)
London India Independence Day : ಬ್ರಿಟಿಷ್ ರಾಜಧಾನಿ ಲಂಡನ್ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಾಗರಿಕರ ನಡುವೆ ಮತ್ತೊಮ್ಮೆ ಉದ್ವಿಗ್ನತೆ ಉಂಟಾಗಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಲಂಡನ್ನ ಬೀದಿಗಳಲ್ಲಿ ಬಂದಿದ್ದ ಭಾರತೀಯರೊಂದಿಗೆ ಪಾಕಿಸ್ತಾನಿ ಜನ ಕೆಟ್ಟದಾಗಿ ವರ್ತಿಸಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.
ಭಾರತೀಯ ಮುಸ್ಲಿಂ ಹುಡುಗಿಯರು ಸ್ವಲ್ಪವೂ ಹೆದರದೇ ಪಾಕಿಸ್ತಾನಿ ಹುಡುಗರೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಅನೇಕ ಭಾರತೀಯರು ಕಾಮೆಂಟ್ ಮಾಡುತ್ತಿರುವುದು ಕಂಡುಬಂದಿದೆ..
ಪಾಕಿಸ್ತಾನಿ ನಾಗರಿಕರು ಭಾರತೀಯರಿಂದ ತ್ರಿವರ್ಣ ಧ್ವಜವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ ಘಟನೆ ನಡೆದಿದೆ. ಆದರೆ ಭಾರತೀಯ ಮುಸ್ಲಿಂ ಯುವತಿಯರು ಅವರಿಗೆ ತಕ್ಕ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೆ, "ಹಿಂದೂಸ್ತಾನ್ ಜಿಂದಾಬಾದ್" ಎಂದು ಘೋಷಣೆ ಕೂಗಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವೀಡಿಯೊದಲ್ಲಿ, ಮುಸ್ಲಿಂ ಹುಡುಗಿಯೊಬ್ಬಳು ತನ್ನ ಸ್ನೇಹಿತರೊಂದಿಗೆ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವುದನ್ನು ಕಾಣಬಹುದು. ಅದೇ ಸಮಯದಲ್ಲಿ, ಕೆಲವು ಪಾಕಿಸ್ತಾನಿ ಯುವಕರು ಬಂದು ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸುದ್ದಾರೆ. ಆದರೆ, ಭಾರತೀಯ ಹುಡುಗಿ ಹೆದರದೇ ಪಾಕಿಸ್ತಾನಿಗಳ ಜೊತೆ ಜಗಳವಾಡಿದ್ದಾರೆ.
ಲಂಡನ್ ಬೀದಿಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ಯುವಕರ ಜೊತೆಗಿನ ಘರ್ಷಣೆಗಳು ಹೊಸದೇನಲ್ಲ. ಇದಕ್ಕೂ ಮೊದಲು, ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಸಮಯದಲ್ಲಿ, ಲಂಡನ್ ಬೀದಿಗಳಲ್ಲಿ ಎರಡೂ ದೇಶಗಳ ನಾಗರಿಕರ ನಡುವೆ ಉದ್ವಿಗ್ನತೆ ಉಂಟಾಗಿತ್ತು. ಎರಡೂ ದೇಶಗಳ ನಾಗರಿಕರು ತಮ್ಮ ಸರ್ಕಾರಗಳನ್ನು ಬೆಂಬಲಿಸಿ ಲಂಡನ್ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ್ದರು.
ಇದು ಸಂಘರ್ಷದ ಪರಿಸ್ಥಿತಿಗೆ ಕಾರಣವಾಯಿತು. ಈ ಬಾರಿ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕಾಯಿತು. ಭಾರತ ಮತ್ತು ಪಾಕಿಸ್ತಾನದ ಸ್ವಾತಂತ್ರ್ಯ ದಿನಗಳ ನಡುವೆ ಒಂದು ದಿನದ ವ್ಯತ್ಯಾಸವಿದೆ. ಪಾಕಿಸ್ತಾನದಲ್ಲಿ ಆಗಸ್ಟ್ 14 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ, ಆದರೆ ಭಾರತದಲ್ಲಿ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.