ನವದೆಹಲಿ: ಇದು ಡಿಜಿಟಲ್ ಯುಗ. ಈ ಸಂದರ್ಭದಲ್ಲಿ ನೀವೂ ಸಹ Paytm ಅನ್ನು ಬಳಸುತ್ತಿದ್ದರೆ ಅದರ ಮೂಲಕ ನೇರ ಲಾಭ ವರ್ಗಾವಣೆಯ ಸೇವೆಯನ್ನು ಪಡೆಯಬಹುದು. Paytm Payments Bank Limited (PPBL) ಪ್ರಕಾರ ಬ್ಯಾಂಕ್ ಸಹ ಈ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯ ಸಹಾಯದಿಂದ ಗ್ರಾಹಕರು 400ಕ್ಕೂ ಹೆಚ್ಚು ಸರ್ಕಾರಿ ಸಬ್ಸಿಡಿಗಳ ಲಾಭವನ್ನು ನೇರವಾಗಿ ತಮ್ಮ ಉಳಿತಾಯ ಖಾತೆಗಳಲ್ಲಿ ಪಡೆಯಬಹುದು.
ಸರ್ಕಾರವು ಅನಿಲ ಸಬ್ಸಿಡಿ, ವಿದ್ಯಾರ್ಥಿವೇತನ, ಎಂಎನ್ಆರ್ಇಜಿಎ ಪಾವತಿಗಳನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ ಎಂದು ಹೇಳಲಾಗಿದೆ. ಇದನ್ನು ಡಿಬಿಟಿ ಅಡಿಯಲ್ಲಿ ಮಾಡಲಾಗುತ್ತದೆ. ಇದಕ್ಕಾಗಿ ನಿಮ್ಮ Paytm ಖಾತೆಯನ್ನು ನೀವು DBT ಗೆ ಲಿಂಕ್ ಮಾಡಬೇಕಾಗುತ್ತದೆ.
PPBL 2019-20ರ ಹಣಕಾಸು ವರ್ಷದ ಫಲಿತಾಂಶಗಳನ್ನು ಸಹ ಬಿಡುಗಡೆ ಮಾಡಿದೆ. ಕಂಪನಿಯ ನಿವ್ವಳ ಲಾಭವು (Net profit) ಹಿಂದಿನ ಹಣಕಾಸು ವರ್ಷದಲ್ಲಿ 19.2 ಕೋಟಿ ರೂ.ಗಳಿಂದ 55 ಶೇಕಡಾ ಏರಿಕೆಯಾಗಿ 29.8 ಕೋಟಿ ರೂ.ಗೆ ತಲುಪಿದೆ.
ಈ ಅವಧಿಯಲ್ಲಿ ತನ್ನ ವಾರ್ಷಿಕ ಆದಾಯ 2,100 ಕೋಟಿ ರೂ.ಗೆ ಏರಿದೆ ಎಂದು ಪೇಮೆಂಟ್ ಬ್ಯಾಂಕ್ ತಿಳಿಸಿದೆ. ಹಿಂದಿನ ವರ್ಷ ಇದು 1,668 ಕೋಟಿ ರೂ. ಆಗಿತ್ತು.
ಪೇಮೆಂಟ್ ಬ್ಯಾಂಕ್ ಪ್ರಕಾರ ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ಗ್ರಾಹಕರ ಹೆಚ್ಚಳದಿಂದಾಗಿ ಅದರ ವ್ಯವಹಾರ ಹೆಚ್ಚಾಗಿದೆ. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಸತೀಶ್ ಗುಪ್ತಾ ಅವರ ಪ್ರಕಾರ ಪೇಮೆಂಟ್ ಬ್ಯಾಂಕ್ ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ನಲ್ಲಿ ನಿರಂತರವಾಗಿ ಮುಂಚೂಣಿಯಲ್ಲಿದ್ದೇವೆ.
ಕಳೆದ ಆರ್ಥಿಕ ವರ್ಷದಲ್ಲಿ ಹೊಸ ಖಾತೆದಾರರನ್ನು ಸೇರಿಸುವುದು, ಉಳಿತಾಯ ಖಾತೆಗಳನ್ನು ತೆರೆಯುವುದು, ಟರ್ಮ್ ಠೇವಣಿ ಮತ್ತು ವ್ಯವಹಾರಗಳು - ಪ್ರತಿ ಪ್ರಮಾಣದಲ್ಲಿ ಬ್ಯಾಂಕ್ ಉತ್ತಮ ಕೆಲಸ ಮಾಡಿದೆ ಎಂದು ಅವರು ಹೇಳಿದರು. ಕಂಪನಿಯು ದೇಶದಲ್ಲಿ ಜನರನ್ನು ಬ್ಯಾಂಕಿಂಗ್ ಸೇವೆಗಳೊಂದಿಗೆ ಹೆಚ್ಚು ಹೆಚ್ಚು ಹೊಸ ಉತ್ಪನ್ನಗಳು ಮತ್ತು ವಿಧಾನಗಳೊಂದಿಗೆ ಸಂಪರ್ಕಿಸುವತ್ತ ಗಮನ ಹರಿಸಿದೆ.