ಮೋದಿ ನೂತನ ಕ್ಯಾಬಿನೆಟ್ ನಲ್ಲಿ ಅರುಣ್ ಜೈಟ್ಲಿಗಿಲ್ಲ ಹಣಕಾಸು ಸಚಿವ ಸ್ಥಾನ
2019 ರ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಪ್ರಧಾನಿ ಮೋದಿ ಸರ್ಕಾರದ ನೂತನ ಕ್ಯಾಬಿನೆಟ್ ನಲ್ಲಿ ಅರುಣ್ ಜೈಟ್ಲಿ ಗೆ ಮತ್ತೆ ಹಣಕಾಸು ಹುದ್ದೆ ಸಿಗುವುದು ಅನುಮಾನ ಎಂದು ಮೂಲಗಳು ತಿಳಿಸಿವೆ
ನವದೆಹಲಿ: 2019 ರ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಪ್ರಧಾನಿ ಮೋದಿ ಸರ್ಕಾರದ ನೂತನ ಕ್ಯಾಬಿನೆಟ್ ನಲ್ಲಿ ಅರುಣ್ ಜೈಟ್ಲಿ ಗೆ ಮತ್ತೆ ಹಣಕಾಸು ಹುದ್ದೆ ಸಿಗುವುದು ಅನುಮಾನ ಎಂದು ಮೂಲಗಳು ತಿಳಿಸಿವೆ
ಸುದ್ದಿ ಮೂಲಗಳ ಪ್ರಕಾರ ಅನಾರೋಗ್ಯದ ಕಾರಣದಿಂದಾಗಿ ಜೈಟ್ಲಿ ಹಣಕಾಸು ಹುದ್ದೆಯಾಗಲಿ ಅಥವಾ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುವುದು ಸಾಧ್ಯವಿಲ್ಲವೆಂದು ಹೇಳಲಾಗುತ್ತದೆ.ಹೆಸರು ಹೇಳಲಿಚ್ಚಿದ ನಾಯಕರೊಬ್ಬರು ಹೇಳುವಂತೆ " ಅವರು ಖಂಡಿತವಾಗಿಯೂ ಅನಾರೋಗ್ಯದ ಹಿನ್ನಲೆಯಲ್ಲಿ ಹಣಕಾಸು ಹುದ್ದೆ ಜವಾಬ್ದಾರಿಯನ್ನು ವಹಿಸುವುದಿಲ್ಲ " ಎಂದು ತಿಳಿಸಿದ್ದಾರೆ. ಒಂದು ವೇಳೆ ಯಾವುದಾದರೂ ಜವಾಬ್ದಾರಿ ವಹಿಸುವುದಾದಲ್ಲಿ ಕಡಿಮೆ ಒತ್ತಡವಿರುವ ಕೆಲಸವನ್ನು ಅವರು ನಿರ್ವಹಿಸಲಿದ್ದಾರೆ" ಎಂದು ಹೇಳಿದ್ದಾರೆ.
ಈ ಕುರಿತಾಗಿ ಜೈಟ್ಲಿಯವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಯಾವುದೇ ಮೆಸೇಜ್ ಅಗಲಿ ಅಥವಾ ಕರೆಯನ್ನಾಗಲಿ ಅವರು ಸ್ವೀಕರಿಸುತ್ತಿಲ್ಲ ಅವರ ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ ಎನ್ನಲಾಗಿದೆ. ಜೈಟ್ಲಿ ಅವರ ವಿಶೇಷ ಕರ್ತ್ಯವ್ಯದ ಅಧಿಕಾರಿ ಪರಸ್ ಸಂಕ್ಲಾ ಅವರು ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ.