ಈ ನಗರದಲ್ಲಿ ನಿರ್ಮಾಣವಾಗಲಿದೆ ಭಾರತದ ಅತಿ ದೊಡ್ಡ 16 ಅಂತಸ್ತಿನ ಬಹುಮಾದರಿ ರೈಲು ನಿಲ್ದಾಣ..!

ಭಾರತದ ಹವಾಮಾನ ಮತ್ತು ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಈ ತಂತ್ರಜ್ಞಾನವನ್ನು ವಿಶೇಷವಾಗಿ ಮಾರ್ಪಡಿಸಲಾಗಿದೆ

Written by - Manjunath Naragund | Last Updated : Dec 7, 2025, 10:01 AM IST
  • ಭಾರತದ ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಈ ತಂತ್ರಜ್ಞಾನವನ್ನು ವಿಶೇಷವಾಗಿ ಮಾರ್ಪಡಿಸಲಾಗಿದೆ
  • ಭಾರತ ಮತ್ತು ಜಪಾನ್ ಸರ್ಕಾರಗಳ ನಡುವಿನ ಸಹಕಾರ
  • ಅಹಮದಾಬಾದ್‌ನ ಈ 16 ಅಂತಸ್ತು ನಿಲ್ದಾಣ ಅದರ ಕೇಂದ್ರಬಿಂದುವಾಗಲಿದೆ.
ಈ ನಗರದಲ್ಲಿ ನಿರ್ಮಾಣವಾಗಲಿದೆ ಭಾರತದ ಅತಿ ದೊಡ್ಡ 16 ಅಂತಸ್ತಿನ ಬಹುಮಾದರಿ ರೈಲು ನಿಲ್ದಾಣ..!

ಅಹಮದಾಬಾದ್: ಭಾರತೀಯ ರೈಲ್ವೆ ಇತಿಹಾಸದಲ್ಲಿ ಮತ್ತೊಂದು ಮೈಲುಗಲ್ಲು ಸೃಷ್ಟಿಸುವತ್ತ ಸಾಗುತ್ತಿದೆ. ದೇಶದ 7,000ಕ್ಕೂ ಹೆಚ್ಚು ರೈಲು ನಿಲ್ದಾಣಗಳ ನಡುವೆ ಎದ್ದು ಕಾಣಲಿರುವ 16 ಅಂತಸ್ತುಗಳ ಆಧುನಿಕ ಬಹುಮಾದರಿ ಸಾರಿಗೆ ಕೇಂದ್ರವನ್ನು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಿರ್ಮಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ.ಈ ನಿಲ್ದಾಣ ಕೇವಲ ಸಾಮಾನ್ಯ ರೈಲ್ವೆ ಸ್ಟೇಷನ್ ಅಲ್ಲ, ಬದಲಿಗೆ ಏಕಕಾಲದಲ್ಲಿ ನಾಲ್ಕು ಸಾರಿಗೆ ವ್ಯವಸ್ಥೆಗಳನ್ನು ಒಳಗೊಂಡ ಬಹುಮಾದರಿ ಸಂಪರ್ಕ ಕೇಂದ್ರ (Multi-Modal Transport Hub) ಆಗಿ ವಿನ್ಯಾಸಗೊಂಡಿದೆ.

Add Zee News as a Preferred Source

ಇದನ್ನೂ ಓದಿ: 21 ಬಾರಿ ಹೆಸರು ಬದಲಿಸಿಕೊಂಡ ಭಾರತದ ಏಕೈಕ ನಗರ ಯಾವುದು ಗೊತ್ತಾ?

ಒಂದೇ ಸ್ಥಳದಲ್ಲಿ ಲಭ್ಯವಿರುವ ಸೇವೆಗಳು:

  • ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ಬುಲೆಟ್ ರೈಲು
  • ಸಾಮಾನ್ಯ ರೈಲ್ವೆ ಸೇವೆಗಳು
  • ಅಹಮದಾಬಾದ್ ಮೆಟ್ರೋ ರೈಲು
  • ಬಿಆರ್‌ಟಿಎಸ್ ಮತ್ತು ನಗರ ಬಸ್ ಸೇವೆಗಳು

ಈ ವ್ಯವಸ್ಥೆಯಿಂದ ಪ್ರಯಾಣಿಕರು ಒಂದು ಸಾರಿಗೆಯಿಂದ ಮತ್ತೊಂದಕ್ಕೆ ಬದಲಾಯಿಸುವಾಗ ಸಮಯ ಮತ್ತು ಶ್ರಮ ಉಳಿತಾಯವಾಗಲಿದೆ. ಪ್ರಯಾಣ ಇನ್ನಷ್ಟು ಸುಲಭ ಮತ್ತು ಸುರಕ್ಷಿತವಾಗಲಿದೆ.ಈ ಭವ್ಯ ನಿಲ್ದಾಣವು ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್ ಯೋಜನೆಯ ಪ್ರಮುಖ ಭಾಗವಾಗಿದೆ. ಜಪಾನ್‌ನ ಪ್ರಸಿದ್ಧ ಶಿಂಕನ್ಸೆನ್ (Shinkansen) ತಂತ್ರಜ್ಞಾನವನ್ನು ಬಳಸಿಕೊಂಡು ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಇದನ್ನೂ ಓದಿ: ಬಾಡಿಗೆ ವಿಮಾನದಿಂದ ಆರಂಭವಾದ "ಇಂಡಿಗೋ" ಸಂಸ್ಥೆ! ಜಗತ್ತಿಗೆ ಅಚ್ಚರಿ ನೀಡುವಂತೆ ದೇಶದ ನಂಬರ್ 1 ಏರ್‌ಲೈನ್‌ ಆಗಿದ್ದು ಹೇಗೆ?

ಭಾರತದ ಹವಾಮಾನ ಮತ್ತು ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಈ ತಂತ್ರಜ್ಞಾನವನ್ನು ವಿಶೇಷವಾಗಿ ಮಾರ್ಪಡಿಸಲಾಗಿದೆ.ಭಾರತ ಮತ್ತು ಜಪಾನ್ ಸರ್ಕಾರಗಳ ನಡುವಿನ ಈ ಐತಿಹಾಸಿಕ ಸಹಕಾರದಿಂದ ದೇಶದ ಮೊದಲ ಬುಲೆಟ್ ರೈಲು ಯೋಜನೆ ವೇಗ ಪಡೆದುಕೊಂಡಿದ್ದು, ಅಹಮದಾಬಾದ್‌ನ ಈ 16 ಅಂತಸ್ತು ನಿಲ್ದಾಣ ಅದರ ಕೇಂದ್ರಬಿಂದುವಾಗಲಿದೆ.ಈ ಯೋಜನೆಯು ಪೂರ್ಣಗೊಂಡ ನಂತರ ಅಹಮದಾಬಾದ್ ರೈಲು ನಿಲ್ದಾಣವು ಏಷ್ಯಾದ ಅತ್ಯಂತ ಆಧುನಿಕ ಮತ್ತು ದೊಡ್ಡ ಬಹುಮಾದರಿ ಸಾರಿಗೆ ಕೇಂದ್ರಗಳಲ್ಲಿ ಒಂದಾಗಲಿದೆ.

About the Author

Trending News