ಈ ಹಳ್ಳಿಯಲ್ಲಿ ಹೆಂಗಸರೇ ಇಲ್ಲ.. ಬರೀ ಗಂಡಸರೇ.. ಯಾಕೆ ಗೊತ್ತಾ..?
Unique village: ಭಾರತದಾದ್ಯಂತ ಅನೇಕ ಅದ್ಭುತ ಸಂಗತಿಗಳಿವೆ... ಅದೇ ರೀತಿ ಈ ವಿಚಿತ್ರ ಹಳ್ಳಿಯಲ್ಲಿ ಹೆಂಗಸರೇ ಇಲ್ಲ.. ಬರೀ ಗಂಡಸರು ಮಾತ್ರ ವಾಸಿಸುತ್ತಾರೆ.... ಕಾರಣ?
Bihar: ನಮ್ಮ ದೇಶದ ಬಿಹಾರ ರಾಜ್ಯದ ಬರ್ವಾನ್ ಕಾಲಾ ಗ್ರಾಮದ ಗಂಡಸರು ಮದುವೆಯಾಗಲು ಬಯಸುವುದಿಲ್ಲ.. ಹೀಗಾಗಿ ಈ ಹಳ್ಳಿಯಲ್ಲಿ ಬರೀ ಗಂಡಸರೇ... ಹಾಗಾದರೆ ಅವರು ಯಾಕೆ ಮದುವೆಯಾಗಲಿಲ್ಲ ಎಂದು ಈಗ ತಿಳಿಯೋಣ..
ಭಾರತದಾದ್ಯಂತ ಕಾಣಸಿಗುವ ಅನೇಕ ಅದ್ಭುತ ಸಂಗತಿಗಳಲ್ಲಿ ಬಿಹಾರದ ಕೈಮೂರ್ ಬೆಟ್ಟಗಳಲ್ಲಿ ಬರ್ವಾನ್ ಕಾಲ ಎಂಬ ಗ್ರಾಮ ಸಹ ಒಂದು.. ಈ ಇಡೀ ಗ್ರಾಮದಲ್ಲಿ ಪುರುಷರು ಮಾತ್ರ ವಾಸಿಸುತ್ತಿದ್ದಾರೆ... ಮಹಿಳೆಯರೇ ಇಲ್ಲ.
ಇದನ್ನೂ ಓದಿ-ಕೇಂದ್ರದಿಂದ ಸ್ಮೈಲ್ ಯೋಜನೆ: ಭಾರತದಲ್ಲಿ 2026ರಷ್ಟರಲ್ಲಿ ಬಿಕ್ಷಾಟನೆ ಅಂತ್ಯ!
ವಾಸ್ತವವಾಗಿ, ಈ ಗ್ರಾಮದ ಪುರುಷರು ಮದುವೆಯಾಗುವುದಿಲ್ಲ. ಕಳೆದ 50 ವರ್ಷಗಳಲ್ಲಿ ಈ ಗ್ರಾಮದಲ್ಲಿ ಯಾವುದೇ ಮಹಿಳೆ ಯಾವುದೇ ಪುರುಷನನ್ನು ಮದುವೆಯಾಗಲು ಒಪ್ಪಿರಲಿಲ್ಲವಂತೆ. ಇದರಿಂದ ಈ ಗ್ರಾಮದ ಪುರುಷರು ಅವಿವಾಹಿತರಾಗಿದ್ದರು... ಹಾಗಾದರೆ ಈ ಗ್ರಾಮದ ಪುರುಷರನ್ನು ಮದುವೆಯಾಗಲು ಯಾವ ಮಹಿಳೆಯೂ ಮುಂದೆ ಬರುವುದಿಲ್ಲ ಏಕೆ.? ಎನ್ನುವ ಪ್ರಶ್ನೆ ಉಧ್ಭವವಾಗುತ್ತದೆ..
ಈ ಬರ್ವಾನ್ ಕಾಲಾ ಗ್ರಾಮವು ಬಿಹಾರದ ಕೈಮೂರ್ ಬೆಟ್ಟಗಳಲ್ಲಿ ಎತ್ತರದಲ್ಲಿದ್ದು.. ಬೆಟ್ಟದ ತುದಿಗೆ ಹೋಗುವ ದಾರಿಯಲ್ಲಿ ಬಂಡೆಗಳು ಮತ್ತು ಕಾಡುಗಳ ಮೇಲೆ ಪ್ರಯಾಣಿಸಬೇಕು. ಆ ಗ್ರಾಮವನ್ನು ತಲುಪಲು ಒಂದೇ ಒಂದು ಮಾರ್ಗವಿದೆ. ಕನಿಷ್ಠ ಸೌಕರ್ಯಗಳ ಕೊರತೆಯಿಂದ ಯಾವ ಮಹಿಳೆಯೂ ಆ ಪ್ರದೇಶಕ್ಕೆ ಹೋಗಲು ಬಯಸುವುದಿಲ್ಲ.. ಹಾಗಾಗಿ ಯಾವುದೇ ಮಹಿಳೆ ಅಥವಾ ಆಕೆಯ ಕುಟುಂಬದ ಸದಸ್ಯರು ಈ ಗ್ರಾಮದ ಯಾವುದೇ ಪುರುಷನನ್ನು ಮದುವೆಯಾಗುವುದಿಲ್ಲ.. ಆದರೆ 2017ರಲ್ಲಿ ಈ ಗ್ರಾಮದ ಯುವಕನೊಬ್ಬ ಮದುವೆಯಾಗಿ ಪತ್ನಿಯೊಂದಿಗೆ ಗ್ರಾಮಕ್ಕೆ ಬಂದು ದಾಖಲೆ ಸೃಷ್ಟಿಸಿದ್ದ..
ಇದನ್ನೂ ಓದಿ-Gyanvapi Case: ಹಿಂದೂಗಳ ಪರ ಮಹತ್ವದ ತೀರ್ಪು: ಜ್ಞಾನವಾಪಿ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ಅವಕಾಶ ನೀಡಿದ ಕೋರ್ಟ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ