನ್ಕೌಂಟರ್ ಪ್ರಕರಣದಲ್ಲೂ ಮೃತಪಟ್ಟವರ ಸಂತ್ರಸ್ತರಿಗೆ ಯಾವುದೇ ರೀತಿಯ ಪರಿಹಾರ ನೀಡಲು ನ್ಯಾಯಾಲಯ ನಿರಾಕರಿಸಿದೆ

ಘಟನೆಯ ಸಂಬಂಧಿಸಿದ ದೃಶ್ಯಗಳನ್ನು ಮರುಸೃಷ್ಟಿಸುವಾಗ ಅಲ್ಲಿ ನಡೆದಿದ್ದೆಂದು ಎಂಬುದು ತನಿಖೆಯ ವಿಷಯವಾಗಿದೆ ಎಂದಿದೆ. ತನಿಖಾ ಆಯೋಗ ಹೈದ್ರಾಬಾದ್ ನ ಒಂದು ನಿಶ್ಚಿತ ಸ್ಥಾನದಲ್ಲಿ ತನ್ನ ಸಭೆ ನಡೆಸಲಿದ್ದು, ಈ ಸಭೆಗೆ CRPF ಭದ್ರತೆ ಒದಗಿಸಲಾಗುವುದು ಎಂದು ನ್ಯಾಯಪೀಠ ಹೇಳಿದೆ.

ಡಿಸೆಂಬರ್ 6 ರಂದು ನಡೆದ ಈ ಎನ್ಕೌಂಟರ್ ನಲ್ಲಿ ಪೋಲೀಸರು ಮಹಿಳಾ ವೆಟರ್ನರಿ ಡಾಕ್ಟರ್ ವೋರ್ವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆಗೈದ ನಾಲ್ವರು ಆರೋಪಿಗಳನ್ನು ಮಟ್ಟಹಾಕಿದ್ದಾರೆ. ಹೈದ್ರಾಬಾದ್ ನ ಹೊರವಲಯದಲ್ಲಿರುವ ಶಂಷಾಬಾದ್ ಬಳಿ ನವೆಂಬರ್ 27ರಂದು ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದ್ದು, ನಂತರ ಆಕೆಯ ಶವವನ್ನು ಶಾದ್ ನಗರ್ ಬಳಿ ಇರುವ ಒಂದು ಬಸ್ತಿ ಬಳಿ ಸುಟ್ಟುಹಾಕಲಾಗಿತ್ತು.

ಡಿಸೆಂಬರ್ 6ರಂದು ನಡೆದಿತ್ತು ಈ ಎನ್ಕೌಂಟರ್
ಡಿಸೆಂಬರ್ 6 ರಂದು ಹೈದ್ರಾಬಾದ್ ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶಾದ್ ನಗರ್ ಬಳಿ ಇರುವ ಚಟನ್ಪಲ್ಲಿ ಹತ್ತಿರ ಈ ಆರೋಪಿಗಳು ಪೊಲೀಸರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ವೇಳೆ ಈ ಎನ್ಕೌಂಟರ್ ನಡೆದಿದೆ.

ನವೆಂಬರ್ 27ರಂದು ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಶವವನ್ನು ಸುಟ್ಟುಹಾಕಿದ ಸ್ಥಳದಲ್ಲಿಯೇ ಪೊಲೀಸರು ಈ ಎನ್ಕೌಂಟರ್ ನಡೆಸಿ ನಾಲ್ವರು ಆರೋಪಿಗಳನ್ನು ಹತ್ಯೆಗೈದಿದ್ದಾರೆ. ತನಿಖೆಯ ಭಾಗವಾಗಿ ಕ್ರೈಂ ಸೀನ್ ರಿಕ್ರಿಯೆಟ್ ಮಾಡಲು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕೊಂಡೊಯ್ಯಲಾಗಿತ್ತು ಮತ್ತು ಈ ವೇಳೆ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ವೇಳೆ ಅವರ ಎನ್ಕೌಂಟರ್ ನಡೆಸಲಾಗಿದ್ದು, ಆರೋಪಿಗಳನ್ನು ಹತ್ಯೆಗೈಯಲಾಗಿದೆ ಎಂದಿದ್ದಾರೆ.

ಎನ್ಕೌಂಟರ್ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ್ದ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿರುವ ವಿ.ಸಿ ಸಜ್ಜನರ, 10 ಸದಸ್ಯರನ್ನೊಳಗೊಂಡ ಪೊಲೀಸ್ ತಂಡ ಆರೋಪಿಗಳನ್ನು ಬೆಳಗ್ಗೆ 5.45ಕ್ಕೆ ಘಟನಾ ಸ್ಥಳಕ್ಕೆ ಕರದುಕೊಂಡು ಹೋಗಿತ್ತು.  ಘಟನೆಯ ಬಳಿಕ ಆರೋಪಿಗಳು ಸಂತ್ರಸ್ತ ಮಹಿಳೆಗೆ ಸಂಬಂಧಸಿದ ಮೊಬೈಲ್ ಫೋನ್ ಹಾಗೂ ಇತರೆ ಸಾಮಗ್ರಿಗಳನ್ನು ಅಡಗಿಸಿಟ್ಟ ಜಾಗವನ್ನು ಪತ್ತೆಹಚ್ಚಲು ಪೊಲೀಸರು ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. 

ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿ, ಛಡಿ ಹಾಗೂ ಇತರೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ. ಅವರಲ್ಲಿ ಇಬ್ಬರು ಆರೋಪಿಗಳು ಪೋಲೀಸರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಫೈರಿಂಗ್ ನಡೆಸಿದ್ದಾರೆ. ಈ ವೇಳೆ ಧೈರ್ಯ ಮೆರೆದ ಪೊಲೀಸರು ಆರೋಪಿಗಳಿಗೆ ಶರಣಾಗಲು ಸೂಚಿಸಿದ್ದಾರೆ. ಆದರೆ ಆರೋಪಿಗಳು ಫೈರಿಂಗ್ ನಿಲ್ಲಿಸದೆ ಇದ್ದ ಕಾರಣ ಪೊಲೀಸರು ಕೂಡ ಪ್ರತ್ಯುತ್ತರ ನೀಡಿದ್ದು, ಇದರಲ್ಲಿ ನಾಲ್ವರು ಆರೋಪಿಗಳು ಹತರಾಗಿದ್ದಾರೆ ಎಂದು ಸಜ್ಜನರ ತಿಳಿಸಿದ್ದಾರೆ.

Trending News