ಕರೋನಾ ಮಹಾಮಾರಿ ವಿರುದ್ದ ಸಮರಕ್ಕೆ ಬಂತು ವಾಯುಪಡೆ..!
ವಾಯುಪಡೆಯ ಟ್ರಾನ್ಸ್ ಪೋರ್ಟ್ ವಿಭಾಗ ಈಗಾಗಲೇ ಅಗತ್ಯವಿರುವ ಕಡೆ ಅಮ್ಲಜನಕ, ಔಷಧ ಹಾಗೂ ವೈದ್ಯರನ್ನು ಏರ್ ಲಿಫ್ಟ್ ಮಾಡುತ್ತಿದೆ. ವಾಯುಪಡೆ ಮೂಲಗಳ ಪ್ರಕಾರ ವಾಯುಪಡೆಯ ವಿಮಾನಗಳು ಈಗಾಗಲೇ ಕೊಚ್ಚಿ, ಮುಂಬಯಿ, ವಿಶಾಖಪಟ್ಟಣಂ, ಬೆಂಗಳೂರಿನಲ್ಲಿರುವ ಡಿಆರ್ ಡಿಒ ಆಸ್ಪತ್ರೆಗಳಿಗೆ ವೈದ್ಯರು, ನರ್ಸಿಂಗ್ ಸಿಬ್ಬಂದಿ, ಉಪಕರಣಗಳು ಹಾಗೂ ಬಹು ಅಮೂಲ್ಯ ಆಕ್ಸಿಜನ್ ಗಳನ್ನು ಏರ್ ಲಿಫ್ಟ್ ಮಾಡಿವೆ.
ನವದೆಹಲಿ : ದೇಶದ ಬಾಹ್ಯ ಶತ್ರುಗಳ ವಿರುದ್ಧ ಹೋರಾಡಲು ಸದಾ ಸಜ್ಜಾಗಿರುವ ಭಾರತೀಯ ವಾಯುಪಡೆ (IAF) ಈಗ ಕರೋನಾ ವಿರುದ್ದವೂ ಸಮರ ಸಾರಿದೆ. ಕರೋನಾ (Coronavirus) ವಿರುದ್ದ ದೇಶದ ಮಹಾ ಸಂಗ್ರಾಮದಲ್ಲಿ ವಾಯುಪಡೆ ಕೂಡಾ ಜತೆಯಾಗಿದೆ. ಕರ್ತವ್ಯದ ಕರೆಗೆ ಓಗೊಟ್ಟು ಮತ್ತೊಮ್ಮೆ ಭಾರತೀಯರ ರಕ್ಷಣೆಗೆ ಮುಂದಾಗಿದೆ ಇಂಡಿಯನ್ ಏರ್ ಫೋರ್ಸ್
ವಾಯುಪಡೆಯಿಂದ ಆಕ್ಸಿಜನ್, ಔಷಧ, ವೈದ್ಯರ ಏರ್ ಲಿಫ್ಟ್ :
ವಾಯುಪಡೆಯ ಟ್ರಾನ್ಸ್ ಪೋರ್ಟ್ ವಿಭಾಗ ಈಗಾಗಲೇ ಅಗತ್ಯವಿರುವ ಕಡೆ ಅಮ್ಲಜನಕ, ಔಷಧ (Medicine) ಹಾಗೂ ವೈದ್ಯರನ್ನು ಏರ್ ಲಿಫ್ಟ್ (Air lift) ಮಾಡುತ್ತಿದೆ. ವಾಯುಪಡೆ ಮೂಲಗಳ ಪ್ರಕಾರ ವಾಯುಪಡೆಯ ವಿಮಾನಗಳು ಈಗಾಗಲೇ ಕೊಚ್ಚಿ, ಮುಂಬಯಿ, ವಿಶಾಖಪಟ್ಟಣಂ, ಬೆಂಗಳೂರಿನಲ್ಲಿರುವ (Bengaluru) ಡಿಆರ್ ಡಿಒ ಆಸ್ಪತ್ರೆಗಳಿಗೆ (DRDO Hospital) ವೈದ್ಯರು, ನರ್ಸಿಂಗ್ ಸಿಬ್ಬಂದಿ, ಉಪಕರಣಗಳು ಹಾಗೂ ಬಹು ಅಮೂಲ್ಯ ಆಕ್ಸಿಜನ್ ಗಳನ್ನು ಏರ್ ಲಿಫ್ಟ್ (Air lift) ಮಾಡಿವೆ. ಏರ್ ಫೋರ್ಸ್ ವಿಮಾನಗಳು ಬೆಂಗಳೂರಿನಿಂದ ಆಕ್ಸಿಜನ್ ಕಂಟೈನರ್ ಗಳನ್ನು ಏರ್ ಲಿಫ್ಟ್ ಮಾಡಿ ದೆಹಲಿ ಕೋವಿಡ್ (COVID-19) ಆಸ್ಪತ್ರೆಗಳಿಗೂ ರವಾನಿಸಿವೆ.
ಇದನ್ನೂ ಓದಿ : Covid-19 Cases in India: ಕರೋನಾವೈರಸ್ ಹರಡುವಿಕೆಯಲ್ಲಿ ಅಮೇರಿಕಾ ವಿರುದ್ಧ ಭಾರತ ಹೊಸ ದಾಖಲೆ
ಈ ಸಂಬಂಧ ಟ್ವೀಟ್ (tweet) ಮಾಡಿರುವ ವಾಯುಪಡೆ, ಐಎಎಫ್ ಟ್ರಾನ್ಸ್ ಪೋರ್ಟ್ ಫ್ಲೀಟ್ ಕರೋನಾ ವಿರುದ್ದ ಸಮರಕ್ಕೆ ಬೆಂಬಲವಾಗಿ ನಿಂತಿದೆ. ದೇಶಾದ್ಯಂತ ಇರುವ ಕೊವಿಡ್ ಆಸ್ಪತ್ರೆಗಳಿಗೆ ಮೆಡಿಕಲ್ ಸಿಬ್ಬಂದಿ, ಕ್ರಿಟಿಕಲ್ ಉಪಕರಣ ಹಾಗೂ ಔಷಧಿಗಳನ್ನು ರವಾನಿಸುತ್ತಿದೆ ಎಂದು ಹೇಳಿದೆ.
IAF) ಯುದ್ಧ ವಿಮಾನಗಳನ್ನು ನಿಯೋಜಿಸುವ ಸಾಧ್ಯತೆಗಳಿವೆ. ಭಾರತದಲ್ಲಿ ಆಮ್ಲಜನಕದ ಉತ್ಪಾದನೆ ಬೇಕಾದಷ್ಟಿವೆ. ಆದರೆ, ಅವನ್ನು ಸಾಗಿಸಲು ಸೂಕ್ತ ಕಂಟೈನರ್ ಗಳು ಲಭ್ಯವಿಲ್ಲ. ಈ ಕಂಟೈನರ್ ಗಳನ್ನು ವಿದೇಶದಿಂದ ತರಲು ಸರಕಾರ ಯೋಜನೆ ರೂಪಿಸಿದೆ.
ಇದನ್ನೂ ಓದಿ : WB Election: ಕರೋನಾ ಬಿಕ್ಕಟ್ಟಿನ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ಆರನೇ ಹಂತದ ಮತದಾನ, ಕಣದಲ್ಲಿ 306 ಅಭ್ಯರ್ಥಿಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.