Aadhaar ಲಿಂಕ್ ಇಲ್ಲದಿದ್ದರೂ ಸೆಪ್ಟೆಂಬರ್ ಅಂತ್ಯದವರೆಗೆ ಸಿಗಲಿದೆ ಈ ಸೌಲಭ್ಯ

ಆಧಾರ್ ಸಂಖ್ಯೆ ಇಲ್ಲದ ಕಾರಣ ಪಡಿತರ ಚೀಟಿ ರದ್ದತಿ ಕುರಿತು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.

Last Updated : May 12, 2020, 01:27 PM IST
Aadhaar ಲಿಂಕ್ ಇಲ್ಲದಿದ್ದರೂ ಸೆಪ್ಟೆಂಬರ್ ಅಂತ್ಯದವರೆಗೆ ಸಿಗಲಿದೆ ಈ ಸೌಲಭ್ಯ title=

ನವದೆಹಲಿ : ನೀವು ಪಡಿತರ ಚೀಟಿಯನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡದಿದ್ದರೆ ಚಿಂತಿಸಬೇಡಿ. ಸದ್ಯ ಲಾಕ್‌ಡೌನ್‌ ಇರುವುದರಿಂದ ಆಧಾರ್ ಕಾರ್ಡ್ ಜೊತೆಗೆ ರೇಷನ್ ಕಾರ್ಡ್ (Ration Card) ಲಿಂಕ್ ಮಾಡಲು ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30, 2020ವರೆಗೆ ವಿಸ್ತರಿಸಿದೆ. ಈ ಸಮಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಯಾವುದೇ ಫಲಾನುಭವಿಗಳ ಪಡಿತರ ಚೀಟಿಯನ್ನು ಆಧಾರ್ ಸಂಖ್ಯೆಗೆ ಪಡಿತರ ಕಾರ್ಡ್ ಲಿಂಕ್ ಮಾಡದ ಕಾರಣ ಅದನ್ನು ರದ್ದುಗೊಳಿಸಲಾಗುವುದಿಲ್ಲ.

ಬಿಹಾರದಲ್ಲಿ ಆಧಾರ್ (Aadhaar) ಸಂಖ್ಯೆ ಇಲ್ಲದ ಕಾರಣ ಪಡಿತರ ಚೀಟಿ ರದ್ದತಿ ಕುರಿತು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.

ಇಲಾಖೆಯಿಂದ 2017ರ ಫೆಬ್ರವರಿ 7ರ ಅಧಿಸೂಚನೆಯ ಪ್ರಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಫಲಾನುಭವಿಗಳ ಪಡಿತರ ಚೀಟಿಗಳ ಮೂಲಕ ತಮ್ಮ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಗಡುವನ್ನು 2020 ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಸೆಪ್ಟೆಂಬರ್ ಅಂತ್ಯದವರೆಗೆ ಪಡಿತರ ಚೀಟಿ ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಿಲ್ಲ ಎಂಬ ಕಾರಣಕ್ಕಾಗಿ ಯಾವುದೇ ರಾಜ್ಯ ಸರ್ಕಾರವಾಗಲಿ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಾಗಲಿ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ನಿರಾಕರಿಸಲಾಗುವುದಿಲ್ಲ ಎಂದು ಇಲಾಖೆ ತಿಳಿಸಿದೆ, ಏಕೆಂದರೆ ಅವರ ಪಡಿತರ ಚೀಟಿ ಆಧಾರ್ ಸಂಖ್ಯೆಗೆ ಸಂಬಂಧಿಸಿಲ್ಲ ಮತ್ತು ಯಾವುದೇ ಫಲಾನುಭವಿಗಳ ಹೆಸರನ್ನು ಈ ಆಧಾರದ ಮೇಲೆ ಮಾತ್ರ ತೆಗೆದುಹಾಕಲು ಸಾಧ್ಯವಿಲ್ಲ ಅಥವಾ ಪಡಿತರ ಚೀಟಿ ರದ್ದು ಮಾಡಲಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಫಲಾನುಭವಿಯ ಬಯೋಮೆಟ್ರಿಕ್ ಅಥವಾ ಆಧಾರ್ ಅನ್ನು ಗುರುತಿಸದ ಕಾರಣ ಎನ್‌ಎಫ್‌ಎಸ್‌ಎ ಅಡಿಯಲ್ಲಿ ಯಾರಿಗೂ ಸಹ ಪಡಿತರ ನಿರಾಕರಣೆ ಮಾಡುವಂತಿಲ್ಲ ಎಂದು ಇಲಾಖೆ ತಿಳಿಸಿದೆ.
 

Trending News