ಇನ್ನು ಮುಂದೆ ರಾಜಧಾನಿ ರೈಲಿನಲ್ಲಿ ಮಹಿಳೆಯರಿಗೆ ಸಿಗುತ್ತೆ ಈ ಸೌಲಭ್ಯ..!

ರಾಜಧಾನಿ, ಡ್ಯುರಾಂಟೊ ಮತ್ತು ಇತರ ಹವಾನಿಯಂತ್ರಿತ ರೈಲುಗಳಲ್ಲಿ ಮಹಿಳೆಯರಿಗೆ ಅಧಿಕ ಸೀಟು ಗಳನ್ನೂ ಮೀಸಲಿಡುವ ಅವಕಾಶವನ್ನು ಭಾರತೀಯ ರೈಲ್ವೆ ನೀಡಲಿದೆ.

Last Updated : Dec 4, 2018, 08:00 PM IST
ಇನ್ನು ಮುಂದೆ ರಾಜಧಾನಿ ರೈಲಿನಲ್ಲಿ ಮಹಿಳೆಯರಿಗೆ ಸಿಗುತ್ತೆ ಈ ಸೌಲಭ್ಯ..!  title=
file photo

ನವದೆಹಲಿ: ರಾಜಧಾನಿ, ಡ್ಯುರಾಂಟೊ ಮತ್ತು ಇತರ ಹವಾನಿಯಂತ್ರಿತ ರೈಲುಗಳಲ್ಲಿ ಮಹಿಳೆಯರಿಗೆ ಅಧಿಕ ಸೀಟು ಗಳನ್ನೂ ಮೀಸಲಿಡುವ ಅವಕಾಶವನ್ನು ಭಾರತೀಯ ರೈಲ್ವೆ ನೀಡಲಿದೆ.

ಈ ಬಗ್ಗೆ ಅಧಿಸೂಚನೆ ಹೊರಡಿಸಿರುವ ರೈಲ್ವೆ ಇಲಾಖೆ "ಎಲ್ಲಾ ರಾಜಧಾನಿ, ದುರೋಂಟೋ, ಹವಾನಿಯಂತ್ರಿತ ರೈಲುಗಳ 3 ಎಸಿ ತರಗತಿಯಲ್ಲಿ ಆರು ಬರ್ತ್ ನ ಮೀಸಲಾತಿ ಕೋಟಾವನ್ನು ಮಹಿಳೆಯರಿಗೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ರೈಲ್ವೆ ಇಲಾಖೆ ಅಧಿಕಾರಿಗಳ ಪ್ರಕಾರ  ಈ ಸುತ್ತೋಲೆಯನ್ನು ರೈಲ್ವೆ ಸಚಿವಾಲಯ ನವಂಬರ್ 30 ರಂದು ಹೊರಡಿಸಿದೆ ಎನ್ನಲಾಗಿದೆ.

ಈ ಕೋಟಾದ ಜೊತೆಗೆ ನಾಲ್ಕು ಕೆಳಗಿನ ಬರ್ತ್ ಗಳನ್ನು ಹಿರಿಯ ಪ್ರಯಾಣಿಕರು  45ವರ್ಷ ವಯಸ್ಸಿನ ಮಹಿಳೆಯರು ಮತ್ತು  ಗರ್ಭಿಣಿ ಮಹಿಳೆಯರಿಗೆ ನೀಡಲಾಗುವುದು ಎಂದು ಸುತ್ತೋಲೆ ತಿಳಿಸಿದೆ.ಸದ್ಯ ಈ ನಿಯಮವನ್ನು ಪ್ರತಿ ಮೇಲ್ ಅಥವಾ ಎಕ್ಸ್ಪ್ರೆಸ್ ರೈಲಿನಲ್ಲಿ ಮಹಿಳೆಯರಿಗೆ ಸ್ಲೀಪರ್ ವಿಭಾಗದಲ್ಲಿ ಮಾತ್ರ ಅನ್ವಯವಾಗುತ್ತಿತ್ತು ಈಗ ಅದನ್ನು ಎಸಿ ಕೋಚ್ ಗಳಿಗೂ ಸಹಿತ ವಿಸ್ತರಿಸಲಾಗಿದೆ ಎಂದು ತಿಳಿಸಲಾಗಿದೆ.  

 

Trending News