)
Old 5 Rupee Note Value: ಅನೇಕ ಜನರು ಹಳೆಯ ನೋಟುಗಳು ಉಪಯೋಗಕ್ಕೆ ಬರುವುದಿಲ್ಲವೆಂದು ಮನೆಯ ಮೂಲೆಯಲ್ಲಿ ಇಟ್ಟಿರುತ್ತಾರೆ. ಕೆಲವರು ಅವುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳುತ್ತಾರೆ. ಆ ಹಳೆಯ ನೋಟುಗಳು ನಿಜವಾಗಿಯೂ ನಿಮಗೆ ಅದೃಷ್ಟವನ್ನು ತರುತ್ತವೆ ಅಂದ್ರೆ ನೀವು ನಂಬುತ್ತೀರಾ? ಹೌದು, ಕೆಲವು ವರ್ಷಗಳ ಹಿಂದೆ ಮುದ್ರಿಸಲಾದ ಈ ಹಳೆಯ ಐದು ರೂಪಾಯಿ ನೋಟು ಇಂದು ಅನೇಕ ಜನರಿಗೆ ಅದೃಷ್ಟವನ್ನು ತಂದಿದೆ. ಈ ಹಳೆಯ ನೋಟುಗಳು ನಿಮಗೆ ಲಕ್ಷಾಂತರ ರೂಪಾಯಿ ಲಾಭ ತಂದುಕೊಡಬಹುದು.
ನೋಟುಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿರುವ ವಿದೇಶಿಗರು (ನಾಣ್ಯಶಾಸ್ತ್ರಜ್ಞರು) ಇಂತಹ ಹಳೆಯ 5 ರೂ. ಮುಖಬೆಲೆಯ ನೋಟುಗಳನ್ನು ಖರೀದಿಸಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಅಪರೂಪದ ನೋಟುಗಳಿಗೆ ಅವರು ದೊಡ್ಡಮೊತ್ತದ ಹಣ ನೀಡಲು ಸಹ ಸಿದ್ಧರಿರುತ್ತಾರೆ. ವಿಶೇಷವಾಗಿ 5 ರೂಪಾಯಿ ನೋಟಿನ ಮೇಲೆ ಕೆಲವು ಅಪರೂಪದ ಮುದ್ರೆಗಳಿದ್ದರೆ ಅದರ ಬೆಲೆ ಹೆಚ್ಚು ಇರುತ್ತದೆ. ಕೆಲವು ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತವೆ.
ಖರೀದಿದಾರರು ಈ ವಿಶೇಷ ನೋಟುಗಳಿಗೆ ಭಾರೀ ಮೊತ್ತವನ್ನು ಪಾವತಿಸುತ್ತಾರೆ. ಈ ಅಪರೂಪದ ನೋಟುಗಳ ಮೇಲೆ ಕೆಲವು ಸಂಖ್ಯೆಗಳಿದ್ದರೆ ಅವುಗಳಿಗೆ ಬೆಲೆ ಜಾಸ್ತಿ ಇರುತ್ತದೆ. ವಿಶೇಷವಾಗಿ ನಿಯಮಿತ ಸರಣಿ ಸಂಖ್ಯೆಗಳ ಬದಲಿಗೆ, 786ನಂತಹ ವಿಶೇಷ ಸಂಖ್ಯೆ ಅಥವಾ 123456 ನಂತಹ ಅಂಕೆಗಳ ಅನುಕ್ರಮವನ್ನು ಹೊಂದಿರುವ ನೋಟುಗಳನ್ನು ಲಕ್ಷಾಂತರ ರೂಪಾಯಿ ನೀಡಿ ಖರೀದಿಸಲಾಗುತ್ತದೆ. ಈ ರೀತಿಯ ಸಂಖ್ಯೆಗಳನ್ನು ಹೊಂದಿರುವ ನೋಟುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ.
ಈ ನೋಟುಗಳನ್ನು A ಸರಣಿಯಲ್ಲಿ ಮುದ್ರಿಸಿದ್ದರೆ, ಬೇಡಿಕೆ ಇನ್ನೂ ಹೆಚ್ಚಿರುತ್ತಿತ್ತು ಎಂದು ವರದಿಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಹಿಂದೆ ಇದೇ ರೀತಿಯ ಸರಣಿ ಸಂಖ್ಯೆಗಳನ್ನು ಹೊಂದಿರುವ ಕೆಲವು 5 ರೂಪಾಯಿ ನೋಟುಗಳನ್ನು ಮಾತ್ರ ಮುದ್ರಿಸಿತ್ತು. ಪ್ರಸ್ತುತ ಇವುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇತರ ದೇಶಗಳಲ್ಲಿ ಲಕ್ಷ ಲಕ್ಷಗಳಿಗೆ ಇಂತಹ ನೋಟುಗಳನ್ನು ಖರೀದಿಸಲಾಗುತ್ತದೆ.
5 ರೂ. ನೋಟು ಹೆಚ್ಚಿನ ದರ ಪಡೆಯಬೇಕಾದರೆ, ಅದರ ಮೇಲೆ ಕೆಲವು ವಿಶೇಷ ಚಿತ್ರಗಳು ಇರಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ಹಿಂಭಾಗದಲ್ಲಿ ಟ್ರ್ಯಾಕ್ಟರ್ ಓಡಿಸುವ ರೈತನ ಚಿತ್ರವಿರಬೇಕು. ಆಗ ಮಾತ್ರ ಅದನ್ನು ಅಪರೂಪದ ನೋಟು ಎಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ಖರೀದಿಸುವ ಅನೇಕರು ಆಸಕ್ತಿ ತೋರುತ್ತಾರೆ.
ಹಳೆಯ ನೋಟುಗಳನ್ನು ಮಾರಾಟ ಮಾಡಲು ಪ್ರಸ್ತುತ ಹಲವು ರೀತಿಯ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳು ಲಭ್ಯವಿದೆ. eBay ಮತ್ತು CoinBazzar ಇದರಲ್ಲಿ ಸಕ್ರಿಯ ಪಾತ್ರ ವಹಿಸುತ್ತಿವೆ. ನಿಮ್ಮಲ್ಲಿರುವ ಅಪರೂಪದ ಹಳೆಯ ನೋಟನ್ನು ನೀವು ಈ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಮಾಡಿದರೆ, ಖರೀದಿದಾರರು ನಿಮಗೆ ಕರೆ ಮಾಡುತ್ತಾರೆ. ನೀವು ನೇರವಾಗಿ ಬೆಲೆಯ ಮಾತುಕತೆ ಮಾಡಿ ನೋಟನ್ನು ಮಾರಾಟ ಮಾಡಬಹುದು.
ಹಿಂದೆ, ಅಪರೂಪದ 5 ರೂ. ನೋಟುಗಳನ್ನು ಲಕ್ಷಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಅಂತಹ ಹಳೆಯ ನೋಟುಗಳನ್ನು ಮಾರಾಟ ಮಾಡುವ ಮೂಲಕ ಅನೇಕರು 50 ಲಕ್ಷ ರೂ.ಗಳಿಗಿಂತ ಹೆಚ್ಚು ಗಳಿಸಿದ ನಿದರ್ಶನಗಳಿವೆ. ನಿಮ್ಮ ಬಳಿಯೂ ಅಂತಹ ಹಳೆಯ ನೋಟುಗಳಿದ್ದರೆ, ಅವುಗಳನ್ನು ಎಲ್ಲಿಯೋ ಎಸೆಯದೆ, ಈ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಮಾರಾಟ ಮಾಡಿ ಹಣ ಗಳಿಸಬಹುದು. ಇಲ್ಲಿ ಮಾರಾಟ ಮಾಡಬೇಕಾದರೆ ನೀವು ತುಂಬಾ ಎಚ್ಚರಿಕೆ ವಹಿಸಬೇಕು. ಯಾವುದೇ ರೀತಿಯ ಆಮೀಷ ಮತ್ತು ವಂಚನೆಗೆ ಬಲಿಯಾಗದೆ ನೀವು ಈ ನೋಟುಗಳನ್ನ ಮಾರಾಟ ಮಾಡಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ