ನವದೆಹಲಿ: Indian Railways New Guidelines - ಹೆಚ್ಚುತ್ತಿರುವ ಕೊರೊನಾ ವೈರಸ್ (Coronavirus) ಸೋಂಕಿನ ಕಾರಣ, ರೈಲ್ವೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ, ಕೊರೊನಾ ವೈರಸ್‌ನಿಂದಾಗಿ ಜನರ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕೊರೊನಾ ವೈರಸ್‌ನಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ಕೂಡ ಕಟ್ಟುನಿಟ್ಟಾಗಿದೆ. ಮತ್ತೊಮ್ಮೆ ಕೊರೊನಾ ವೈರಸ್ ಹರಡಲು ಆರಂಭಿಸಿದೆ. ಮೂರನೇ ಅಲೆ ತನ್ನ ರೂಪ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಮತ್ತೊಮ್ಮೆ ಕೋವಿಡ್‌ನ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.


COMMERCIAL BREAK
SCROLL TO CONTINUE READING

ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ
ದೇಶದಲ್ಲಿ ಕೊರೊನಾ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ. ಎಲ್ಲಾ ರಾಜ್ಯ ಸರ್ಕಾರಗಳು ತಮ್ಮದೇ ಆದ ಮಟ್ಟದಲ್ಲಿ ನಿರ್ಬಂಧಗಳನ್ನು ಹೇರುತ್ತಿವೆ. ಹೆಚ್ಚುತ್ತಿರುವ ಸೋಂಕಿನಿಂದಾಗಿ ಅನೇಕ ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿವೆ. ಇದೇ ವೇಳೆ , ಕೆಲವು ರಾಜ್ಯಗಳಲ್ಲಿ, ರೈಲ್ವೆ ಮತ್ತು ಇತರ ಸಂಚಾರದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ. ಇದರ ಅಡಿಯಲ್ಲಿ, ಹೆಚ್ಚುತ್ತಿರುವ ಕರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆಯೂ ಕೂಡ ಇದೀಗ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.


ಇದನ್ನೂ ಓದಿ-ಕುಡಿದ ಅಮಲಿನಲ್ಲಿ ಪಾರ್ಶ್ವವಾಯು ಪೀಡಿತ ಮಗನನ್ನು ಹೊಡೆದು ಕೊಂದ ತಂದೆ


ವ್ಯಾಕ್ಸಿನೇಷನ್ ಇಲ್ಲದೆ ರೈಲಿನಲ್ಲಿ ಪ್ರವೇಶ ಲಭ್ಯವಿರುವುದಿಲ್ಲ
ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವವರಿಗೆ ದಕ್ಷಿಣ ರೈಲ್ವೆ ಹೊಸ ನಿಯಮ ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಕರೋನಾ ಲಸಿಕೆ ಪಡೆಯದೆ ನಿಲ್ದಾಣ ಅಥವಾ ರೈಲಿಗೆ ಪ್ರವೇಶವನ್ನು ನೀಡಲಾಗುವುದಿಲ್ಲ. ಸ್ಥಳೀಯ ರೈಲುಗಳಲ್ಲಿ 'ನೋ ವ್ಯಾಕ್ಸಿನ್, ನೋ ಎಂಟ್ರಿ' ನೀತಿಯನ್ನು ಜಾರಿಗೆ ತರಲಾಗಿದೆ. ಅಂದರೆ, ಪ್ರಯಾಣಿಕರಿಗೆ ಲಸಿಕೆಯ ಎರಡು ಪ್ರಮಾಣಗಳನ್ನು ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಹೀಗಿರುವಾಗ ಪ್ರಯಾಣಿಕರು ಒಂದೇ ಡೋಸ್ (Vaccination) ತೆಗೆದುಕೊಂಡಿದ್ದರೂ, ಅವರಿಗೆ ರೈಲಿನಲ್ಲಿ ಪ್ರಯಾಣಿಸಲು ಪ್ರವೇಶ ನೀಡಲಾಗುವುದಿಲ್ಲ.


ಇದನ್ನೂ ಓದಿ-Vaccine Certificate: ಕರೋನಾ ಲಸಿಕೆ ಪ್ರಮಾಣಪತ್ರದಲ್ಲಿ ಕಾಣಿಸುವುದಿಲ್ಲ ಪ್ರಧಾನಿ ಮೋದಿಯವರ ಚಿತ್ರ, ಕಾರಣ!


ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ತೋರಿಸಬೇಕು
ರೈಲ್ವೇ ಪ್ರಯಾಣಿಕರು ಕರೋನಾಗೆ ಸಂಬಂಧಿಸಿದಂತೆ ಹೊರಡಿಸಲಾದ ಮಾರ್ಗಸೂಚಿಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ ಎಂದು ರೈಲ್ವೆ ಹೇಳಿದೆ. ಪ್ರಯಾಣ ಟಿಕೆಟ್ ಅಥವಾ ಮಾಸಿಕ ಸೀಸನ್ ಟಿಕೆಟ್ (MST) ನೀಡುವಾಗ ಪ್ರಯಾಣಿಕರು ಲಸಿಕೆ ಪ್ರಮಾಣಪತ್ರವನ್ನು ತೋರಿಸುವುದು ಕಡ್ಡಾಯವಾಗಿರುತ್ತದೆ. ಲಸಿಕೆ ಪ್ರಮಾಣ ಪತ್ರ ಹೊಂದಿರುವವರಿಗೆ ಮಾತ್ರ ಟಿಕೆಟ್ ನೀಡಲಾಗುವುದು. ದಕ್ಷಿಣ ರೈಲ್ವೆಯ ಈ ಕ್ರಮವನ್ನು ಗಮನದಲ್ಲಿಟ್ಟುಕೊಂಡು, ಇತರ ಸ್ಥಳಗಳಲ್ಲಿಯೂ ಇದೇ ರೀತಿಯ ನಿಯಮಗಳನ್ನು ಇಲಾಖೆ ಜಾರಿಗೆ ತರಬಹುದು.


ಇದನ್ನೂ ಓದಿ-Booster Dose Guideline: ಇಂದಿನಿಂದ ಇಡೀ ದೇಶದಲ್ಲಿ ಬೂಸ್ಟರ್ ಡೋಸ್ ಲಸಿಕೆ ಲಭ್ಯ, ಈ ಪ್ರಮುಖ ನಿಯಮಗಳನ್ನು ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.