ಉತ್ತರ ಪ್ರದೇಶದಲ್ಲಿ ಗಾಂಧಿಜೀ ಹಾಗೂ ರಾಷ್ಟ್ರೀಯ ಚಿಹ್ನೆ ಟೈಲ್ಸ್ ನಲ್ಲಿ ಶೌಚಾಲಯ ನಿರ್ಮಾಣ...!

 ಉತ್ತರ ಪ್ರದೇಶ ಗ್ರಾಮವೊಂದರಲ್ಲಿ ಸ್ವಚ್ ಭಾರತ್ ಮಿಶನ್ ಅಡಿಯಲ್ಲಿ ಹಲವಾರು ಶೌಚಾಲಯಗಳನ್ನು ಮಹಾತ್ಮ ಗಾಂಧಿಯವರ ಮತ್ತು ರಾಷ್ಟ್ರೀಯ ಲಾಂಛನದ ಚಿತ್ರಗಳ ಮೂಲಕ ನಿರ್ಮಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.ಇದಕ್ಕೆ ಸ್ಥಳೀಯ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಇದರ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿವೆ.

Updated: Jun 5, 2019 , 09:49 PM IST
ಉತ್ತರ ಪ್ರದೇಶದಲ್ಲಿ ಗಾಂಧಿಜೀ ಹಾಗೂ ರಾಷ್ಟ್ರೀಯ ಚಿಹ್ನೆ ಟೈಲ್ಸ್ ನಲ್ಲಿ ಶೌಚಾಲಯ ನಿರ್ಮಾಣ...!
photo:ANI

ನವದೆಹಲಿ:  ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಸ್ವಚ್ ಭಾರತ್ ಮಿಶನ್ ಅಡಿಯಲ್ಲಿ ಹಲವಾರು ಶೌಚಾಲಯಗಳನ್ನು ಮಹಾತ್ಮ ಗಾಂಧಿಜೀ ಮತ್ತು ರಾಷ್ಟ್ರೀಯ ಲಾಂಛನದ ಚಿತ್ರಗಳ ಮೂಲಕ ನಿರ್ಮಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.ಇದಕ್ಕೆ ಸ್ಥಳೀಯ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.ಈಗ ಇದರ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿವೆ.

ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಸ್ಥಳೀಕ "ಈ ಅಂಚುಗಳನ್ನು ಗ್ರಾಮದ ಮುಖ್ಯಸ್ಥರ ಆದೇಶದ ಮೇರೆಗೆ ಜೋಡಿಸಲಾಗಿದ್ದು, ನಾವು ಇದರ ವಿರುದ್ಧ ದೂರು ನೀಡಿದಾಗ, ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬಾರದು ಉನ್ನತ ಅಧಿಕಾರಿಗಳ ನಿರ್ಧಾರದಂತೆ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ನಮಗೆ ಹೇಳಲಾಗಿದೆ" ಎಂದು ತಿಳಿಸಿದ್ದಾರೆ.

ಇದನ್ನು ಜಿಲ್ಲಾ ಆಡಳಿತದ ಅಧಿಕಾರಿಗಳು ಪರೀಕ್ಷಿಸಿದಾಗ ಶೌಚಾಲಯಗಳ ಗೋಡೆಗಳ ಮೇಲೆ ರಾಷ್ಟ್ರೀಯ ಚಿಹ್ನೆಗಳನ್ನು ಹೊಂದಿರುವ ಅಂಚುಗಳನ್ನು ಬುಲಂದ್ ಶಹರ್ನ ಇಖವಾರಿ ಗ್ರಾಮದಲ್ಲಿ ಕಂಡು ಬಂದಿವೆ."ಈ ಗ್ರಾಮದಲ್ಲಿ ಸುಮಾರು 508 ಶೌಚಾಲಯಗಳನ್ನು ಸ್ವಚ್ ಭಾರತ್ ಅಭಿಯಾನ್ ಅಡಿಯಲ್ಲಿ ನಿರ್ಮಿಸಲಾಗಿದೆ.ಮಹತ್ಮಾ ಗಾಂಧಿ ಮತ್ತು ಅಶೋಕ ಚಕ್ರದ ಚಿಹ್ನೆಗಳನ್ನು ಹೊಂದಿರುವ 13 ಶೌಚಾಲಯಗಳು ಕಂಡುಬಂದಿವೆ. ಶೌಚಾಲಯಗಳನ್ನು ಪರೀಕ್ಷಿಸಿದ್ದೇವೆ. ನಾವು ಈ ಅಂಚುಗಳನ್ನು ತೆಗೆದು ಹಾಕಿದ್ದೇವೆ" ಎಂದು ಬುಲಂದ್ ಶಹರ್ ಜಿಲ್ಲಾ ಅಧಿಕಾರಿ ಅಮರ್ಜೀತ್ ಸಿಂಗ್ ಹೇಳಿದ್ದಾರೆ.

ತನಿಖೆಯ ನಂತರ ಗ್ರಾಮೀಣಾಭಿವೃದ್ಧಿ ಅಧಿಕಾರಿ ಸಂತೋಷ್ ಕುಮಾರ್ ರನ್ನು ಅಮಾನತ್ತುಗೊಳಿಸಲಾಯಿತು ಮತ್ತು ಗ್ರಾಮ ಪ್ರಧಾನ್ ಸಾವಿತ್ರಿ ದೇವಿಗೆ ನೋಟೀಸ್ ನೀಡಲಾಯಿತು.ಗ್ರಾಮೀಣಾಭಿವೃದ್ಧಿ ಅಧಿಕಾರಿಯ ಅಮಾನತು ಜೊತೆಗೆ ಗ್ರಾಮ ಪ್ರಧಾನ್ ಸಾವಿತ್ರಿ ದೇವಿಗೆ ನೋಟೀಸ್ ನೀಡಲಾಗಿದ್ದು, ಸಾವಿತ್ರಿಯ ಎಲ್ಲಾ ಸರ್ಕಾರಿ ಖಾತೆಗಳನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.