close

News WrapGet Handpicked Stories from our editors directly to your mailbox

Video:ಇಂಗ್ಲೆಂಡ್ ನಲ್ಲಿ ತ್ರಿವರ್ಣ ಧ್ವಜ ಹರಿಯುತ್ತಿದ್ದ ಪಾಕ್ ಪ್ರತಿಭಟನಾಕಾರರಿಗೆ ಪತ್ರಕರ್ತೆ ಮಾಡಿದ್ದೇನು?

ಇಂಗ್ಲೆಂಡ್ ನಲ್ಲಿ  370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಭಾರತದ ಕ್ರಮವನ್ನು ಆಕ್ಷೇಪಿಸಿದ ಭಾರತೀಯ ಹೈಕಮಿಷನ್‌ನ ಹೊರಗೆ ಪಾಕಿಸ್ತಾನಿ ಮತ್ತು ಖಲಿಸ್ತಾನಿ ಬೆಂಬಲಿಗರ ಪ್ರತಿಭಟನೆ ನಡೆಸುತ್ತಿದ್ದರು.

Updated: Aug 18, 2019 , 02:43 PM IST
Video:ಇಂಗ್ಲೆಂಡ್ ನಲ್ಲಿ ತ್ರಿವರ್ಣ ಧ್ವಜ ಹರಿಯುತ್ತಿದ್ದ ಪಾಕ್ ಪ್ರತಿಭಟನಾಕಾರರಿಗೆ ಪತ್ರಕರ್ತೆ ಮಾಡಿದ್ದೇನು?
video grab(twitter)

ಲಂಡನ್: ಇಂಗ್ಲೆಂಡ್ ನಲ್ಲಿ  370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಭಾರತದ ಕ್ರಮವನ್ನು ಆಕ್ಷೇಪಿಸಿದ ಭಾರತೀಯ ಹೈಕಮಿಷನ್‌ನ ಹೊರಗೆ ಪಾಕಿಸ್ತಾನಿ ಮತ್ತು ಖಲಿಸ್ತಾನಿ ಬೆಂಬಲಿಗರ ಪ್ರತಿಭಟನೆ ನಡೆಸುತ್ತಿದ್ದರು.

ಇದೇ ವೇಳೆ ಅವರು ತ್ರಿವರ್ಣಧ್ವಜವನ್ನು ಪ್ರತಿಭಟನಾಕಾರರು ಹರಿದು ಹಾಕುತ್ತಿದ್ದರು. ತಕ್ಷಣ ಆಗ ಮಧ್ಯಪ್ರವೇಶಿಸಿದ ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್ ಸುದ್ದಿಸಂಸ್ಥೆ ಪತ್ರಕರ್ತೆ ಪೂನಂ ಜೋಷಿ ಪಾಕ್ ಪ್ರತಿಭಟನಾಕಾರರಿಂದ ತ್ರಿವರ್ಣಧ್ವಜವನ್ನು ಕಿತ್ತುಕೊಂಡಿದ್ದಾರೆ. ಈಗ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. 

ಈಗ ಈ ವೀಡಿಯೋವನ್ನು ಹಂಚಿಕೊಂಡು ಟ್ವೀಟ್ ಮಾಡಿರುವ ಪೂನಂ ಜೋಷಿ ' ಸಾವಿರಾರು ಆಡುಗಳನ್ನು 2 ಭಾರತೀಯ ಹುಲಿಗಳನ್ನು ಎದುರಿಸಲು ಕಳುಹಿಸಿದಾಗ ಇದೆ ಆಗುವುದು. ನೂರಾರು ಪಾಕಿಸ್ತಾನಿಗಳು ನಮ್ಮ ಧ್ವಜವನ್ನು ಹರಿದು ಹಾಕಿದರು,ಆದರೆ ಇದನ್ನು ವಾಪಸ್ ತರಲು ಒಬ್ಬ ಮಹಿಳೆ ಸಾಕಾಯಿತು. ಎಎನ್ಐ ಕಾರ್ಯಕ್ಕಾಗಿ ಹೋಗಿದ್ದೆ ಆದರೆ ದೇಶದ ಕರ್ತವ್ಯ ಮೊದಲ ಕರ್ತವ್ಯ' ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮೊದಲು ಬಿಜೆಪಿ ನಾಯಕಿ ಶಾಜಿಯಾ ಇಲ್ಮಿಯಾ ಭಾರತ ಹಾಗೂ ಪ್ರಧಾನಿ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದ ಪಾಕ್ ಪರ ಬೆಂಬಲಿಗರಿಗೆ ತಡೆಯೋಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದರು.