Gmail ನಲ್ಲಿ ಮೇಲ್ ಕಳುಹಿಸುವಾಗ ತಪ್ಪಾಗಿದೆಯೇ? ಈ ರೀತಿ ನಿಮ್ಮ ತಪ್ಪನ್ನು ಸುಧಾರಿಸಿ

ಕಾರ್ಯನಿರತ ಜನರಿಂದ ಅತಿ ಹೆಚ್ಚು ಬಳಸಲಾಗುವ ಬೇಸಿಕ್ ಆಪ್ ಗಳಲ್ಲಿ Gmail ಕೂಡ ಒಂದು.

Updated: Jul 13, 2020 , 06:00 PM IST
Gmail ನಲ್ಲಿ ಮೇಲ್ ಕಳುಹಿಸುವಾಗ ತಪ್ಪಾಗಿದೆಯೇ? ಈ ರೀತಿ ನಿಮ್ಮ ತಪ್ಪನ್ನು ಸುಧಾರಿಸಿ

ನವದೆಹಲಿ: ಕಾರ್ಯನಿರತ ಜನರಿಂದ ಅತಿ ಹೆಚ್ಚು ಬಳಸಲಾಗುವ ಬೇಸಿಕ್ ಆಪ್ ಗಳಲ್ಲಿ Gmail ಕೂಡ ಒಂದು. ಯಾವುದೇ ಒಂದು ಕಂಪನಿಗೆ ನೀವು ಹೊಸದಾಗಿ ಸೇರಿಕೊಂಡಾಗ ಜ್ವಾಯಿನಿಂಗ್ ವೇಳೆ ನಿಮಗೆ ಸಿಗುವ ಬೇಸಿಕ್ ಸಂಗತಿಗಳಲ್ಲಿ ಜಿ-ಮೇಲ್ ಅಕೌಂಟ್ ಮೊದಲನೆಯದ್ದು. ಇದರ ಮೂಲಕ ನೀವು ನಿಮ್ಮ ಸಹವರ್ತಿಗಳ, ಮ್ಯಾನೇಜ್ಮೆಂಟ್, ಮಾನವಸಂಪನ್ಮೂಲ ವಿಭಾಗ ಇತ್ಯಾದಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಜೊತೆಗೆ ಸಂವಾದ ನಡೆಸಬಹ್ದುದಾಗಿದೆ. ಬಹುತೇಕ ಜನರು ಮೇಲ್ ನಲ್ಲಿ ಮಂಜೂರಾತಿಗಾಗಿ ಲೇಟರ್, ಕಂಟೆಂಟ್, ಫೋಟೋ ಹಾಗೂ ವಿಡಿಯೋಗಳನ್ನೂ ಕಳುಹಿಸುತ್ತಾರೆ. ಇವುಗಳಲ್ಲಿ ಕೆಲಸಕ್ಕೆ ಸಂಬಂಧಿಸಿದ ಮಾಹಿತಿ ಇರುತ್ತದೆ. ಆದರೆ, ಈ ಮಾಹಿತಿ ಸರಿಯಾಗಿರಬೇಕು.

ಆದರೆ, ಮೇಲ್ ಬರೆಯುವಾಗ ಅಥವಾ ಕಳುಹಿಸುವಾಗ ಕೆಲ ವಿಷಯಗಳನ್ನು ನೆನಪಿನಲ್ಲಿಟ್ಟುಕೂಳ್ಳುವುದು ಅವಶ್ಯಕವಾಗಿದೆ. ಅಂದರೆ, ಅದರಲ್ಲಿ ಯಾವುದೇ ತಪ್ಪುಗಳಿರಬಾರದು. ಆದರೆ, ಕೆಲವೊಮ್ಮ ತಿಳಿದು ಅಥವಾ ತಿಳಿಯದೆ ಕೆಲ ತಪ್ಪುಗಳು ನಡೆದುಹೋಗುತ್ತವೆ. ಉದಾಹರಣೆಗೆ ತಪ್ಪು ಇ-ಮೇಲ್ ಅಡ್ರೆಸ್ಸ್, ತಪ್ಪು ಮಾಹಿತಿ, ತಪ್ಪು ಫೈಲ್ ಕಳುಹಿಸುವಿಕೆ ಇತ್ಯಾದಿಗಳು ಇದರಲ್ಲಿ ಶಾಮೀಲಾಗಿವೆ. ಆದರೆ, ಒಮ್ಮೆ ಕಳುಹಿಸಿದ ಇ-ಮೇಲ್ ಅನ್ನು ಹೇಗೆ ಸರಿಪಡಿಸಬೇಕು ಎಂಬುದು ಒಂದು ದೊಡ್ಡ ಸವಾಲಿನ ಪ್ರಶ್ನೆಯಾಗಿದೆ. ಹಾಗಾದರೆ ಬನ್ನಿ, ನೀವು ಕಳುಹಿಸಿರುವ ಮೇಲ್ ನಲ್ಲಿ ಯಾವುದೇ ತಪ್ಪಾಗಿದ್ದರೆ ಅಂದನ್ನು ಹೇಗೆ ಸರಿಪಡಿಸಬೇಕು ಎಂಬುದನ್ನು ತಿಳಿಯೋಣ..

ಇಲ್ಲಿದೆ ವಿಧಾನ
- ನಿಮ್ಮ Gmail ಖಾತೆಯಲ್ಲಿ ಸರ್ಚ್ ಬಾರ್ ಕೆಳಗೆ ಹಲವಾರು ಆಯ್ಕೆಗಳಿವೆ, ಇದರಲ್ಲಿ ಲೇಬಲ್‌ಗಳು, ಸಾಮಾನ್ಯ, ಖಾತೆಗಳು, ಆಡ್ ಆನ್‌ಗಳು ಸೇರಿವೆ. ಇದರಲ್ಲಿ ನೀವು ಸಾಮಾನ್ಯ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
- ಸಾಮಾನ್ಯ ಸೆಟ್ಟಿಂಗ್‌ಗಳ ಅಡಿಯಲ್ಲಿ 'Undo send option ಆಯ್ಕೆಯನ್ನು' ಕಾಣಬಹುದು. ಆ ಆಯ್ಕೆಯನ್ನು ಈಗಾಗಲೇ ಮಾಡದಿದ್ದರೆ ನೀವು ಅದನ್ನು ಸಕ್ರಿಯಗೊಳಿಸಬೇಕು.
- ಇದರ ನಂತರ ನೀವು Send Cancellation Period ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಅದು ನಿಮ್ಮ ಮೇಲ್ ಅನ್ನು ಹಿಂತೆಗೆದುಕೊಳ್ಳುವ ಸಮಯವನ್ನು ಆಯ್ಕೆ ಮಾಡಲು ನಿಮಗೆ ಅನುಮತಿಸುತ್ತದೆ. ಈ ಅವಧಿಯು ಐದು ಸೆಕೆಂಡುಗಳಿಂದ 30 ಸೆಕೆಂಡುಗಳ ನಡುವೆ ಇರುತ್ತದೆ, ಅದನ್ನು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ನಿರ್ಧರಿಸಬಹುದು.
- ಸಮಯದ ಅವಧಿಯನ್ನು ಆಯ್ಕೆ ಮಾಡಿದ ನಂತರ, ನೀವು ಕೆಳಗೆ ಸ್ಕ್ರಾಲ್ ಮಾಡಬೇಕು ಮತ್ತು ಪುಟದ ಕೆಳಭಾಗದಲ್ಲಿರುವ 'Save Changes' ಬಟನ್ ಕ್ಲಿಕ್ ಮಾಡಿ.
- ಈಗ ನೀವು ನಿಮ್ಮ ಮೇಲ್ ಅನ್ನು ಹಿಂಪಡೆಯುವಿರಿ ಮತ್ತು ಇದನ್ನು  ಪರಿಶೀಲಿಸಲು ಒಂದು ಟೆಸ್ಟ್  ಮೇಲ್ ಕಳುಹಿಸಿ. ಇದಾದ ಬಳಿಕ ಮೇಲ್ ನಲ್ ಕೆಳಗಿನ ಎಡಭಾಗದಲ್ಲಿ Undo ಆಯ್ಕೆಯನ್ನು ನೀವು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡುವುದರಿಂದ ಮೇಲ್ ಹಿಂತಿರುಗುತ್ತದೆ ಮತ್ತು 'sending undone' ಎಂಬ ಸಂದೇಶವನ್ನು ನಿಮಗೆ ಕಾಣಿಸಲಿದೆ.

ಆದರೆ ಈ ಪ್ರಕ್ರಿಯೆ ನಡೆಸುವಾಗ ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳುವುದು ಅವಶ್ಯಕವಾಗಿದೆ. ಅದೇನೆಂದರೆ, ಒಂದು ವೇಳೆ ನೀವು 'Undo' ಆಪ್ಶನ್ ಅನ್ನು ಕಾಲಾವಧಿ ಮುಕ್ತಾಯಕ್ಕೂ ಮುನ್ನ ಕ್ಲಿಕ್ಕಿಸದೆ ಹೋದರೆ ಮೇಲ್ ರವಾನೆಯಾಗುತ್ತದೆ.