ಭಾರತ ಪಾಕಿಸ್ತಾನ ನಡುವೆ ಯುದ್ದವಾದರೆ ಪಾಕ್ ಬೆಂಬಲಿಸುವ ರಾಷ್ಟಗಳು ಯಾವುದು? ಭಾರತದ ಜೊತೆ ನಿಲ್ಲುವ ದೇಶಗಳು ಯಾವುದು ?

ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವ ಸಂದರ್ಭದಲ್ಲಿ ಬೇಕಾದರೂ ಯುದ್ದ ನಡೆಯಬಹುದು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಹೀಗಾದರೆ ಪಾಕಿಸ್ತಾನದ ಪರ ನಿಲ್ಲುವ ರಾಷ್ಟ್ರಗಳು ಯಾವುದು? ಭಾರತಕ್ಕೆ ಬೆಂಬಲ ಸೂಚಿಸುವ ದೇಶಗಳು ಯಾವುವು ಎನ್ನುವುದು ಸದ್ಯಕ್ಕೆ ಇರುವ ಪ್ರಶ್ನೆ. 

Written by - Ranjitha R K | Last Updated : Apr 30, 2025, 01:57 PM IST
  • ಭಾರತ ಸರ್ಕಾರ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಕೇಂದ್ರ
  • ಭಾರತದ ನಡೆಗೆ ನಡುಗಿದ ಪಾಕಿಸ್ತಾನ
  • 24 ರಿಂದ 36 ಗಂಟೆಗಳಲ್ಲಿ ಭಾರತದಿಂದ ಮಿಲಿಟರಿ ಕ್ರಮ ಎನ್ನುತ್ತಿದೆ ಪಾಕ್
ಭಾರತ ಪಾಕಿಸ್ತಾನ ನಡುವೆ ಯುದ್ದವಾದರೆ ಪಾಕ್ ಬೆಂಬಲಿಸುವ ರಾಷ್ಟಗಳು ಯಾವುದು? ಭಾರತದ ಜೊತೆ ನಿಲ್ಲುವ ದೇಶಗಳು ಯಾವುದು ?

ಭಾರತ ಸರ್ಕಾರ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಅಥವಾ ಫ್ರೀ ಹ್ಯಾಂಡ್ ನೀಡಿದ ನಂತರ ಪಾಕಿಸ್ತಾನದಲ್ಲಿ ಭೀತಿ ಉಂಟಾಗಿದೆ. ಅಲ್ಲಿನ ಸಚಿವರು ಭಾರತ 24 ರಿಂದ 36 ಗಂಟೆಗಳಲ್ಲಿ ಮಿಲಿಟರಿ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿಶ್ವದಾದ್ಯಂತದ ನಾಯಕರು ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಬಹಿರಂಗವಾಗಿ ಖಂಡಿಸಿದ್ದಾರೆ. ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಮಿಲಿಟರಿ ಕಾರ್ಯಾಚರಣೆ ನಡೆದರೆ, ಯುದ್ಧದ ಸಂದರ್ಭದಲ್ಲಿ ವಿಶ್ವದ ಯಾವ ದೇಶಗಳು ಭಾರತದ ಪರವಾಗಿ ನಿಲ್ಲುತ್ತವೆ, ಯಾವ ದೇಶಗಳು ಪಾಕಿಸ್ತಾನವನ್ನು ಬೆಂಬಲಿಸಲಿವೆ ಎನ್ನುವ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡಿದೆ.

Add Zee News as a Preferred Source

ಮೊದಲನೆಯದಾಗಿ ಭಯೋತ್ಪಾದಕ ದಾಳಿಯಲ್ಲಿ ಮುಗ್ಧ ನಾಗರಿಕರ ರಕ್ತ  ಹರಿಸಲಾಗಿದೆ. ಹಾಗಾಗಿ ಯಾವುದೇ ದೇಶವು ಪಾಕಿಸ್ತಾನವನ್ನು ಬಹಿರಂಗವಾಗಿ ಬೆಂಬಲಿಸುವುದಿಲ್ಲ. ಆದರೆ ಮುಸ್ಲಿಂ ರಾಷ್ಟ್ರಗಳು ಪಾಕಿಸ್ತಾನವನ್ನು ಬೆಂಬಲಿಸಲು ಮುಂದೆ ಬರಬಹುದು. ಈ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ದೆಹಲಿಯಲ್ಲಿ ಬೇರೆ ಬೇರೆ ದೇಶಗಳ ರಾಜತಾಂತ್ರಿಕರಿಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಲಾಗಿದೆ. 

ಇದನ್ನೂ ಓದಿ : ಸುಪ್ರೀಂಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಬಿ.ಆರ್.ಗವಾಯಿ ನೇಮಕ

ಈ ಮೂರು ದೇಶಗಳು ಏನು ಮಾಡುತ್ತಿವೆ? : 
 ಈ ನಡುವೆ ಮೂರು ದೇಶಗಳು ಎರಡೂ ದೇಶಗಳೊಂದಿಗೆ ಸಂಪರ್ಕದಲ್ಲಿವೆ ಎಂದು ಹೇಳಲಾಗುತ್ತಿದೆ. ಸೌದಿ ಅರೇಬಿಯಾ, ಯುಕೆ ಮತ್ತು ಇರಾನ್  ಸದ್ಯಕ್ಕೆ ಎರಡೂ ದೇಶಗಳೊಂದಿಗೆ ಮಾತುಕತೆ ನಡೆಸುತ್ತಿವೆ. ಎರಡು ಪರಮಾಣು ಶಸ್ತ್ರಸಜ್ಜಿತ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿರುವುದರಿಂದ, ಈ ದೇಶಗಳು ಸಮನ್ವಯವನ್ನು ತರಲು ಪ್ರಯತ್ನಿಸುತ್ತಿವೆ.ಆದರೆ ಭಯೋತ್ಪಾದನೆಯ ವಿಷಯದಲ್ಲಿ ಅಂತರರಾಷ್ಟ್ರೀಯ ಸಮುದಾಯವು ಭಾರತದ ಬಗ್ಗೆ ಸಹಾನುಭೂತಿ ಹೊಂದಿದೆ. ಆದರೂ, ಕೆಲವು ದೇಶಗಳು ಪಾಕಿಸ್ತಾನವನ್ನು ರಹಸ್ಯವಾಗಿ ಬೆಂಬಲಿಸುತ್ತಿರುವಂತೆ ಕಾಣುತ್ತಿದೆ.

ಪಾಕಿಸ್ತಾನವನ್ನು ಬೆಂಬಲಿಸುವವರು ಯಾರು? : 
ಪಾಕಿಸ್ತಾನಕ್ಕೆ ತಮ್ಮ ಬೆಂಬಲ ಇದೆ ಎನ್ನುವುದನ್ನು ಯಾವುದೇ ದೇಶ ಬಹಿರಂಗವಾಗಿ ಹೇಳುತ್ತಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದೊಂದಿಗೆ ತಮ್ಮ ಆಪ್ತತೆಯನ್ನು ಹೆಚ್ಚಿಸಿಕೊಂಡಿರುವ ಎರಡು ದೇಶಗಳಿವೆ. ಅವುಗಳೆಂದರೆ  ಚೀನಾ ಮತ್ತು ಟರ್ಕಿ. ಎರಡೂ ದೇಶಗಳು ಕೆಲವು ಮಿಲಿಟರಿ ಸರಬರಾಜುಗಳನ್ನು ಮಾಡುತ್ತಿವೆ ಎಂಬ ವರದಿಗಳಿವೆ. ಪಾಕಿಸ್ತಾನದ ಸಾಮಾಜಿಕ ಮಾಧ್ಯಮದಲ್ಲಿ ಟರ್ಕಿಶ್ ಮಿಲಿಟರಿ ವಿಮಾನದ ಮೂಲಕ ಯುದ್ಧ ಸಲಕರಣೆಗಳನ್ನು ತಲುಪಿಸಲಾಗಿದೆ ಎಂದು ಹೇಳಲಾಗಿದೆ. ಮತ್ತೊಂದೆಡೆ, ಚೀನಾ ಕೆಲವು ಮಾರಕ ಕ್ಷಿಪಣಿಗಳ ಸರಕನ್ನು ಕಳುಹಿಸಿದೆ. ಬಾಂಗ್ಲಾದೇಶದ ಮೊಹಮ್ಮದ್ ಯೂನಸ್ ಈಗಾಗಲೇ ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ 1971 ರ ಯುದ್ಧದಂತೆ, ಈ ಬಾರಿ ಪಾಕಿಸ್ತಾನವು ಅಮೆರಿಕದಿಂದ ಯಾವುದೇ ಬೆಂಬಲವನ್ನು ಪಡೆಯುವುದಿಲ್ಲ, ಅದು ಹಿಂದೆ ಅದರ ದೊಡ್ಡ ಶಕ್ತಿಯಾಗಿತ್ತು.

ಇದನ್ನೂ ಓದಿ : Pahalgam terror attack: ಭಾರತೀಯ ಸೇನೆಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಸಂಪೂರ್ಣ ಅಧಿಕಾರ ನೀಡಿದ ಕೇಂದ್ರ ಸರ್ಕಾರ

ಚೀನಾ ಪಾಕಿಸ್ತಾನವನ್ನು ಬೆಂಬಲಿಸುತ್ತದೆಯೇ?
ಚೀನಾ ಭಾರತದ ವಿರುದ್ಧ ಪಾಕಿಸ್ತಾನವನ್ನು ಬಹಿರಂಗವಾಗಿ ಬೆಂಬಲಿಸುವ ಸಾಧ್ಯತೆ ಕಡಿಮೆ. ಈಗಾಗಲೇ ಅಮೆರಿಕದೊಂದಿಗಿನ  ಟ್ರೇಡ್ ವಾರ್ ಸುಳಿಯಲ್ಲಿ ಸಿಲುಕಿರುವ ಚೀನಾ ಮತ್ತೆ ಭಾರತದೊಂದಿಗೆ ನೆರ ಸಂಘರ್ಷಕ್ಕೆ ಇಳಿಯಲು ಇಷ್ಟಪಡುವುದಿಲ್ಲ. ಹೆಚ್ಚೆಂದರೆ ಚೀನಾ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಮಟ್ಟದಲ್ಲಿ ಶಸ್ತ್ರಾಸ್ತ್ರ, ತಾಂತ್ರಿಕ ಬೆಂಬಲ ಮತ್ತು ಸಹಾಯವನ್ನು ಒದಗಿಸಬಹುದು. ಒಂದು ವರದಿಯ ಪ್ರಕಾರ, ಚೀನಾದ ರಕ್ಷಣಾ ರಫ್ತಿನ 82 ಪ್ರತಿಶತ ಪಾಕಿಸ್ತಾನಕ್ಕೆ ಹೋಗುತ್ತದೆ.

ಟರ್ಕಿಯೇ ನಾಯಕನಾಗಲು ಕಾರಣವೇನು?
ಟರ್ಕಿ ಇಡೀ ಮುಸ್ಲಿಂ ಜಗತ್ತಿನ ನಾಯಕನಾಗುವ ಕನಸು ಕಾಣುತ್ತಿದೆ. ಈ ವಿಷಯದಲ್ಲಿ  ಸೌದಿಯನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದೆ. ಪಾಕಿಸ್ತಾನವು ತನ್ನ ಶಸ್ತ್ರಾಸ್ತ್ರಗಳ ದೊಡ್ಡ ಆಮದುದಾರ ರಾಷ್ಟ್ರವಾಗಿದೆ. ಆದ್ದರಿಂದ ಅದು ಪಾಕಿಸ್ತಾನಕ್ಕೂ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತದೆ. ಚೀನಾದ ಶಸ್ತ್ರಾಸ್ತ್ರಗಳಿಗಿಂತ ಭಿನ್ನವಾಗಿ, ಟರ್ಕಿಯೆಯ ಶಸ್ತ್ರಾಸ್ತ್ರಗಳು ಆಧುನಿಕ ಮತ್ತು ಯುದ್ಧಪರೀಕ್ಷಿತವಾಗಿವೆ. ಇದಲ್ಲದೆ, ಪಾಕಿಸ್ತಾನಕ್ಕೆ ಎಲ್ಲಿಂದಲೂ ಯಾವುದೇ ಪ್ರಮುಖ ಸಹಾಯ ಸಿಗುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News