close

News WrapGet Handpicked Stories from our editors directly to your mailbox

2022 ರ ಅಂತ್ಯದ ವೇಳೆಗೆ ಶೇ 100 ರಷ್ಟು ವಿದ್ಯುತ್ತೀಕರಣದತ್ತ ಭಾರತೀಯ ರೈಲ್ವೆ

ಭಾರತೀಯ ರೈಲ್ವೆ 2022 ರ ಅಂತ್ಯದ ವೇಳೆಗೆ 100% ವಿದ್ಯುತ್ತೀಕರಣಕ್ಕೆ ಹೋಗುವ ಗುರಿಯನ್ನು ಹೊಂದಿದೆ. ಇದರೊಂದಿಗೆ, ಭಾರತೀಯ ರೈಲ್ವೆ ಎಲ್ಲಾ ಡೀಸೆಲ್ ಲೋಕೋಮೋಟಿವ್‌ಗಳನ್ನು ದೂರವಿಡುವುದು ಮತ್ತು ರೈಲುಗಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.

Updated: Aug 17, 2019 , 07:52 PM IST
2022 ರ ಅಂತ್ಯದ ವೇಳೆಗೆ ಶೇ 100 ರಷ್ಟು ವಿದ್ಯುತ್ತೀಕರಣದತ್ತ ಭಾರತೀಯ ರೈಲ್ವೆ
file photo

ನವದೆಹಲಿ: ಭಾರತೀಯ ರೈಲ್ವೆ 2022 ರ ಅಂತ್ಯದ ವೇಳೆಗೆ 100% ವಿದ್ಯುತ್ತೀಕರಣಕ್ಕೆ ಹೋಗುವ ಗುರಿಯನ್ನು ಹೊಂದಿದೆ. ಇದರೊಂದಿಗೆ, ಭಾರತೀಯ ರೈಲ್ವೆ ಎಲ್ಲಾ ಡೀಸೆಲ್ ಲೋಕೋಮೋಟಿವ್‌ಗಳನ್ನು ದೂರವಿಡುವುದು ಮತ್ತು ರೈಲುಗಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.

ರೈಲ್ವೆ ಸಂಪರ್ಕವನ್ನು 100% ರಷ್ಟು ವಿದ್ಯುದ್ದೀಕರಣಗೊಳಿಸಿದ ನಂತರ, ರೈಲುಗಳಿಂದ ಹೊರಹೊಮ್ಮುವ ಮಾಲಿನ್ಯವು ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇದಲ್ಲದೆ, ಎಲ್ಲಾ ಮಾರ್ಗಗಳು ವಿದ್ಯುದ್ದೀಕರಣಕ್ಕೆ ಹೋದ ನಂತರ ದೇಶದಲ್ಲಿ ಚಲಿಸುವ ರೈಲುಗಳ ಸರಾಸರಿ ವೇಗವೂ ಹೆಚ್ಚಾಗುತ್ತದೆ. ಡೀಸೆಲ್‌ಗಳ ಬೆಲೆಯಲ್ಲಿ ಉಳಿತಾಯವಾಗುವುದರೊಂದಿಗೆ ರೈಲುಗಳ ನಿರ್ವಹಣಾ ವೆಚ್ಚವೂ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.ಈ ನಿಟ್ಟಿನಲ್ಲಿ ಆರಂಭಿಕ ಹಂತಗಳನ್ನು ಈಗಾಗಲೇ ಭಾರತೀಯ ರೈಲ್ವೆ ಪ್ರಾರಂಭಿಸಿದೆ ಎನ್ನಲಾಗಿದೆ.

ಇದಕ್ಕಾಗಿ ಸಿದ್ಧತೆಗಳನ್ನು ಪ್ರಾರಂಭಿಸಲು ರೈಲ್ವೆ ಮಂಡಳಿ ಈಗಾಗಲೇ ಎಲ್ಲಾ ವಲಯಗಳಿಗೆ ನಿರ್ದೇಶನ ನೀಡಿದ್ದು. 31 ವರ್ಷದ ಡೀಸೆಲ್ ಲೋಕೋಮೋಟಿವ್‌ಗಳನ್ನು ಹಂತ ಹಂತವಾಗಿ ಬಳಸುವುದನ್ನು ನಿಲ್ಲಿಸುವಂತೆ ಕೇಳಿಕೊಳ್ಳಲಾಗಿದೆ. ಉತ್ತರ ರೈಲ್ವೆ ಭಾಗವು  ಇದನ್ನು ಆರಂಭಿಕ ಹಂತದಲ್ಲಿ ಜಾರಿಗೊಳಿಸಲಿದೆ ಎನ್ನಲಾಗಿದೆ. ಭಾರತೀಯ ರೈಲ್ವೆಯ ಮೂಲಗಳ ಪ್ರಕಾರ, ಒಮ್ಮೆ ಡೀಸೆಲ್ ಎಂಜಿನ್ 25-30 ವರ್ಷಗಳವರೆಗೆ ಬಳಕೆಯಲ್ಲಿದ್ದರೆ, ಅದರ ದಕ್ಷತೆಯು ಗಣನೀಯವಾಗಿ ಕಡಿಮೆಯಾಗುತ್ತದೆ. ಅಲ್ಲದೆ, ಅಂತಹ ಎಂಜಿನ್‌ಗಳ ನಿರ್ವಹಣೆಗೆ ಆಗುವ ವೆಚ್ಚವು ಅಧಿಕವಾಗಲಿದೆ.ಆದ್ದರಿಂದ ಅವುಗಳ ಬಳಕೆ ಪ್ರಮಾಣವನ್ನು ತಗ್ಗಿಸಲಾಗುವುದು ಎನ್ನಲಾಗಿದೆ.