ಕಳೆದ 24 ಗಂಟೆಗಳಲ್ಲಿ 10 ರಾಜ್ಯಗಳಿಂದ ಶೇ 75 ರಷ್ಟು ಹೊಸ COVID-19 ಪ್ರಕರಣ ದಾಖಲು

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 86,508 ಹೊಸ COVID-19 ಸೋಂಕುಗಳು ವರದಿಯಾಗಿವೆ. ಇವುಗಳಲ್ಲಿ ಕನಿಷ್ಠ ಶೇ 75 ದೃಢಪಡಿಸಿದ ಪ್ರಕರಣಗಳು 10 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಂಡುಬಂದಿದೆ.

Updated: Sep 24, 2020 , 07:01 PM IST
ಕಳೆದ 24 ಗಂಟೆಗಳಲ್ಲಿ 10 ರಾಜ್ಯಗಳಿಂದ ಶೇ 75 ರಷ್ಟು ಹೊಸ COVID-19 ಪ್ರಕರಣ ದಾಖಲು

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 86,508 ಹೊಸ COVID-19 ಸೋಂಕುಗಳು ವರದಿಯಾಗಿವೆ. ಇವುಗಳಲ್ಲಿ ಕನಿಷ್ಠ ಶೇ 75 ದೃಢಪಡಿಸಿದ ಪ್ರಕರಣಗಳು 10 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಂಡುಬಂದಿದೆ.

ಸತತ ಆರನೇ ದಿನ, ಹೊಸ ದೃಢಪಡಿಸಿದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಭಾರತವು ಶೇಕಡಾ 81.55 ರಷ್ಟು ಚೇತರಿಕೆ ಕಂಡಿದ್ದರೆ, ಸಾವಿನ ಪ್ರಮಾಣವು ಶೇಕಡಾ 1.59 ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಕರೋನಾ ವಿರುದ್ಧ ಹೋರಾಡಲು ಪ್ರಧಾನಿ ಮೋದಿಯವರ 'ಪಂಚ ಮಂತ್ರ' ಅನುಸರಿಸಿ

ಮಹಾರಾಷ್ಟ್ರವು ಅತಿ ಹೆಚ್ಚು ಸೋಂಕುಗಳನ್ನು ವರದಿ ಮಾಡಿದೆ. ಕಳೆದ ಒಂದು ದಿನದಲ್ಲಿ ಇದು ಕೇವಲ 21,000 ಕ್ಕೂ ಹೆಚ್ಚು ಕೊವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಕ್ರಮವಾಗಿ 7,000 ಮತ್ತು 6,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.ಆದರೆ, ಈ 10 ರಾಜ್ಯಗಳು / ಕೇಂದ್ರಾಡಳಿತ ದೇಶದ ಒಟ್ಟು ಸಾವು ನೋವುಗಳಲ್ಲಿ ಶೇ 83 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಗುರುವಾರ 1,129 ಸಾವುಗಳು ದಾಖಲಾಗಿವೆ.

ಕೊರೊನಾದಿಂದ ಬಸವ ಕಲ್ಯಾಣ ಶಾಸಕ ಬಿ.ನಾರಾಯಣರಾವ್ ಸಾವು

ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 479 ಸಾವುಗಳು ಸಂಭವಿಸಿವೆ, ಉತ್ತರ ಪ್ರದೇಶ ಮತ್ತು ಪಂಜಾಬ್ ಕ್ರಮವಾಗಿ 87 ಮತ್ತು 64 ಸಾವುಗಳು ಸಂಭವಿಸಿವೆ.ಭಾರತದ ಒಟ್ಟು ಕೊರೊನಾ ಸಂಖ್ಯೆ 57,32,518 ರಷ್ಟಿದ್ದು, 9,66,382 ಸಕ್ರಿಯ ಪ್ರಕರಣಗಳು 46,74,987 ಡಿಸ್ಚಾರ್ಜ್ ಆಗಿದ್ದು, ಸಾವಿನ ಸಂಖ್ಯೆ 91,149 ಆಗಿದೆ.