ಹಿಮಾಚಲ ಪ್ರದೇಶದ ಕಿನ್ನೌರ್ನಲ್ಲಿ ಮತ ಚಲಾಯಿಸಿದ ಭಾರತದ ಮೊದಲ ಮತದಾರ ಶ್ಯಾಮ್ ಸರನ್ ನೇಗಿ

102ರ ಹರೆಯದಲ್ಲೂ ಬಹಳ ಉತ್ಸುಕರಾಗಿ ಮತ ಚಲಾಯಿಸಲು ಮಾಂಡಿಯ ಕಲ್ಪಾ ಮತಗಟ್ಟೆಗೆ ಆಗಮಿಸಿದ ಭಾರತದ ಮೊದಲ ಮತದಾರ ಶ್ಯಾಮ್ ಸರನ್ ನೇಗಿ ಅವರನ್ನು ಚುನಾವಣಾ ಸಿಬ್ಬಂದಿ ಸ್ವಾಗತಿಸಿದರು.

Last Updated : May 19, 2019, 03:54 PM IST
ಹಿಮಾಚಲ ಪ್ರದೇಶದ ಕಿನ್ನೌರ್ನಲ್ಲಿ ಮತ ಚಲಾಯಿಸಿದ ಭಾರತದ ಮೊದಲ ಮತದಾರ ಶ್ಯಾಮ್ ಸರನ್ ನೇಗಿ

ಶಿಮ್ಲಾ: 102ರ ಹರೆಯದಲ್ಲೂ ಮಂದ ದೃಷ್ಟಿ ಮತ್ತು ಮಂಡಿ ನೋವಿನ ಹೊರತಾಗಿಯೂ  ಭಾರತದ ಮೊದಲ ಮತದಾರ ಶ್ಯಾಮ್ ಸರನ್ ನೇಗಿ ಬಹಳ ಉತ್ಸುಕರಾಗಿ ಮತ ಚಲಾಯಿಸಲು ಮಾಂಡಿಯ ಕಲ್ಪಾ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು.

ಹಿಮಾಚಲ ಪ್ರದೇಶದ ಬುಡಕಟ್ಟು ಜಿಲ್ಲೆಯ ಕಿನ್ನೌರ್ ನಿವಾಸಿ ಶ್ಯಾಮ್ ಸರನ್ ನೇಗಿ ಭಾರತದ ಮೊದಲ ಮತದಾರರಾಗಿದ್ದು, ರಾಜ್ಯ ಚುನಾವಣಾ ಇಲಾಖೆಗೆ ಬಹಳ ಮುಖ್ಯವಾಗಿದೆ ಎಂದು ಕಿನ್ನೌರ್ ಜಿಲ್ಲಾ ಚುನಾವಣಾ ಅಧಿಕಾರಿ ಗೋಪಾಲ್ ಚಂದ್ ಪಿಟಿಐಗೆ ತಿಳಿಸಿದ್ದಾರೆ. ಅಧಿಕೃತ ದಾಖಲೆಗಳ ಪ್ರಕಾರ  ನಿವೃತ್ತ ಶಾಲಾ ಶಿಕ್ಷಕರಾಗಿರುವ ನೇಗಿ, ಜುಲೈ 1, 1917 ರಂದು ತನ್ನ ಜನಿಸಿದರು. ಇವರು 1952 ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ತೆರಳಬೇಕಾಗಿದ್ದ ಕಾರಣ ಬೆಳಿಗ್ಗೆಯೇ ತೆರಳಿ ತಮ್ಮ ಮತ ಚಲಾಯಿಸಿರುವುದನ್ನು ಇನ್ನೂ ನೆನಪಿಸಿಕೊಳ್ಳುತ್ತಾರೆ.

"ಭಾರತದ ಪ್ರಥಮ ಚುನಾವಣೆ ಫೆಬ್ರವರಿ 1952 ರಲ್ಲಿ ನಡೆಯಿತು, ಆದರೆ ಹಿಮಾಚಲ ಪ್ರದೇಶದಲ್ಲಿ ರಿಮೋಟ್, ಬುಡಕಟ್ಟು ಪ್ರದೇಶಗಳಲ್ಲಿ ಚಳಿಗಾಲದ ಸಮಯದಲ್ಲಿ ವಾತಾವರಣದ ಏರುಪೇರಿನ ಕಾರಣ ಇಲ್ಲಿ ಮತದಾನವು ಐದು ತಿಂಗಳು ಮುಂಚಿತವಾಗಿ ಅಕ್ಟೋಬರ್ 23, 1951 ರಂದು ನಡೆಯಿತು." ಎಂದು ಹೇಳಿದರು. ನಾನು ಶಾಲಾ ಶಿಕ್ಷಕನಾಗಿದ್ದೆ ಮತ್ತು ಚುನಾವಣಾ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಹೀಗಾಗಿ, ನಾನು ಕಿನ್ನೌರ್ನ ಕಲ್ಪಾ ಪ್ರೈಮರಿ ಶಾಲೆಯಲ್ಲಿ ನನ್ನ ಮತ ಚಲಾಯಿಸಲು 7 ಗಂಟೆಗೆ ನನ್ನ ಮತದಾನ ಬೂತ್ಗೆ ತಲುಪಿದ್ದೆ. ಮತವನ್ನು ಚಲಾಯಿಸುವ ಮೊದಲ ವ್ಯಕ್ತಿ ನಾನು" ಎಂದು ಅವರು ತಮ್ಮ ಮೊದಲ ಮತದಾನದ ಬಗ್ಗೆ ಮೆಲುಕು ಹಾಕಿದರು.
 

More Stories

Trending News