ಮಾಯಾವತಿ ಸಹೋದರನ ವಿರುದ್ಧ ಐಟಿ ಕ್ರಮ, 400 ಕೋಟಿ ರೂ. ಮೌಲ್ಯದ ಸಂಪತ್ತು ವಶ

ಆನಂದ್ ಕುಮಾರ್ ಮತ್ತು ಅವರ ಪತ್ನಿಗೆ ಸೇರಿದ 400 ಕೋಟಿ ರೂ. ಮೌಲ್ಯದ ಸಂಪತ್ತನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆನಂದ್ ಕುಮಾರ್ ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ.

Last Updated : Jul 18, 2019, 02:52 PM IST
ಮಾಯಾವತಿ ಸಹೋದರನ ವಿರುದ್ಧ ಐಟಿ ಕ್ರಮ, 400 ಕೋಟಿ ರೂ. ಮೌಲ್ಯದ ಸಂಪತ್ತು ವಶ title=
File Image

ನವದೆಹಲಿ: ಬಹುಜನ ಸಮಾಜವಾದಿ ಪಕ್ಷ(ಬಿಎಸ್​ಪಿ)ದ ಮುಖ್ಯಸ್ಥೆ ಮಾಯಾವತಿ ಸಹೋದರ ಆನಂದ್ ಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆ ಪ್ರಮುಖ ಕ್ರಮ ಕೈಗೊಂಡಿದ್ದು, ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.

ಮಾಯಾವತಿ ಸಹೋದರ ಹಾಗೂ ಬಹುಜನ ಸಮಾಜವಾದಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿರೂ ಆಗಿರುವ ಆನಂದ್ ಕುಮಾರ್ ಮತ್ತು ಅವರ ಪತ್ನಿಗೆ ಸೇರಿದ 400 ಕೋಟಿ ರೂ. ಮೌಲ್ಯದ ಸಂಪತ್ತನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 

ಆನಂದ್ ಕುಮಾರ್ ಮತ್ತು ಅವರ ಪತ್ನಿಗೆ ಸೇರಿದ 400 ಕೋಟಿ ರೂ.ಗಳ ಏಳು ಎಕರೆ ಭೂಮಿಯನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ದೆಹಲಿಯ ಆದಾಯ ತೆರಿಗೆ ಇಲಾಖೆಯ ಬೆನಾಮಿ ನಿಷೇಧ ಘಟಕ (ಬಿಪಿಯು) ಈ ನಿಟ್ಟಿನಲ್ಲಿ ಜುಲೈ 16 ರಂದು ಆದೇಶ ಹೊರಡಿಸಿದೆ. ಅನಾಮಧೇಯ ಆಸ್ತಿ ವಹಿವಾಟು ನಿಷೇಧ ಕಾಯ್ದೆ 1988 ರ ಸೆಕ್ಷನ್ 24 (3) ರ ಅಡಿಯಲ್ಲಿ ಈ ಆದೇಶವನ್ನು ನೀಡಲಾಗಿದೆ.

Trending News