ವಿರಾಟ್ ಕೊಹ್ಲಿ ಮಾಡಿರುವ ಈ ಕೆಲಸಕ್ಕೆ ಸಲಾಮ್ ಎಂದ ICC

ಸ್ಟಿವ್ ಸ್ಮಿತ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ ಅವರಿಗೆ ICC 'ಸ್ಪ್ರಿರಿಟ್ ಆಫ್ ದಿ ಇಯರ್' ಪ್ರಶಸ್ತಿ ನೀಡಿ ಗೌರವಿಸಿದೆ.

Last Updated : Jan 15, 2020, 02:18 PM IST
ವಿರಾಟ್ ಕೊಹ್ಲಿ ಮಾಡಿರುವ ಈ ಕೆಲಸಕ್ಕೆ ಸಲಾಮ್ ಎಂದ ICC title=

ದುಬೈ: ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಸ್ಟ್ರೇಲಿಯ ವಿರುದ್ಧ ಮುಂಬೈನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರಿ ಸೋಲನ್ನು ಅನುಭವಿಸಿದೆ. ಆದರೆ, ತಂಡದ ನಾಯಕ ವಿರಾಟ್ ಕೊಹ್ಲಿ ಪಟ್ಟಿಗೆ ಮತ್ತೆ ಎರಡು ದಾಖಲೆಗಳು ಸೇರ್ಪಡೆಯಾಗಿವೆ. ವರ್ಲ್ಡ್ ಕಪ್ ಕ್ರಿಕೆಟ್ ವೇಳೆ ಸ್ಮಿತ್ ಅವರ ವಿರುದ್ಧ ನಡೆದ ಹೂಟಿಂಗ್ ಕುರಿತು ವಿರಾಟ್ ಕೊಹ್ಲಿ ಮಾಡಿರುವ ವರ್ತನೆಗೆ ICC ಭೇಷ್ ಎಂದಿದೆ. ಅಷ್ಟೇ ಅಲ್ಲ, ವರ್ಷ 2019ರ ICC ಯ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕ ಎಂದೂ ಕೂಡ ಘೋಸಿಸಿದೆ.

ICC ವಿಶ್ವಕಪ್ ವೇಳೆ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದ ವೇಳೆ ಸ್ಟೀವ್ ಸ್ಮಿತ್ ವಿರುದ್ಧ ಹೂಟ್ ಮಾಡಿದ್ದ ಪ್ರೇಕ್ಷಕರ ವರ್ತನೆಗೆ ವಿರಾಟ್ ಬೇಸರ ವ್ಯಕ್ತಪಡಿಸಿ, ಸ್ಟಿವ್ ಸ್ಮಿತ್ ಅವರನ್ನು ಚಿಯರ್ ಮಾಡಲು ಸನ್ನೆ ಕೂಡ ಮಾಡಿದ್ದರು. ವಿರಾಟ್ ಅವರ ಈ ವರ್ತನೆಗೆ ICC ಪ್ರಶಸ್ತಿ ನೀಡಿ ಗೌರವಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ICC "ವಿಶ್ವಕಪ್ ಪಂದ್ಯಾವಳಿಯ ವೇಳೆ ವಿರಾಟ್ ಕೊಹ್ಲಿ ತೋರಿರುವ ಈ ವರ್ತನೆಯನ್ನು ಯಾರು ಜ್ಞಾಪಿಸಿಕೊಳ್ಳುತ್ತಾರೆ ಎಂದು ಹೇಳಿ ಇದು 2019ರ ಸ್ಪಿರಿಟ್ ಆಫ್ ದಿ ಇಯರ್" ಎಂದು ಬರೆದುಕೊಂಡಿದೆ.

ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ICCಯಿಂದ ನಿರ್ಬಂಧಕ್ಕೆ ಒಳಗಾಗಿ ಕಳೆದ ವರ್ಷವೇ ಸ್ಟೀವ್ ಸ್ಮಿತ್ ತಮ್ಮ ತಂಡಕ್ಕೆ ಮರಳಿದ್ದರು. ಬಳಿಕ ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಪಂದ್ಯದ ವೇಳೆ ಪ್ರೇಕ್ಷಕರು ಅವರ ವಿರುದ್ಧ ಹೂಟಿಂಗ್ ನಡೆಸಿದ್ದರು. ಇದಕ್ಕೆ ಅಸಮಾಧಾನ ಹೊರಹಾಕಿದ್ದ ವಿರಾಟ್, ನೆರೆದ ಪ್ರೇಕ್ಷಕರತ್ತ ಕೈಸನ್ನೆ ಮಾಡಿ ಸ್ಟೀವ್ ಸ್ಮಿತ್ ಅವರನ್ನು ಪ್ರೋತ್ಸಾಹಿಸಲು ಹೇಳಿದ್ದರು.

Trending News