ಜಾಗತಿಕ ಹಸಿವು ಸೂಚ್ಯಂಕ 2020: ಭಾರತಕ್ಕೆ 107 ರಾಷ್ಟ್ರಗಳಲ್ಲಿ 94 ನೇ ಸ್ಥಾನ
ಜಾಗತಿಕ ಹಸಿವು ಸೂಚ್ಯಂಕ 2020 ರಲ್ಲಿ ಭಾರತವು 107 ರಾಷ್ಟ್ರಗಳಲ್ಲಿ 94 ನೇ ಸ್ಥಾನ ಗಳಿಸಿದೆ.
ನವದೆಹಲಿ: ಜಾಗತಿಕ ಹಸಿವು ಸೂಚ್ಯಂಕ (Global Hunger Index) 2020 ರಲ್ಲಿ ಭಾರತವು 107 ರಾಷ್ಟ್ರಗಳಲ್ಲಿ 94 ನೇ ಸ್ಥಾನ ಗಳಿಸಿದೆ.
ಕಳಪೆ ಅನುಷ್ಠಾನ ಪ್ರಕ್ರಿಯೆ, ಪರಿಣಾಮಕಾರಿ ಮೇಲ್ವಿಚಾರಣೆಯ ಕೊರತೆ, ಅಪೌಷ್ಟಿಕತೆಯನ್ನು ನಿಭಾಯಿಸುವಲ್ಲಿ ಅಶಿಸ್ತಿನ ವಿಧಾನ ಮತ್ತು ದೊಡ್ಡ ರಾಜ್ಯಗಳು ಉತ್ತಮ ಪ್ರದರ್ಶಿಸದಿರುವುರಿಂದಾಗಿ ಈಗ ಭಾರತ 'ಗಂಭೀರ' ಹಸಿವಿನ ವಿಭಾಗದಲ್ಲಿದೆ.ಕಳೆದ ವರ್ಷ ಭಾರತದ ಶ್ರೇಯಾಂಕ 117 ದೇಶಗಳಲ್ಲಿ 102 ಆಗಿತ್ತು.
ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ ಪಾಕ್ ಗಿಂತಲೂ ಹಿಂದೆ..!
ನೆರೆಯ ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಪಾಕಿಸ್ತಾನ ಕೂಡ 'ಗಂಭೀರ' ವಿಭಾಗದಲ್ಲಿದ್ದರೂ ಈ ವರ್ಷದ ಹಸಿವಿನ ಸೂಚ್ಯಂಕದಲ್ಲಿ ಭಾರತಕ್ಕಿಂತ ಹೆಚ್ಚಿನ ಸ್ಥಾನದಲ್ಲಿದೆ. ಬಾಂಗ್ಲಾದೇಶ 75 ನೇ ಸ್ಥಾನದಲ್ಲಿದ್ದರೆ, ಮ್ಯಾನ್ಮಾರ್ ಮತ್ತು ಪಾಕಿಸ್ತಾನ 78 ಮತ್ತು 88 ನೇ ಸ್ಥಾನದಲ್ಲಿವೆ.73 ನೇ ಸ್ಥಾನದಲ್ಲಿ ನೇಪಾಳ ಮತ್ತು 64 ನೇ ಸ್ಥಾನದಲ್ಲಿರುವ ಶ್ರೀಲಂಕಾ 'ಮಧ್ಯಮ' ಹಸಿವಿನ ವಿಭಾಗದಲ್ಲಿದೆ ಎಂದು ವರದಿ ತೋರಿಸಿದೆ.
ಚೀನಾ, ಬೆಲಾರಸ್, ಉಕ್ರೇನ್, ಟರ್ಕಿ, ಕ್ಯೂಬಾ ಮತ್ತು ಕುವೈತ್ ಸೇರಿದಂತೆ ಹದಿನೇಳು ರಾಷ್ಟ್ರಗಳು ಜಿಎಚ್‌ಐ ಅಂಕಗಳಿಗಿಂತ ಐದು ಕ್ಕಿಂತ ಕಡಿಮೆ ಅಂಕಗಳೊಂದಿಗೆ ಅಗ್ರ ಶ್ರೇಯಾಂಕವನ್ನು ಹಂಚಿಕೊಂಡಿವೆ ಎಂದು ಹಸಿವು ಮತ್ತು ಅಪೌಷ್ಟಿಕತೆಯನ್ನು ಪತ್ತೆಹಚ್ಚುವ ಜಾಗತಿಕ ಹಸಿವು ಸೂಚ್ಯಂಕದ ವೆಬ್‌ಸೈಟ್ ಶುಕ್ರವಾರ ತಿಳಿಸಿದೆ. ಈ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಶೇಕಡಾ 14 ರಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.