ಭಾರತದ ಆಂತರಿಕ ವಿಚಾರದಲ್ಲಿ ಚೀನಾದ ಹಸ್ತಕ್ಷೇಪ ಸಲ್ಲದು- ಚೀನಾಗೆ ಭಾರತದ ಸಲಹೆ

ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಚೀನಾದ ಟೀಕೆಗಳನ್ನು ಭಾರತ ಬುಧವಾರ (ಆಗಸ್ಟ್ 5) ತೀವ್ರವಾಗಿ ಖಂಡಿಸಿ, ಆಂತರಿಕ ವಿಷಯಗಳ ಬಗ್ಗೆ ಚೀನಾಕ್ಕೆ ಸಲಹೆ ನೀಡಿದೆ.

Last Updated : Aug 5, 2020, 10:22 PM IST
ಭಾರತದ ಆಂತರಿಕ ವಿಚಾರದಲ್ಲಿ ಚೀನಾದ ಹಸ್ತಕ್ಷೇಪ ಸಲ್ಲದು- ಚೀನಾಗೆ ಭಾರತದ ಸಲಹೆ  title=

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಚೀನಾದ ಟೀಕೆಗಳನ್ನು ಭಾರತ ಬುಧವಾರ (ಆಗಸ್ಟ್ 5) ತೀವ್ರವಾಗಿ ಖಂಡಿಸಿ, ಆಂತರಿಕ ವಿಷಯಗಳ ಬಗ್ಗೆ ಚೀನಾಕ್ಕೆ ಸಲಹೆ ನೀಡಿದೆ.

ಇದನ್ನು ಓದಿ: ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಮತ್ತೆ ಕ್ಯಾತೆ ತೆಗೆದ ಚೀನಾ

ಜಮ್ಮು ಮತ್ತು ಕಾಶ್ಮೀರದ ಭಾರತೀಯ ಕೇಂದ್ರಾಡಳಿತ ಪ್ರದೇಶದ ಚೀನಾದ ಎಂಎಫ್‌ಎ ವಕ್ತಾರರ ಅಭಿಪ್ರಾಯಗಳನ್ನು ಕೇಳಿದ್ದೇವೆ,ಇನ್ನೊಂದು ದೇಶದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಅಧಿಕಾರ ಚೀನಾಗೆ ಇಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ಅಧಿಕೃತ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಯಥಾಸ್ಥಿತಿಗೆ ಯಾವುದೇ ಏಕಪಕ್ಷೀಯ ಬದಲಾವಣೆ ಕಾನೂನುಬಾಹಿರ ಮತ್ತು ಅಮಾನ್ಯವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಬೀಜಿಂಗ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಒಂದು ವರ್ಷ ಪೂರ್ಣಗೊಂಡಿದೆ ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಗೊಂಡಿರುವ ಬಗ್ಗೆ ಪಾಕಿಸ್ತಾನದ ವರದಿಗಾರರ ಪ್ರಶ್ನೆಯೊಂದನ್ನು ಅನುಸರಿಸಿ ಚೀನಾದ ವಕ್ತಾರರು ಈ ಅಭಿಪ್ರಾಯಗಳನ್ನು ನೀಡಿದ್ದಾರೆ.
 

Trending News