ನವದೆಹಲಿ: 2021 ರ ಅಂತ್ಯದ ವೇಳೆಗೆ ಎಲ್ಲರಿಗೂ ಸಂಪೂರ್ಣ ಕೊರೊನಾ ಲಸಿಕೆ ಹಾಕಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಶುಕ್ರವಾರ ಮಧ್ಯಾಹ್ನ ಘೋಷಿಸಿದರು.
ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಹಾಕದಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ ಹೇಳಿಕೆ ನಂತರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಬಂದಿದೆ.ರಾಹುಲ್ ಗಾಂಧಿ ವಿರುದ್ಧ ಕಿಡಿ ಕಾರಿರುವ ಜಾವಡೆಕರ್ (Prakash Javadekar) "ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳತ್ತ ಗಮನ ಹರಿಸಿ... ಅಲ್ಲಿ ಲಸಿಕೆ ಹಾಕುವುದರಲ್ಲಿ ಅವ್ಯವಸ್ಥೆ ಇದೆ' ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: Delhi Government : ಆಕ್ಸಿಜನ್ ಕೊರತೆಯಿಂದ ಮೃತ ಕೊರೋನಾ ರೋಗಿಗಳ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ!
"ಭಾರತದ ಲಸಿಕಾ ಕಾರ್ಯಕ್ರಮವು 2021 ಕ್ಕಿಂತ ಮೊದಲು ಪೂರ್ಣಗೊಳ್ಳುತ್ತದೆ. ಲಸಿಕೆ ಬಗ್ಗೆ ರಾಹುಲ್ಜಿ ಕಾಳಜಿ ವಹಿಸಿದ್ದರೆ, ಅವರು ಕಾಂಗ್ರೆಸ್ ಆಡಳಿತದ ರಾಜ್ಯಗಳತ್ತ ಗಮನ ಹರಿಸಬೇಕು ... ವ್ಯಾಕ್ಸಿನೇಷನ್‌ನಲ್ಲಿ ಅವ್ಯವಸ್ಥೆ ಇದೆ. ಅವರು 18-44 ವರ್ಷಕ್ಕೆ ಅವರಿಗೆ ನೀಡಿರುವ ಕೋಟಾವನ್ನು ತೆಗೆದುಕೊಳ್ಳುತ್ತಿಲ್ಲ "ಎಂದು ಜಾವಡೇಕರ್ ಹೇಳಿದರು.
ಇದಕ್ಕೂ ಮೊದಲು ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿ ಅವರು ಕೊರೊನಾದ ಎರಡನೇ ಅಲೆಗೆ ಹೊಣೆಗಾರರಾಗಿದ್ದಾರೆ, ಅವರಿಗೆ ಕೊರೊನಾ ಅರ್ಥ ಮಾಡಿಕೊಳ್ಳಲು ಆಗಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಲಾಕ್ ಡೌನ್ ನಲ್ಲಿ ಮದುವೆಯಾಗುತ್ತಿದ್ದವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಈ ರಾಜ್ಯ...!
ಕೋವಿಡ್ ಮತ್ತು ಲಾಕ್‌ಡೌನ್‌ಗಳಿಗೆ ಲಸಿಕೆಗಳು ಮಾತ್ರ ಶಾಶ್ವತ ಪರಿಹಾರವಾಗಿದೆ, ಸಾಮಾಜಿಕ ದೂರ ಮತ್ತು ಮುಖವಾಡಗಳು ತಾತ್ಕಾಲಿಕವಾದವು ಎಂದು ರಾಹುಲ್ ಗಾಂಧಿ ಹೇಳಿದರು, ಸರಿಯಾದ ವ್ಯಾಕ್ಸಿನೇಷನ್ ತಂತ್ರವಿಲ್ಲದೆ, ಭಾರತವು ಅನೇಕ ಅಲೆಗಳಿಗೆ ಸಾಕ್ಷಿಯಾಗಲಿದೆ ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.