ವೇದಿಕೆಯಲ್ಲೇ ಭಾರತೀಯ ಮೂಲದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸಾವು

ಭಾರತೀಯ ಮೂಲದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಅತಿಯಾದ ಉತ್ಸುಕತೆಯಿಂದಾಗಿ ವೇದಿಕೆಯಲ್ಲಿಯೇ ಮೃತಪಟ್ಟಿದ್ದಾನೆ ಮಾಧ್ಯಮವೊಂದು ವರದಿ ಮಾಡಿದೆ.

Last Updated : Jul 21, 2019, 01:59 PM IST
ವೇದಿಕೆಯಲ್ಲೇ ಭಾರತೀಯ ಮೂಲದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸಾವು   title=
Photo courtesy: Facebook

ದುಬೈ: ಭಾರತೀಯ ಮೂಲದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಅತಿಯಾದ ಉತ್ಸುಕತೆಯಿಂದಾಗಿ ವೇದಿಕೆಯಲ್ಲಿಯೇ ಮೃತಪಟ್ಟಿದ್ದಾನೆ ಮಾಧ್ಯಮವೊಂದು ವರದಿ ಮಾಡಿದೆ.

ಮೃತಪಟ್ಟಿರುವ ಕಾಮಿಡಿಯನ್ 36 ರ ಹರೆಯದ ಮಂಜುನಾಥ್ ನಾಯ್ಡು ಎಂದು ಗುರುತಿಸಲಾಗಿದೆ. ಶುಕ್ರವಾರದಂದು ವೇದಿಕೆ ಮೇಲೆ ಅತಿಯಾದ ಉತ್ಸುಕತೆಯಿಂದಾಗಿ ಅವರಿಗೆ ಹೃದಯಾಘಾತವಾಗಿದೆ. ಆಗ ಅವರು ಪಕ್ಕದ ಬೆಂಚ್ ಮೇಲೆ ಕುಳಿತು ನೆಲದ ಮೇಲೆ ಕುಸಿದುಬಿದ್ದರು ಎನ್ನಲಾಗಿದೆ. ಆದರೆ ಪ್ರೇಕ್ಷಕರು ಇದನ್ನು  ಪ್ರದರ್ಶನದ ಒಂದು ಭಾಗವಾಗಿರಬೇಕು ಎಂದು ಭಾವಿಸಿದ್ದರು ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.

ಅಬುಧಾಬಿಯಲ್ಲಿ ಜನಿಸಿದ ಅವರು ಮುಂದೆ ತಮ್ಮ ನೆಲೆಯನ್ನು ದುಬೈಗೆ ಸ್ಥಳಾಂತರಿಸಿದ್ದರು.ಅವರು ವೇದಿಕೆಯ ಮೇಲೆ ಹೋಗಿ ತಮ್ಮ ಕಥೆಗಳೊಂದಿಗೆ ಜನರನ್ನು ನಗಿಸುತ್ತಿದ್ದರು. ಅವರು ತಮ್ಮ ತಂದೆ ಮತ್ತು ಕುಟುಂಬದ ಬಗ್ಗೆ ಮಾತನಾಡುತ್ತಿದ್ದರು. ತದನಂತರ ಅವರು ಆತಂಕದಿಂದ ಹೇಗೆ ಬಳಲುತ್ತಿದ್ದಾರೆ ಎಂಬ ಕಥೆ ಹೇಳುತ್ತಾ ಹೊರಟರು. ಕಥೆ ಪ್ರಾರಂಭವಾದ ಒಂದು ನಿಮಿಷದಲ್ಲಿ ಅವರು ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. 

ಜನರು ಇದನ್ನು ಕೃತ್ಯದ ಭಾಗವೆಂದು ಭಾವಿಸಿದ್ದರು. ಅವರು ಆತಂಕದ ಬಗ್ಗೆ ಮಾತನಾಡುತ್ತಿದ್ದಾಗ ಅವರು ಅದನ್ನು ತಮಾಷೆಯಾಗಿ ತೆಗೆದುಕೊಂಡು ನಂತರ ಕುಸಿದುಬಿದ್ದರು ಎಂದು ಅವರು ಹೇಳಿದರು. ಅವರ ಪೋಷಕರು ತಿರಿಕೊಂಡಿದ್ದಾರೆ. ಅವರಿಗೆ ಸಹೋದರನಿದ್ಧಾನೆ. ಆದರೆ ಅವರಿಗೆ ಇಲ್ಲಿ ಯಾವುದೇ ಸಂಬಂಧಿಕರು ಇಲ್ಲ ಎನ್ನಲಾಗಿದೆ.
 

Trending News