ನವದೆಹಲಿ: ICSE, 10-12 ಬೋರ್ಡ್ ಪರೀಕ್ಷೆಗಳ ಫಲಿತಾಂಶವನ್ನು ಘೋಷಿಸಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ ತನ್ನ ಅಧಿಕೃತ ವೆಬ್‌ಸೈಟ್ cisce.org ನಲ್ಲಿ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ರೋಲ್ ಸಂಖ್ಯೆ ಮತ್ತು ಇತರೆ ಮಾಹಿತಿ ನಮೂದಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.


COMMERCIAL BREAK
SCROLL TO CONTINUE READING

ಈ ನಿಟ್ಟಿನಲ್ಲಿ ಐಸಿಎಸ್‌ಇ ಮಂಡಳಿಯು cisce.org ನಲ್ಲಿಯೇ ಅಧಿಕೃತ ನೋಟಿಸ್ ಕೂಡ ಪ್ರಕಟಿಸಿದೆ. ಈ ನೋಟಿಸ್ ನಲ್ಲಿ ಫಲಿತಾಂಶ ಪ್ರಕಟಣೆಯ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ.


ಈ ವೆಬ್ಸೈಟ್ ನಲ್ಲಿಯೂ ಕೂಡ ಫಲಿತಾಂಶ ಪ್ರಕಟಿಸಲಾಗಿದೆ
ICSE ಹಾಗೂ ISC ಬೋರ್ಡ್ ನ 10ನೇ ಹಾಗೂ 12ನೇ ತರಗತಿಗಳ ಫಲಿತಾಂಶಗಳನ್ನು ನೀಡಲು ವಿದ್ಯಾರ್ಥಿಗಳು results.cisce.org ವೆಬ್ಸೈಟ್ ಗೆ ಭೇಟಿ ನೀಡಬೇಕು.


ಹೀಗೆ ಫಲಿತಾಂಶ ಪರೀಕ್ಷಿಸಿ
- ಫಲಿತಾಂಶವನ್ನು ನೋಡಲು, ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಅಲ್ಲಿರುವ 'ಫಲಿತಾಂಶ' ಲಿಂಕ್ ಅನ್ನು ಕ್ಲಿಕ್ ಮಾಡಿ.
- ನಂತರ ನೀವು ಫಲಿತಾಂಶ ನೋಡಲು ಬಯಸುವ ವರ್ಗದ ಲಿಂಕ್ ಅನ್ನು ಕ್ಲಿಕ್ ಮಾಡಿ.
-ಇದಾದ ಬಳಿಕ, ಹುಟ್ಟಿದ ದಿನಾಂಕ ಮತ್ತು ರೋಲ್ ನಂಬರ್ ಭರ್ತಿ ಮಾಡಿ, ವಿವರವನ್ನು ಸಬ್ಮಿಟ್ ಮಾಡಿ.
- ನಿಮ್ಮ ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ.
- ಮುಂದಿನ ಉಪಯೋಗಕ್ಕಾಗಿ ನೀವು ಅದನ್ನು ಡೌನ್‌ಲೋಡ್ ಕೂಡ ಮಾಡಬಹುದು.


SMS ಮೂಲಕ ಕೂಡ ನೀವು ಫಲಿತಾಂಶ ಪರೀಕ್ಷಿಸಬಹುದು
ICSE ಬೋರ್ಡ್ ವಿದ್ಯಾರ್ಥಿಗಳು SMS ಕಳುಹಿಸುವ ಮೂಅಲಕ ಕೂಡ ತಮ್ಮ ಫಲಿತಾಂಶವನ್ನು ಪರೀಕ್ಷಿಸಬಹುದಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಮೆಸೇಜ್ ಬಾಕ್ಸ್ ನಲ್ಲಿ ICSE<space><Roll Number> ಟೈಪ್ ಮಾಡಿ ಬಳಿಕ ಅದನ್ನು 09248082883 ಮೊಬೈಲ್ ಸಂಖ್ಯೆಗೆ ಕಳುಹಿಸಬೇಕು.