ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ, ಈ ಸೇವೆಯನ್ನು ಮತ್ತೆ ಆರಂಭಿಸಿದೆ ರೈಲು ಇಲಾಖೆ

ದೇಶಾದ್ಯಂತ ಅನ್ ಲಾಕ್ 2 ಘೋಷಣೆಯಾಗಿರುವ ಮಧ್ಯೆಯೇ ಭಾರತೀಯ ರೈಲು ವಿಭಾಗ ತನ್ನ ಯಾತ್ರಿಗಳಿಗೆ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ.

Last Updated : Jun 30, 2020, 06:43 PM IST
ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ, ಈ ಸೇವೆಯನ್ನು ಮತ್ತೆ ಆರಂಭಿಸಿದೆ ರೈಲು ಇಲಾಖೆ title=

ನವದೆಹಲಿ: ದೇಶಾದ್ಯಂತ ಅನ್ ಲಾಕ್ 2 ಘೋಷಣೆಯಾಗಿರುವ ಮಧ್ಯೆಯೇ ಭಾರತೀಯ ರೈಲು ವಿಭಾಗ ತನ್ನ ಯಾತ್ರಿಗಳಿಗೆ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಭಾರತೀಯ ರೇಲ್ವೆ ಇಲಾಖೆ ಜೂನ್ 29ರಿಂದ ಎಲ್ಲ ವಿಶೇಷ ರೈಲುಗಳಲ್ಲಿ ತನ್ನ ತತ್ಕಾಲ್ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯನ್ನು ಮತ್ತೆ ಆರಂಭಿಸಿದೆ. ದೇಶಾದ್ಯಂತ ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ಭಾರತೀಯ ರೇಲ್ವೆ ಇಲಾಖೆ ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸಿತ್ತು. ದೇಶಾದ್ಯಂತ ಮಾರ್ಚ್ 25 ರಿಂದ ಘೋಷಣೆಯಾದ ಲಾಕ್ ಡೌನ್ ಅವಧಿಯಲ್ಲಿ ರೇಲ್ವೆ ಇಲಾಖೆ ತನ್ನ ಪ್ಯಾಸೆಂಜರ್, ಮೇಲ್ ಹಾಗೂ ಎಕ್ಸ್ಪ್ರೆಸ್ ರೈಲುಗಳ ಸೇವೆ ಕೂಡ ಸ್ಥಗಿತಗೊಳಿಸಿತ್ತು.

ದೇಶದ ಅನ್‌ಲಾಕ್ ಮಾಡಿದ 2 ರಲ್ಲಿ ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಹೆಚ್ಚಿನ ಪರಿಹಾರ ನೀಡಿದೆ. ಭಾರತೀಯ ರೈಲ್ವೆ ಜೂನ್ 29 ರಿಂದ ಎಲ್ಲಾ ವಿಶೇಷ ರೈಲುಗಳಿಗೆ ತತ್ಕಾಲ್ ಟಿಕೆಟ್ ಕಾಯ್ದಿರಿಸುವಿಕೆಯನ್ನು ಪುನರಾರಂಭಿಸಿದೆ. ಕರೋನಾ ಸಾಂಕ್ರಾಮಿಕದ ಮಧ್ಯೆ ಈ ಸೌಲಭ್ಯವನ್ನು ಭಾರತೀಯ ರೈಲ್ವೆ ನಿಷೇಧಿಸಿದೆ. ಮಾರ್ಚ್ 25 ರಿಂದ ರೈಲ್ವೆ ಪ್ರಯಾಣಿಕ, ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳನ್ನು ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಸ್ಥಗಿತಗೊಳಿಸಿದೆ.

ಮೇ 31ರಂದು ಈ ಕುರಿತು ಹೇಳಿಕೆ ನೀಡಿದ್ದ ರೇಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಜೂನ್ 29ರಿಂದ ದೇಶಾದ್ಯಂತ ಎಲ್ಲಾ ಸ್ಪೆಷಲ್ ರೈಲುಗಳಲ್ಲಿ ತತ್ಕಾಲ್ ಕೋಟಾ ಟಿಕೆಟ್ ಬುಕಿಂಗ್ ಸೌಲಭ್ಯ ಮತ್ತೆ ಆರಂಭಿಸಳಗುವುದು ಎಂದಿದ್ದರು. ಮಂಗಳವಾರದಿಂದ ಚಲಿಸಬೇಕಿರುವ ವಿಶೇಷ ಟ್ರೈನ್ ಗಳಿಗೆ ಸೋಮವಾರ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಲಾಗಿತ್ತು.

ಈಗ ನೀವು ಒಂದು ದಿನ ಮುಂಚಿತವಾಗಿಯೂ ಕೂಡ ಟಿಕೆಟ್ ಬುಕ್ ಮಾಡಬಹುದು
ಭಾರತೀಯ ರೈಲಿನ ಈ ನಿರ್ಧಾರದ ಬಳಿಕ ಇದೀಗ ಪ್ರಯಾಣಿಕರು ಒಂದು ದಿನ ಮುಂಚಿತವಗಿಯೂ ಕೂಡ ತಮ್ಮ ಟಿಕೆಟ್ ಬುಕ್ ಮಾಡಬಹುದು. ನಿಮಯಗಳ ಅನುಸಾರ ಯಾವ ರೈಲುಗಳ ಸಂಖ್ಯೆ 0 ಯಿಂದ ಆರಂಭವಾಗುತ್ತದೆಯೋ, ಆ ರೈಲುಗಳಲ್ಲಿ ಈ ಸೌಕರ್ಯ ನಾಳೆಯಿಂದ ಆರಂಭಗೊಳ್ಳಲಿದೆ. ಇದಲ್ಲದೆ ರೇಲ್ವೆ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಕೂಡ ನೀವು ತತ್ಕಾಲ್ ಟಿಕೆಟ್ ಬುಕ್ ಮಾಡಬಹುದು. ಇದಲ್ಲದೆ ಯಾತ್ರೆಯ ವೇಳೆ ತತ್ಕಾಲ್ ನಲ್ಲಿ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ತಮ್ಮ ಜೊತೆಗೆ ಐಡಿ ಪ್ರೂಫ್ ಹೊಂದಿರುವುದು ಕಡ್ಡಾಯವಾಗಿದೆ  

ತತ್ಕಾಲ್ ಟಿಕೆಟ್ ಬುಕಿಂಗ್ ಎಸಿ ಸೀಟ್ ಗಳಿಗಾಗಿ ಬೆಳಗ್ಗೆ 10 ಗಂಟೆಗೆ ಹಾಗೂ ಸ್ಲೀಪರ್ ಕ್ಲಾಸ್ ಸೀಟ್ ಗಳಿಗಾಗಿ ಬೆಳಗ್ಗೆ 11 ಗಂಟೆಗೆ ಟಿಕೆಟ್ ಬುಕ್ ಮಾಡಬಹುದಾಗಿದೆ. ಕಳೆದ ತಿಂಗಳು ಭಾರತೀಯ ರೇಲ್ವೆ ಇಲಾಖೆ ಟಿಕೆಟ್ ಕೌಂಟರ್ ಗಳ ಮೇಲೆ 30 ದಿನ ಮುಂಚಿತವಾಗಿ ಟಿಕೆಟ್ ಬುಕಿಂಗ್ ಸೇವೆ ಆರಂಭಿಸಿತ್ತು. IRCTC ಅನುಸಾರ ಇದೀಗ 12೦ ದಿನಗಳು ಮುಂಚಿತವಾಗಿಯೂ ಕೂಡ ನೀವು ಮುಂಗಡ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ರೇಲ್ವೆ ವಿಭಾಗದ ವತಿಯಿಂದ ರದ್ದಾದ ಟ್ರೈನ್ ಗಳ ಟಿಕೆಟ್ ಹಣವನ್ನು ರೇಲ್ವೆ ಇಲಾಖೆ ಸಂಪೂರ್ಣ ಹಣ ಮರುಪಾವತಿಸಲಿದೆ. ಜೊತೆಗೆ 15 ಆಗಸ್ಟ್ ಗೂ ಮೊದಲು ಬುಕ್ ಮಾಡಲಾಗಿರುವ ಟಿಕೆಟ್ ಗಳ ಸಂಪೂರ್ಣ ಹಣ ಕೂಡ ರೇಲ್ವೆ ವಿಭಾಗ ಮರುಪಾವತಿ ಮಾಡಲಿದೆ.

Trending News