ಸರ್ಕಾರ ಕೆಡುವುದರಲ್ಲಿ ಅಮಿತ್ ಶಾ ಅವರಿಗೆ ಸಾಕಷ್ಟು ಅನುಭವಿದೆ- ಕಪಿಲ್ ಸಿಬಲ್

ಕಾಂಗ್ರೆಸ್ಸಿನ ಹಿರಿಯ ಮುಖಂಡ ಕಪಿಲ್ ಸಿಬಲ್ ಗುರುವಾರ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ವಿಚಾರವಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

Last Updated : Nov 14, 2019, 06:20 PM IST
ಸರ್ಕಾರ ಕೆಡುವುದರಲ್ಲಿ ಅಮಿತ್ ಶಾ ಅವರಿಗೆ ಸಾಕಷ್ಟು ಅನುಭವಿದೆ- ಕಪಿಲ್ ಸಿಬಲ್ title=

ನವದೆಹಲಿ: ಕಾಂಗ್ರೆಸ್ಸಿನ ಹಿರಿಯ ಮುಖಂಡ ಕಪಿಲ್ ಸಿಬಲ್ ಗುರುವಾರ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ವಿಚಾರವಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

"ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಂತಹ ಅನುಭವ ನನ್ನಲ್ಲಿಲ್ಲ. ಸರ್ಕಾರಗಳನ್ನು ಒಡೆಯುವುದರಲ್ಲಿ ಅವರಿಗೆ ಅಪಾರ ಅನುಭವವಿದೆ. ಗೋವಾ ಮತ್ತು ಕರ್ನಾಟಕದಲ್ಲಿ ಅವರು ಸರ್ಕಾರಗಳನ್ನು ಹೇಗೆ ಉರುಳಿಸಿದರು ಎಂಬುದನ್ನು ನಾವು ನೋಡಿದ್ದೇವೆ' ಎಂದು ಸಿಬಲ್ ಎಎನ್‌ಐಗೆ ತಿಳಿಸಿದರು. ಇನ್ನು ಮುಂದುವರೆದು ಮಹಾರಾಷ್ಟ್ರದಲ್ಲಿ ಕುದುರೆ ವ್ಯಾಪಾರಕ್ಕಾಗಿ ರಾಷ್ಟ್ರಪತಿ ಆಡಳಿತವನ್ನು ವಿಧಿಸಿದೆ ಎಂದು ಅವರು ಆರೋಪಿಸಿದರು.

'ನಾವು ಇದರಲ್ಲಿ ಪರಿಣತರಲ್ಲ, ಎಂಎಲ್ಎಗಳನ್ನು ಹೇಗೆ ಮತ್ತು ಎಲ್ಲಿ ಇರಿಸಿಕೊಳ್ಳಬೇಕು ಎಂಬುದು ಅಮಿತ್ ಷಾ ಅವರಿಗೆ ತಿಳಿದಿದೆ, ಯಾವ ಹೋಟೆಲ್ ಅನ್ನು ಕಾಯ್ದಿರಿಸಬೇಕಾಗಿದೆ. ಈ ಹಿಂದೆ ಅವರ ನಡವಳಿಕೆಯನ್ನು ನಾವು ನೋಡಿದ್ದರಿಂದ ನಾವು ನಮ್ಮ ಕಳವಳವನ್ನು ವ್ಯಕ್ತಪಡಿಸುತ್ತೇವೆ' ಎಂದು ಅವರು ಹೇಳಿದರು.

ಇದೇ ವೇಳೆ ಕಪಿಲ್ ಸಿಬಲ್ ಅವರು ಬಿಜೆಪಿಗೆ ನೀಡಿದ ಸಮಯ ಮತ್ತು ಶಿವಸೇನೆ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಗೆ ನೀಡಿರುವ ಸಮಯದ ವ್ಯತ್ಯಾಸವನ್ನು ಗುರುತಿಸಿದರು.'ಮಹಾರಾಷ್ಟ್ರ ರಾಜ್ಯಪಾಲರು ಸರ್ಕಾರ ರಚಿಸಲು ಬಿಜೆಪಿಗೆ ಎರಡು ವಾರಗಳ ಕಾಲಾವಕಾಶ ನೀಡಿದರು. ನಾಲ್ಕು ದಿನಗಳಲ್ಲಿ ಬಹುಮತವನ್ನು ಸಾಬೀತುಪಡಿಸುವಂತೆ ಅವರು ಬಿಜೆಪಿಗೆ ಹೇಳಬೇಕಾಗಿತ್ತು. ಆದರೆ ಅವರು ರಾಷ್ಟ್ರಪತಿಗಳ ಆಡಳಿತವನ್ನು ಹೇರಲು ಇಷ್ಟು ದಿನ ಕಾಯುವಂತೆ ಮಾಡಿದರು ಮತ್ತು ನಮಗೆ ಕೇವಲ 14-18 ಗಂಟೆಗಳ ಕಾಲಾವಕಾಶ ನೀಡಿದ್ದು ತಪ್ಪು 'ಸಿಬಲ್ ದೂರಿದರು.

ಇದೇ ವೇಳೆ ಅನರ್ಹ 17 ಶಾಸಕರಿಗೆ ಕರ್ನಾಟಕ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಪ್ರತಿಕ್ರಿಯಿಸಿದ ಅವರು, "ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ, ಕುದುರೆ ವ್ಯಾಪಾರ ಇರಲಿಲ್ಲ ಎಂದರ್ಥವಲ್ಲ. ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಮತ್ತು ನಾಗರಿಕರು ಏನು ತಪ್ಪು ಮತ್ತು ಸರಿ ಎಂದು ನಿರ್ಧರಿಸಬೇಕು' ಎಂದು ಹೇಳಿದರು.

Trending News